
ಇಸ್ಲಮಾಬಾದ್,ಏ.27- ಭಾರತದ ವಿರುದ್ಧ ಯುದ್ಧ ಮಾಡುವ ಸ್ಥಿತಿಯಲ್ಲಿ ಪಾಕಿಸ್ತಾನಿ ಸೇನೆಯಾಗಲಿ ಅಥವಾ ಟ್ಯಾಂಕ್‍ಗಳಾಗಲಿ ಇಲ್ಲ ಎಂದು ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಹೇಳಿದ್ದಾರೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪದಚ್ಯುತಿಗೆ ಕಾರಣರಾದ ಜನರಲ್ ಬಜ್ವಾ ಅವರೇ ಈ ವಿಷಯವನ್ನು ಹೊರ ಹಾಕಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದು ಸಂವಿಧಾನದ 370 ನೇ ವಿಧಿಯ ರದ್ದತಿ ಮತ್ತು ಬಾಲಾಕೋಟ್ ವೈಮಾನಿಕ ದಾಳಿಯ ಎರಡು ನಿರ್ಣಾಯಕ ಘಟನೆಗಳ ಸಮಯದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿದ್ದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಈ ವಿಷಯ ಹೊರ ಹಾಕಿದ್ದಾರೆ.
ಭಾರತದ “ಪಾಕಿಸ್ತಾನದ ಸೇನೆ ಅಥವಾ ಅದರ ಟ್ಯಾಂಕ್‍ಗಳ ವಿರುದ್ಧ ಯುದ್ಧ ಮಾಡುವ ಸಾಮಥ್ರ್ಯ ಹೊಂದಿಲ್ಲ” ಎಂದು ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನದ ಪತ್ರಕರ್ತರಾದ ಹಮೀದ್ ಮಿರ್ ಮತ್ತು ನಸೀಮ್ ಝೆಹ್ರಾ ಅವರ ಜೊತೆ ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಜನರ; ಬಾಜ್ವಾ ಈ ವಿಷಯ ಖಚಿತ ಪಡಿಸಿದ್ದು “ಪಾಕಿಸ್ತಾನದ ಸೇನೆ ಮತ್ತು ಯುದ್ಧ ಟ್ಯಾಂಕ್‍ಗಳು ಹೋರಾಡುವ ಸ್ಥಿತಿಯಲ್ಲಿಲ್ಲ” ಎಂದಿದ್ಧಾರೆ.
ಪಾಕಿಸ್ತಾನಿ ಪತ್ರಕರ್ತರ ಪ್ರಕಾರ, ಬಾಜ್ವಾ ಅವರು ಭಾರತದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಕಾರಣರಾಗಿದ್ದರು ಮತ್ತು ಪ್ರತಿಯಾಗಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯಲು ಬಯಸಿದ್ದರು ಎನ್ನುವ ಸಂಗತಿಯನ್ನು ಬಹಿರಂಗ ಪಡಿಸಲಾಗಿದೆ.
2021 ರಲ್ಲಿ, ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಫೆಬ್ರವರಿ 24 ಮತ್ತು 25 ಫೆಬ್ರವರಿ ರಂದು ಜಾರಿಗೆ ಬರುವಂತೆ ನಿಯಂತ್ರಣ ರೇಖೆ ಮತ್ತು ಇತರ ಎಲ್ಲಾ ವಲಯಗಳಲ್ಲಿ ಗುಂಡಿನ ದಾಳಿಯನ್ನು ನಿಲ್ಲಿಸಲು” ಒಪ್ಪಿಕೊಂಡಿದ್ದರು ಎನ್ನುವ ಸಂಗತಿ ಬಯಲಾಗಿದೆ.
ಇದಲ್ಲದೆ, ಜನರಲ್ ಬಜ್ವಾ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ “ರಹಸ್ಯ ಮಾತುಕತೆ” ನಡೆಸಿ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.