ಯುಗ ಪ್ರವರ್ತಕ ಸರ್ ಸಿದ್ದಪ್ಪ ಕಂಬಳಿ: ಉಪನ್ಯಾಸ

ಧಾರವಾಡ,ಸೆ.15: ಮುಂಬೈ ಶಾಸನ ಸಭೆಯಲ್ಲಿಉತ್ತರಕರ್ನಾಟಕದಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಈ ಭಾಗದ ಸಮಗ್ರಅಭಿವೃದ್ದಿಗೆಕಾರಣರಾದವರು ಸರ್. ಸಿದ್ದಪ್ಪ ಕಂಬಳಿ. ಅವರುತಮ್ಮತ್ಯಾಗ ಹಾಗೂ ಸೇವೆಗಳಿಂದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದುಆಹಾರ ಮತ್ತು ನಾಗರಿಕ ಸರಬರಾಜುಇಲಾಖೆಯ ವಿಶ್ರಾಂತಉಪನಿರ್ದೇಶಕರಾದಡಾ. ಸದಾಶಿವ ಮರ್ಜಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಸರ್ ಸಿದ್ದಪ್ಪ ಕಂಬಳಿ ಪ್ರತಿಷ್ಠಾನ ದತ್ತಿಕಾರ್ಯಕ್ರಮದಲ್ಲಿ“ಯುಗ ಪ್ರವರ್ತಕ ಸರ್. ಸಿದ್ದಪ್ಪ ಕಂಬಳಿ” ವಿಷಯಕುರಿತುಅತಿಥಿಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಸರ್. ಸಿದ್ದಪ್ಪ ಕಂಬಳಿಯವರು ಸಾಮಾಜಿಕ ನ್ಯಾಯದ ಪರಿಪಾಲಕರು. ನ್ಯಾಯ ನಿಷ್ಠುರರು, ಅವಕಾಶ ವಂಚಿತ ಸಮುದಾಯದ ಏಳಿಗೆಗಾಗಿ ಎಷ್ಟೇ ಸಂದಿಗ್ದ ಸಮಸ್ಯೆಗಳು ಎದುರಾದರುದೃತಿಗೆಡದೆ ಸಮುದಾಯದ ಅಸ್ಮಿತೆಗೆ ಹೋರಾಡಿದಯುಗ ಪ್ರವರ್ತಕರು.
ಸರ್. ಸಿದ್ದಪ್ಪ ಕಂಬಳಿ ಅವರು ಆಗಿನ ಮುಂಬೈ ಸರಕಾರದಲ್ಲಿ ಶಿಕ್ಷಣ ಮಂತಿಗಳಾಗಿದ್ದಾಗ ಡಾ. ಬಿ. ಆರ್. ಅಂಬೇಡ್ಕರಅವರು ಸರಕಾರಿ ಕಾನೂನು ಕಾಲೇಜಿನಲ್ಲಿಉಪನ್ಯಾಸಕ ಹುದ್ದೆಗೆತಮ್ಮನ್ನು ನೇಮಕ ಮಾಡಿಕೊಳ್ಳಲು ಪ್ರಸ್ತಾಪಿಸಿದರು. ಸರ್. ಸಿದ್ದಪ್ಪ ಕಂಬಳಿಯವರು ಡಾ. ಬಿ ಆರ್. ಅಂಬೇಡ್ಕರಅವರ ಪ್ರತಿಭೆ, ಪಾಂಡಿತ್ಯ ಗುರುತಿಸಿ ಅವರನ್ನು ಆ ಕಾಲೇಜಿನ ಪಾಧ್ಯಾಪಕರನ್ನಾಗಿ ನೇಮಕ ಮಾಡಿಕಾಲೇಜಿನಗೌರವ ಹೆಚ್ಚಿಸಿದರು.
ಸರ್. ಸಿದ್ದಪ್ಪ ಕಂಬಳಿ ಅವರ ವ್ಯಕ್ತಿತ್ವ ಹಾಗೂ ಸಾಧನೆಗಳು ಅನುಪಮವಾದವು. ಅವರದುಗಂಭೀರ ನಡೆ-ನುಡಿ. ಅವರ ಮೌಲ್ಯ, ತತ್ವಾದರ್ಶನವಿಂದು ಸ್ಮರಿಸಿಕೊಂಡಾಗ ಮಾತ್ರಅವರಿಗೆಗೌರವ ಸಲ್ಲಿಸಿದಂತೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸರ್. ಸಿದ್ದಪ್ಪ ಕಂಬಳಿ ಪ್ರತಿಷ್ಠಾನದಅಧ್ಯಕ್ಷರಾದ ಪ್ರಿ. ಶಶಿಧರ ತೋಡಕರ ಮಾತನಾಡಿ ಸರ್. ಸಿದ್ದಪ್ಪ ಕಂಬಳಿಯವರು ನೊಂದವರಿಗೆ ಶೋಷಿತರಿಗೆ ಆಶಾ ಕಿರಣವಾದವರು. ನಮ್ಮನ್ನೆಲ್ಲಾಕತ್ತಲೆಯಿಂದ ಬೆಳಕಿನೆಡೆಗೆ ಮುನ್ನಡೆಸಿದವರು. ಅವರಜೀವನದಯಶೋಗಾಥೆ ಭವಿಷ್ಯದಲ್ಲಿಯುವಕರಿಗೆ ಪ್ರೇರಕವಾಗಿದೆಎಂದು ಹೇಳಿದರು.
ವೇದಿಕೆಯಲ್ಲಿ ಕ.ವಿ.ವ ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ, ಪ್ರತಿಷ್ಠಾನದ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರಇದ್ದರು.
ವೀರಣ್ಣಒಡ್ಡೀನ ಸ್ವಾಗತಿಸಿದರು. ಡಾ. ಶ್ರೀಶೈಲ ಹುದ್ದಾರ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು. ಅಶೋಕ ನಿಡವಣಿ, ಚನ್ನಬಸಪ್ಪ ಮರದ, ಸಿ ಎಸ್ ಪಾಟೀಲ, ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ ಸೇರಿದಂತೆ ಸರ್. ಸಿದ್ಧಪ್ಪ ಕಂಬಳಿ ಪ್ರತಿಷ್ಠಾನದ ಸದಸ್ಯರು, ಪದಾಧಿಕಾರಿಗಳು ಇದ್ದರು.