ಯುಜಿಡಿ ದುರಂತ:ಪರಿಹಾರಕ್ಕೆ ಆಗ್ರಹಿಸಿ ಮನವಿ

ವಿಜಯಪುರ :ಮೇ.25: ಶ್ರೀ ಲಕ್ಷ್ಮೀ ದೇವಸ್ಥಾನದ ಗವಳಿ ಸಮಾಜ ಟ್ರಸ್ಟ್ ಕಮಿಟಿ ವಿಜಯಪುರ ಗವತಿ ಸಮಾಜದ ವತಿಯಿಂದ ವಿಜಯಪುರ ಮಹಾನಗರ ಪಾಲಿಕೆಯ ಯು.ಜಿ.ಡಿ ತ್ಯಾಜ್ಯ ಸಂಸ್ಕರಣ ಘಟಕದ ಕಾಲುವೆಯಲ್ಲಿ 3 ಚಿಕ್ಕ ಮಕ್ಕಳು ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂದಿಸಿದಂತೆ ತನಿಖೆ ಚುರುಕುಗೊಳಿಸುವ ಕುರಿತು ಹಾಗೂ ಮೃತರ ಕುಟುಂಬ ತ್ವರಿತ ಹಾಗೂ ಗರಿಷ್ಠ ಆರ್ಥಿಕ ಪರಿಹಾರ ನಿಡುವ ಕುರಿತು ಅಪರ ಜಿಲ್ಲಾಧಿಕಾರಿಗಳಾದ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ರಮೇಶ ಅಂಜಿಖಾನೆ ಮಾತನಾಡಿ, ದಿನಾಂಕ 12/05/2024 ರಂದು ನಗರದ ಗಚ್ಚಿನ ಕಟ್ಟಿ ಕಾಲೋನಿಯ 3 ಚಿಕ್ಕ ಮಕ್ಕಳು ಆಡಲು ಹೋಗಿ ವಿಜಯಪುರ ಮಹಾನಗರ ಪಾಲಿಕೆಯ ಯು.ಜಿ.ಡಿ ತ್ಯಾಜ್ಯ ಸಂಸ್ಕರಣ ಘಟಕದ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದು ಇದಕ್ಕೆ ಯು.ಜಿ.ಡಿ ತ್ಯಾಜ್ಯ ಸಂಸ್ಕರಣ ಘಟಕದ ಕಾಲುವೆಯಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳನ್ನು ಪಾಲಿಸದ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯತೆವೇ ಕಾರಣ. ಇದಕ್ಕೆ ಸಂಬಂದಿಸಿದಂತೆ ದಿನಾಂಕ 13/5/2024 ರಂದು ಶ್ರೀಕಾಂತ ಮಹಾದೇವ ಜಾನಗೌಳಿ ಇವರು ಆದರ್ಶ ನಗರ ಪೆÇೀಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ ಪ್ರಕರಣ ಸಂಖ್ಯೆ 0047/0024 ಇದ್ದು ಈಗ ಸುಮಾರು 10 ದಿನಗಳು ಕಳೆದು ಹೋದರು ಸಹ ಇನ್ನು ಯಾವುದೇ ಅಧಿಕಾರಿ ಮೇಲೆ ತಾವುಗಳು ಕಾನೂನು ಕ್ರಮ ಕೈಗೋಳದೆ ಇದುದು ಇದು ನಮ್ಮ ದುರ್ದೈವ. ಈಗ ನಮ್ಮ ವಿಜಯಪೂರ ನಗರದ ಸಮಸ್ತ ಗವಳಿ ಸಮಾಜ ಕಮಿಟಿ ಸದಸ್ಯರು ಮತ್ತು ಪಂಚಮಂಡಳ ವತಿಯಿಂದ ತಮ್ಮಲಿ ವಿನಂತಿಸಿ ಕೋಳುವುದೆನೆಂದರೆ ಈ ಪ್ರಕರಣಕ್ಕೆ ಸಂಬಂದಿಸಿದಂತೆ ತಾವುಗಳು ತನಿಖೆ ಚುರುಕುಗೊಳಿಸಿ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ಮೃತರ ಕುಟುಂಬಕ್ಕೆ ತ್ವರಿತ ಹಾಗೂ ಗರಿಷ್ಠ ಆರ್ಥಿಕ ಪರಿಹಾರ ನಿಡಬೇಕೆಂದು ಮೃತರ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಸೂಕ್ತ ನ್ಯಾಯ ಒದಗಿಸಿ ಕೊಡಬೇಕು. ಇಲ್ಲವಾದಲ್ಲಿ ಪ್ರಕರಣಕ್ಕೆ ಸಂಬಂದಿಸಿದಂತೆ ಬೇಗನೆ ತನಿಖೆ ಆಗದೆ ಇದ್ದಲ್ಲಿ ನಮ್ಮ ಸಮಾಜದ ವತಿಯಿಂದ ಉಗ್ರಹೊರಟ ಮಾಡಿ ನ್ಯಾಯ ಪಡೆದುಕೊಳುತ್ತೆವೆ ಮುಂದಿನ ದಿನಗಳಲ್ಲಿ ಇಂತಹ ಘಟಣೆ ಆಗದಂತೆ ನೋಡಿ ಕೊಳಲು ತಮ್ಮಲ್ಲಿ ಸಮಸ್ತ ಗವಳಿ ಸಮಾಜದ ವತಿಯಿಂದ ವಿನಂತಿ ಮಾಡಿ ಕೋಳುತ್ತವೆ.
ಈ ಸಂದರ್ಭದಲ್ಲಿ ಶ್ರೀಕಾಂತ ಜಾನಗೌಳಿ, ಷಟವಾಜಿ ನ್ಯಾಕೊ, ರಾಜು ಪಂಗಡವಾಲೆ, ದಿನಬಾ ದೈಹಿಂಡೆ, ಶಂಕರ ಅಂಜಿಖಾನೆ, ರಾಜು ಜಾನಗೌಳಿ, ಮುನ್ನಾ ಜುಪ್ಪರೆ, ಬಾಬು ದೈಹಿಂಡೆ, ದಾದು ಅಂಜುಖಾನೆ, ಅಶೋಕ ಬಡೋನಿ, ನಾಗಾ ತಾರಿಪೇಟೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.