ಯುಟ್ಯೂಬರ್ ಪ್ರಿನ್ಸ್ ದೀಕ್ಷಿತ್ ಬಂಧನ

ನವದೆಹಲಿ,ಮಾ.೧೭- ಕಾರಿನ ಮೇಲೆ ನಿಂತು ಹುಟ್ಟುಹಬ್ಬ ಆಚರಿಸಿದ ಯೂಟ್ಯೂಬರ್‌ವೊಬ್ಬರನ್ನು ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಯುಟ್ಯೂಬರ್ ಪ್ರಿನ್ಸ್ ದೀಕ್ಷಿತ್‌ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಪ್ರಿನ್ಸ್‌ದೀಕ್ಷಿತ್‌ಬಂಧಿತ ಯುಟ್ಯೂಬರ್. ಕಳೆದ ನವೆಂಬರ್ ೧೬ರಂದು ಈತ ಚಲಿಸುವ ಕಾರಿನ ಮೇಲೆ ನಿಂತುಕೊಂಡು ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ವೀಡಿಯೋ ವೈರಲ್ ಆದ ಬೆನ್ನಲ್ಲೇ ಸಂಚಾರ ನಿಯಮ ಉಲ್ಲಂಘಿಸಿ ಗೂಂಡಾಗಿರಿ ಪ್ರದರ್ಶಿಸಿದ ಆರೋಪದ ಹಿನ್ನೆಲೆಯಲ್ಲಿ ಆತನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಆತನ ಸ್ನೇಹಿತರಿಗಾಗಿ ಬಲೆ ಬೀಸಿದ್ದರು.

೨೦೨೨ರ ನವೆಂಬರ್ ೧೬ರಂದು ತನ್ನ ಹುಟ್ಟುಹಬ್ಬದಂದು ರಾಷ್ಟ್ರೀಯ ಹೆದ್ದಾರಿ ೨೪ರಲ್ಲಿ ಚಲಿಸುವ ಕಾರಿನ ಮೇಲೆ ನಿಂತುಕೊಂಡು ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದರು. ಬಳಿಕ ಸಂಚಾರ ನಿಯಮಗಳನ್ನು ಉಲ್ಲಂಘಿಸಿ, ಗೂಂಡಾಗಿರಿ ಪ್ರದರ್ಶಿಸಿದ ಕಾರಣಕ್ಕಾಗಿ ದೀಕ್ಷಿತ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಇದೇ ವೇಳೆ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಯೂಟ್ಯೂಬರ್ ತನ್ನ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.