
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.16: ನಗರದ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆ (ಐಟಿಐ) ನಲ್ಲಿ ಉದ್ಯೋಗ ಯೋಜನೆಯಡಿಯಲ್ಲಿನ ಯು.ಜಿ ಕೇಬಲ್ ನ್ನು ಬೇರೆ ಕಡೆ ಸಾಗಿಸಿ ಸಿಕ್ಕಿಬಿದ್ದ ಜಿ.ಶಂಕರ್ ಇವರನ್ನು ಅಮಾನತು ಮಾಡಿ ನಿಕ್ಷಾಪತ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ರಕ್ಷಣಾ ವೇದಿಕೆ ಕೌಶಲಾಭಿವೃದ್ಧಿ ಸಚಿವ ಶರಣಗೌಡ ಪಾಟೀಲ್ಅವರಿಗೆ ಪತ್ರ ಬರೆದು ಒತ್ತಾಯಿಸಿದೆ.
ಯು.ಜಿ ಕೇಬಲ್ ನ್ನು ಉಗ್ರಾಣದಲ್ಲಿಡದೇ ಹಲವು ವರ್ಷಗಳಿಂದ ತನ್ನ ವಿಭಾಗಲದಲ್ಲಿಟ್ಟುಕೊಂಡು ಯಾವುದೇ ಅಧಿಕೃತ ಆದೇಶವಿಲ್ಲದೇ ಅದು ಗುತ್ತಿಗೆದಾರಿಗೆ ಸಂಬಂಧಿಸಿದ್ದು ಎಂದು ಹೇಳಿ ಮಾರುಕಟ್ಟೆಗೆ ಮಾರುವುದಕ್ಕೆ ತೆಗೆದುಕೊಂಡು ಹೋಗಿದ್ದರು. ಆದರೆ ಅಲ್ಲಿರುವ ಸಿಬ್ಬಂದಿಯವರು ಇದು ಸಂಸ್ಥೆಗೆ ಸಂಬಂಧಪಟ್ಟಿದ್ದು ಎಂದು ಸಂಸ್ಥೆಯ ಪ್ರಾಚಾರ್ಯರಿಗೆ ದೂರು ನೀಡಿರುವುದರಿಂದ ಹಾಗೂ ಜಿಲ್ಲಾಧಿಕಾರಿಗಳು ಸಂಸ್ಥೆಗೆ ತಪಾಸಣೆಗೆ ಬರುತ್ತಾರೆಂಬ ವಿಷಯ ತಿಳಿದು ಮರುದಿನ ಕೇಬಲ್‍ನ್ನು ಮತ್ತೆ ತಂದು ಸಂಸ್ಥೆಯಲ್ಲಿ ಇಟ್ಟಿರುತ್ತಾರೆ.
ಅದ್ದರಿಂದ ಕೇಬಲನ್ನು ಯಾಕೆ ತೆಗೆದುಕೊಂಡು ಹೋಗಿದ್ದರು. ಇದೇ ರೀತಿ ಈ ಮೊದಲು ಎಷ್ಟು ತೆಗೆದುಕೊಂಡು ಹೋಗಿರುತ್ತಾರೆ. ಈ ಹಿಂದೆ ಟಾಟಾಗೆ ಸಂಬಂಧಿಸಿದ ಉಪಕರಣಗಳು ಏನಾದರೂ ಕಳೆದು ಹೊಗಿವಿಯಾ ಎಂದು ಗೊತ್ತಾಗಬೇಕು.
ಇದಲ್ಲದೆ ಈ ವ್ಯಕ್ತಿ ಸಂಸ್ಥೆಯ ಆವರಣದಲ್ಲಿ ಎರಡು ಬಾರಿ ಎಕ್ಷಿಬೀಷನ್, 1 ಬಾರಿ ಪಟಾಕಿ ಅಂಗಡಿ ಹಾಕಲು ಅನುಕೂಲ ಮಾಡಿಕೊಟ್ಟು. ಸಂಸ್ಥೆಗೆ ಅಂತ ಸುಳ್ಳು ಹೇಳಿ ಮಾಲೀಕರಿಂದ ಲಕ್ಷಗಟ್ಟಲೆ ಹಣ ಪಡೆದಿರುವ ಆರೋಪವೂ ಕೇಳಿ ಬಂದಿದೆ.
ಈ ಸಂಸ್ಥೆಯಲ್ಲಿ ಇನ್ನೂ ಹಲವಾರು ಅಕ್ರಮಗಳು ಬಯಲಿಗೆ ಬರಬೇಕಾದರೆ ಇವರ ಮೇಲೆ ತಕ್ಷಣ ಎಫ್.ಐ,ಆರ್ ಮಾಡಿ ಅಮಾನತುಗೊಳಿಸಿ ತನಿಖೆ ನಡೆಸುಬೇಕೆಂದು ಒತ್ತಾಯಿಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಡಿ.ರಾಮಾಂಜನೇಯ ಅವರು ತಿಳಿಸಿದ್ದಾರೆ.