ಯುಜಿ ಸಿಇಟಿ-2023 ಪರೀಕ್ಷೆಗಳು ಸುಸೂತ್ರವಾಗಿನಡೆಯಬೇಕು:ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ

ಬೀದರ, ಮೇ 19: ಮೇ. 20 ರಿಂದ 23 ರ ವರೆಗೆ ನಡೆಯಲಿರುವ ಯುಜಿ ಸಿಇಟಿ ಪರೀಕ್ಷೆಗಳು ಬೀದರ ಜಿಲ್ಲೆಯಲ್ಲಿ ಸುಸೂತ್ರವಾಗಿ ನಡೆಸಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು

ಅವರು ಗುರುವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಯುಜಿ ಸಿಇಟಿ- 2023 ಪರೀಕ್ಷೆಗಳು ಜಿಲ್ಲೆಯಲ್ಲಿ ಸುಸೂತ್ರವಾಗಿ ನಡೆಸುವ ಕುರಿತು ಕರೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೀದರ ಜಿಲ್ಲೆಯಲ್ಲಿ ಒಟ್ಟು 31 ಪರೀಕ್ಷಾ ಕೇಂದ್ರಳಿದ್ದು ಬೀದರ ನಗರದಲ್ಲಿ 20, ಬಸವಕಲ್ಯಾಣ ತಾಲೂಕಿನಲ್ಲಿ 5 ಮತ್ತು ಭಾಲ್ಕಿ ತಾಲ್ಲೂಕಿನಲ್ಲಿ 6 ಪರೀಕ್ಷಾ ಕೇಂದ್ರಗಳು ಇರಲಿವೆ ಜಿಲ್ಲೆಯಲ್ಲಿ ಒಟ್ಟು 10407 ವಿದ್ಯಾರ್ಥಿಗಳು ಯುಜಿ ಸಿಇಟಿ- 2023 ಪರೀಕ್ಷೆಗಳನ್ನು ಬರೆಯುತ್ತಿದ್ದಾರೆ ಎಂದು ಹೇಳಿದರು.

ಯುಜಿ ಸಿಇಟಿ ಪರೀಕ್ಷೆಗಳ ವೇಳಾಪಟ್ಟಿ ವಿವರ: ಮೇ 20 ರಂದು ಬೆಳಿಗ್ಗೆ 10.30 ರಿಂದ 11.50 ರವರೆಗೆ ಜೀವಶಾಸ್ತ್ರ ಮತ್ತು ಮಧ್ಯಾಹ್ನ 2.30 ರಿಂದ 3.50 ರವರೆಗೆ ಗಣಿತ ಹಾಗೂ ಮೇ 21 ರಂದು ಬೆಳಿಗ್ಗೆ 10.30 ರಿಂದ 11.50 ರವರೆಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ 2.30 ರಿಂದ 3.50 ರವರೆಗೆ ರಸಾಯನಶಾಸ್ತ್ರ. ಹಾಗೂ ಮೇ 22 ರಂದು ಬೆಳಿಗ್ಗೆ 11.30 ರಿಂದ 12.30 ರವರೆಗೆ ಕನ್ನಡ ಪರೀಕ್ಷೆಗಳು ನಡೆಯಲಿವೆ.

ಈ ಪರೀಕ್ಷೆಯ ಚೀಫ್ ಸುಪಡೆಂಟ್ ಜಿಲ್ಲಾಧಿಕಾರಿಗಳಾಗಿರುತ್ತಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕರು ಕೊಆಡಿನೇಟರ ಆಗಿರುವರು, ಪರೀಕ್ಷಾ ಕೇಂದ್ರಗಳ ಪ್ರಿನ್ಸಿಪಾಲರು ಡೆಪ್ಯುಟಿ ಚಿಫ್ ಸುಪಡೆಂಟ್ ಆಗಿರಲಿದ್ದು ಇತರೆ ಅಸಿಸ್ಟೆಂಟ್ ಡೆಪ್ಯುಟಿ ಚಿಫ್ ಸುಪಡೆಂಟ್, ರೂಮ ಇನವಿಜಿಲೆಟರ್, ಅಬ್ಸರವರ, ಕಸ್ಟೋಡಿಯನ್ ಸೇರಿದಂತೆ ಪರೀಕ್ಷೆಗೆ ನಿಯೋಜಿತ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಯಾವುದೇ ಸಮಸ್ಯೆಯಾಗದಂತೆ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಬೇಕೆಂದು ಹೇಳಿದರು.

ಈ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಕಾಂತ ಶಹಾಬಾದಕರ್, ಗಾಂಧಿಗಂಜ್ ಪೆÇಲೀಸ್ ಠಾಣೆಯ ಸಿ.ಪಿ.ಐ ಹನುಮರೆಡ್ಡೆಪ್ಪ ಮತ್ತು ಜಿಲ್ಲೆಯ ಆಯಾ ತಾಲೂಕಿನ ತಹಶಿಲ್ದಾರರು ಹಾಗೂ ಪರೀಕ್ಷೆಗಳಿಗೆ ನಿಯೋಜಿತ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು