ಯುಡಿಎಫ್ – ಎಲ್‌ಡಿಎಫ್ ಮಧ್ಯ ಮ್ಯಾಚ್ ಫಿಕ್ಸಿಂಗ್

ತಿರುವನಂತಪುರಂ(ಕೇರಳ), ಮಾ.೩೦- ಕೇರಳ ರಾಜಕಾರಣದ ಅತ್ಯಂತ ಕೆಟ್ಟ ರಹಸ್ಯವೆಂದರೆ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮತ್ತು ದಿ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್)ನ ಸ್ನೇಹಪರ ಒಪ್ಪಂದವಾಗಿತ್ತು ಎಂದು ಟೀಕಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿಮ್ಮಿಬ್ಬರ ಮ್ಯಾಚ್ ಫಿಕ್ಸಿಂಗ್ ಏನು ಎಂದು ಜನತೆಗೆ ತಿಳಿಯುತ್ತಿದೆ ಎಂದು ಸಿಪಿಐಎಂ ಮತ್ತು ಕಾಂಗ್ರೆಸ್ ನೇತೃತ್ವದ ಎರಡು ಮೈತ್ರಿಗಳ ಮೇಲೆ ವಾಗ್ದಾಳಿ ನಡೆಸಿದರು.
ಕೇರಳ ವಿಧಾನಸಭಾ ಚುನಾವಣೆ ಅಂಗವಾಗಿ ಬಿಜೆಪಿ ಪ್ರಚಾರ ರ್‍ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಕೇರಳ ಕುರಿತಂತೆ ಬಿಜೆಪಿ ದೃಷ್ಟಿಕೋನ ದೂರದ್ದಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಯುವಕರು ರಾಜ್ಯದಾದ್ಯಂತ ವೃತ್ತಿಪರ ಸಮುದಾಯಗಳು ಬಿಜೆಪಿಗೆ ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿದೆ. ಭಾರತದಾದ್ಯಂತ ಈ ಪ್ರವೃತ್ತಿಯನ್ನು ನಾವು ನೋಡುತ್ತಿರುವುದಾಗಿ ಅವರು ಹೇಳಿದರು.
ಮುಂಬರುವ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿಗೆ ನಿಮ್ಮ ಆರ್ಶೀವಾದ ಪಡೆಯಲು ನಾನು ಇಂದು ನಿಮ್ಮ ನಡುವೆ ಬಂದಿದ್ದೇನೆ. ಕೇರಳದ ಪ್ರಸ್ತುತ ಸನ್ನಿವೇಶ ಬದಲಾಗಿ ಉಲ್ಲಾಸಕರ ವಾತಾವರಣ ಸೃಷ್ಟಿಯಾಗಲಿದೆ ಎಂದರು.ಕೇಸರಿ ಪಕ್ಷ ರಾಜ್ಯದ ಅಭಿವೃದ್ಧಿ ಕುರಿತಂತೆ ಮಹತ್ವಾಕಾಂಕ್ಷೆ ದೃಷ್ಟಿ ಹೊಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದರು.
ಮೆಟ್ರೊಮ್ಯಾನ್ ಶ್ರೀಧರನ್ ಕೇರಳದ ಮಗ ಶ್ರೀಧರನ್ ಸಮಾಜಕ್ಕೆ ಪ್ರಮುಖ ಕೊಡುಗೆಗಳನ್ನು ನೀಡಲಿದ್ದಾರೆ ಮತ್ತು ಅಧಿಕಾರ ದಾಹದಿಂದ ಅವರು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಅಭಿವೃದ್ಧಿಯೇ ಅವರ ಮೂಲ ಉದ್ದೇಶ ಎಂದು ಮೋದಿ ತಿಳಿಸಿದರು.
ಈ ಕ್ಷೇತ್ರಕ್ಕೆ ನಾನು ೨೪ ಗಂಟೆಗಳ ನೀರು ಸರಬರಾಜು, ಪರಿಣಾಮಕಾರಿ ಘನತ್ಯಾಜ್ಯ ನಿರ್ವಹಣಾ ಯೋಜನೆಯನ್ನು ಒಳಗೊಂಡಿರುವ ಮಾಸ್ಟರ್‌ಪ್ಲಾನ್ ರೂಪಿಸಿದ್ದೇನೆ. ಮುಂದಿನ ೫ ವರ್ಷಗಳಲ್ಲಿ ೨೫ ಲಕ್ಷ ಮರಗಳನ್ನು ನೆಡುವ ಮೂಲಕ ಈ ಪ್ರದೇಶಕ್ಕೆ ಹಸಿರು ಹೊದಿಕೆಯನು ಹೊದಿಸಲು ನಾನು ಬಯಸುತ್ತೇನೆ ಎಂದು ಹೇಳಿದರು.