ಯುದ್ದಕ್ಕೆ ಹೆದರಿ ಬಾಲಕರ ಸೇನೆ ಕಣಕ್ಕಿಳಿಸಿದೆ ಕಾಂಗ್ರೆಸ್: ಡಾ.ಅಗರವಾಲ

ಬೀದರ್:ಏ.12: ಬಿಜೆಪಿ ಹಾಗೂ ಜೆಡಿಎಸ್ ಶಕ್ತಿಗೆ ಹೆದರಿ ಕಾಂಗ್ರೆಸ್‍ನ ಮಂತ್ರಿಗಳು ಲೋಕಸಭೆ ಚುನಾವಣೆಯಲ್ಲಿ ತಾವು ನಿಲ್ಲವ ಬದಲು ತಮ್ಮ ಬಾಲಕರನ್ನು ಕಣಕ್ಕಿಳಿಸಿವೆ. ಅಂತಹ ಮುಗ್ದ ಬಾಲಕರ ಮೇಲೆ ನಾವು ಯಾವ ಅಸ್ತ್ರ ಪ್ರಯೋಗಿಸಲು ಸಾಧ್ಯ? ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಲೋಕಸಭೆ ಚುನಾವಣೆ ಉಸ್ತುವಾರಿ ಡಾ.ರಾಧಾ ಮೋಹನದಾಸ ಅಗರವಾಲ ಪ್ರಶ್ನೆ ಮಾಡಿದರು.
ಗುರುವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ರಾಜ್ಯದ 28 ಲೋಕಸಭೆ ಕ್ಷೇತ್ರಗಲಲ್ಲಿ ಎನ್.ಡಿ.ಎ ಅಭ್ಯರ್ಥಿಗಳು ಗೆಲ್ಲುವುದು ಗ್ಯಾರಂಟಿ ಎಂದರು.
ಬೀದರ್ ಲೋಕಸಭೆ ನಮ್ಮ ಪಕ್ಷದ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಅವರು ಕನಿಷ್ಟ 4 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ. ಇಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದು, ಇವರ ಉತ್ಸಾಹ ಇಮ್ಮಡಿಗೊಂಡಿರುವುದು ಸಂತಸದ ಸಂಗತಿ. ಔರಾದ್ ಶಾಸಕ ಪ್ರಭು ಚವ್ಹಾಣ ಅವರು ಹೃದಯಘಾತಕ್ಕೆ ಒಳಗಾಗಿದ್ದು, ಅವರು ಸುಧಾರಿಸಲು ಇನ್ನು ಕಾಲಾವಕಾಶ ಬೇಕಿದೆ. ಆದರೆ ಅವರಿಗೆ ಪಕ್ಷದ ಅಭ್ಯರ್ಥಿ ಬಗ್ಗೆ ಯಾವುದೇ ಅಸಾಮಾಧಾನ ಇಲ್ಲ. ಅವರು ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿದ್ದು, ಬೇಗ ಗುಣಮುಖವಾಗಲಿ ಎಂದು ಪಕ್ಷ ಬಯಸುತ್ತದೆ ಎಂದರು.
ಮಾಜಿ ಡಿ.ಸಿ.ಎಂ ಕೆ.ಎಸ್ ಈಶ್ವರಪ್ಪ ಸಹ ಬಿಜೆಪಿ ನಿಷ್ಟಾವಂತ ಕಾರ್ಯಕರ್ತರಾಗಿದ್ದು, ತಮ್ಮ ಮುನಿಸು ನಿಲ್ಲಿಸುತ್ತಾರೆ ಬೇಗ ಪಕ್ಷದ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರೊಂದಿಗೆ ಕೈ ಜೋಡಿಸುತ್ತಾರೆಂಬ ವಿಶ್ವಾಸ ಇದೆ. ನಾಳೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುತ್ತಿದ್ದಾರೆಂಬ ಮಾಹಿತಿ ಇದೆ. ನಾಮಪತ್ರ ವಾಪಸ್ ಪಡೆಯುವವರೆಗೆ ಪಕ್ಷ ಕಾದು ನೋಡಲಿದೆ. ನಂತರ ಪಕ್ಷ ಸೂಕ್ತ ನಿರ್ಧಾರ ತೆಗೆದುಕೊಳ್ಲಲಿದೆ ಎಂದರು.
ದೇಶದ ಮುಂದೆ ಒಂದೇ ಶಕ್ತಿ ಇದೆ. ಅದು ಪ್ರಧಾನಿ ನರೇಂದ್ರ ಮೋದಿ. ಕಾಂಗ್ರೆಸ್‍ನಲ್ಲಿ ಯಾವ ಅಭ್ಯರ್ಥಿ ಮುಂದಾಳುತ್ವ ವಹಿಸುತ್ತಿಲ್ಲ. ಸ್ವತಃ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರೆ ಚುನಾವಣೆಯಲ್ಲಿ ಸ್ಪರ್ಧಿಸದೇ ತನ್ನ ಅಳಿಯ ರಾಧಾಕೃಷ್ನ ದೊಡಮನಿ ಅವರಿಗೆ ಮೈದಾನ ಬಿಟ್ಟು ಪಲಾಯನ ಮಾಡಿದ್ದಾರೆ. ಈಗ ಕಾಲ ಬದಲಾಗಿದೆ. ಜನ ಜಾಣರಿದ್ದಾರೆ. ಯಾರಿಗೆ ಮತ ನೀಡಬೇಕು ಎಂಬ ತಿರ್ಮಾನಕ್ಕೆ ಈಗಾಗಲೇ ಬಂದಿದ್ದು, ಕಾಂಗ್ರೆಸ್ ರಾಜ್ಯದಲ್ಲಿ ಶುನ್ಯ ಸಾಧನೆ ಮಾಡುವುದು ಪಕ್ಕಾ ಎಂದರು.
ಪ್ರಧಾನಿ ನರೇಂದ್ರ ಮೋದಿಜಿಯವರು ಕಳೆದ 10 ವರ್ಷಗಳಿಂದ ದೆಶಕ್ಕಾಗಿ ವಿಶ್ರಾಂತಿ ಪಡೆದಿಲ್ಲ. ರಾಷ್ಟ್ರವೇ ತನ್ನ ಕುಟುಂಬ ಎಂದು ನಂಬಿದ ಶಕ್ತಿ ಅವರು. 2014ರಿಂದ ಇಲ್ಲಿಯ ವರೆಗೆ 10 ವರ್ಷಗಳಲ್ಲಿ ಭಾರತವನ್ನು ವಿಶ್ವದ ಆರ್ಥಿಕ ಶ್ರೇಣಿಯಲ್ಲಿ ಸ್ಪರ್ಧಿಸುವಂತೆ ಮಾಡಿದ್ದಾರೆ. ಮುಂದಿನ 25 ವರ್ಷಗಳ ಯೋಜನೆ ಈಗಾಗಲೇ ಸಿದ್ದಪಡಿಸಿದ್ದು, 2047ರಲ್ಲಿ ಭಾರತವು ವಿಶ್ವದ ಸೂಪರ ಶಕ್ತಿಶಾಲಿ ದೇಶವಾಗಿ ಹೊರಹೊಮ್ಮುವಂಥ ಯೋಜನೆ ಸಿದ್ದಪಡಿಸಿದ್ದಾರೆ ಎಂದರು.
ಪತ್ರಿಕಾ ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಹುಡಗಿ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ, ಪಕ್ಷದ ಲೋಕಸಭೆ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪುರ, ಲೋಕಸಭೆ ಚುನಾವಣೆ ಉಸ್ತುವಾರಿ ಅಮರನಾಥ ಪಾಟೀಲ, ಹಾಲಿ ಶಾಸಕರುಗಳಾದ ಶರಣು ಸಲಗರ, ಡಾ.ಸಿದ್ದಲಿಂಗಪ್ಪ ಪಾಟೀಲ, ಡಾ.ಡಾ.ಶೈಲೇಂದ್ರ ಬೆಲ್ದಾಳೆ, ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಪಿ.ರಾಜು, ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪುರೆ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಮಲ್ಲಿಕಾರ್ಜುನ್ ಖೂಬಾ, ಮಾರೂತಿರಾವ ಮುಳೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಯರನಳ್ಳಿ, ಜಿಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ, ಮಾಜಿ ಬೂಡಾ ಅಧ್ಯಕ್ಷ ಬಾಬು ವಾಲಿ, ಪಕ್ಷದ ಸಹ ವಕ್ತಾರ ಬಸವರಾಜ ಪವಾರ, ಮಾದ್ಯಮ ಪ್ರಮುಖ ಶ್ರೀನಿವಾಸ ಚೌಧರಿ ಸೇರಿದಂತೆ ನೇಕರು ಉಪಸ್ಥಿತರಿದ್ದರು.