ಯುಗಾದಿ ಹಬ್ಬವು ಸಾಮರಸ್ಯದ ಹೊಸ ಬೆಳಕು:ದಸ್ತಿ

ಕಲಬುರಗಿ:ಮಾ.23: ಹಬ್ಬಗಳು ಆಚರಿಸುವ ಪದ್ಧತಿ ಇಂದು ನಿನ್ನೆಯದಲ್ಲ.ಹಬ್ಬ ಎಂದರೆ ಸಂಭ್ರಮ.ಹಬ್ಬಗಳು ಸಂಬಂಧಗಳನ್ನು ಬೆಸೆಯುವ ಕೊಂಡಿಯಾಗಿವೆ.ಯುಗಾದಿ ಹಬ್ಬವು ಸಾಮರಸ್ಯದ ಹೊಸ ಬೆಳಕು ಎಂದು ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಅವರು ಅಭಿಪ್ರಾಯಪಟ್ಟರು.

ಜಯನಗರದ ಶಿವಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಹಮ್ಮಿಕೊಂಡಿದ್ದ ಯುಗಾದಿ ಸಂಭ್ರಮ ಬೇವು-ಬೆಲ್ಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಯುಗಾದಿ ಅಂದರೆ ಹೊಸ ಯುಗ ಪ್ರಾರಂಭ.ಇದು ರೈತರಿಗೆ ಹೊಸ ಕೆಲಸಕ್ಕೆ ಹೆಜ್ಜೆ ಇಡುವ ದಿನ. ಇಂದಿನ ಪೀಳಿಗೆ ಹಬ್ಬಗಳ ಆಚರಣೆ ಮಹತ್ವ ಅರಿತಿಲ್ಲ.ಅವರಿಗೆ ಈ ಕುರಿತು ತಿಳಿ ಹೇಳುವ ಕೆಲಸ ಆಗಬೇಕು.ಹಿರಿಯರು ಹಾಕಿದ ಸಂಪ್ರದಾಯ ಮುಂದುವರೆಸುವ ಕೆಲಸ ನಮ್ಮ ನಿಮ್ಮೆಲ್ಲರದಾಗಿದೆ ಎಂದ ಅವರು ಜಯನಗರ ಶಿವಮಂದಿರದಲ್ಲಿ ಹಲವು ಅಧ್ಯಾತ್ಮಿಕದ ಜೊತೆಗೆ ರಚನಾತ್ಮಕ ಕೆಲಸಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಸಾಹಿತಿ ಜಿ.ಜಿ.ವಣಿಕ್ಯಾಳ ಮಾತನಾಡಿ ಹಿಂದೂ ಸಂಪ್ರದಾಯದಲ್ಲಿ ಯುಗಾದಿ ಹೊಸ ಹಬ್ಬವಾಗಿದೆ.ಪ್ರಕೃತಿಯಲ್ಲಿ ಹೊಸ ಬದಲಾವಣೆಗಳಾಗುತ್ತದೆ.ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬಂತೆ ಎಲ್ಲವೂ ಮರಳಿ ಬರಬೇಕು.ಹೊಸತನ ಪ್ರಾರಂಭವಾಗುತ್ತದೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತ ಪ್ರಭುಲಿಂಗ ನಿಲೂರೆ ಮಾತನಾಡಿ ಬೇವು ಬೆಲ್ಲದಂತೆ ಮನುಷ್ಯ ಜೀವನದಲ್ಲಿ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಬೇಕು ಎಂದರು.ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಪತ್ರಕರ್ತ ಬಾಬುರಾವ ಯಡ್ರಾಮಿ ಅವರನ್ನು ಸನ್ಮಾನಿಸಲಾಯಿತು.

ಟ್ರಸ್ಟ್ ಉಪಾಧ್ಯಕ್ಷ ವಿರೇಶ ದಂಡೋತಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಪ್ರಾಸ್ತಾವಿಕ ಮಾತನಾಡಿದರು.ಟ್ರಸ್ಟ್ ಕೋಶಾಧ್ಯಕ್ಷ ಬಸವರಾಜ ಮಾಗಿ ವಂದಿಸಿದರು. ಹಿರಿಯರಾದ ಬಸವರಾಜ ಅನ್ವರಕರ, ಭೀಮಾಶಂಕರ ಶೆಟ್ಟಿ, ಮಲ್ಲಿಕಾರ್ಜುನ ಕಲ್ಲಾ, ಬಂಡೆಪ್ಪ ಕೇಸೂರ, ನಾಗರಾಜ ಖೂಬಾ, ಶಿವಕುಮಾರ ಪಾಟೀಲ್, ಬಡಶೇಷಿ, ಮಲ್ಲಯ್ಯ ಸ್ವಾಮಿ ಬಿದಿಮನಿ, ಬಸವರಾಜ ಪುರ್ಮಾ, ಮಲ್ಲಯ್ಯ ಸ್ವಾಮಿ, ಮಲ್ಲಿಕಾರ್ಜುನ ಸಂಗಶೆಟ್ಟಿ, ಪ್ರಶಾಂತ ತಂಬೂರಿ, ಅಶೋಕ ಪಾಟೀಲ್, ಸೇರಿದಂತೆ ಅನೇಕ ಮಹಿಳೆಯರು, ಹಿರಿಯರು ಭಾಗವಹಿಸಿದ್ದರು.