ಯುಗಾದಿ ಹಬ್ಬದ ನಿಮಿತ್ಯ ಜನಪದ ಉತ್ಸವ

ಆಳಂದ:ಮಾ.23: ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ  ಬುದುವಾರ ಯುಗಾದಿ ಹಬ್ಬದ ನಿಮಿತ್ಯ ಭೀಮರತ್ನ ಸಾಂಸ್ಕøತಿಕ ಕಲಾ ಸೇವಾ  ಸಂಸ್ಥೆ ವತಿಯಿಂದ ವಿವಿಧ ಕಲಾವಿದರ ವತಿಯಿಂದ ಜನಪದ ಉತ್ಸವ ನಡೆಸಲಾಯಿತು ಕಾರ್ಯಕ್ರಮ ಉದ್ಘಾಟನೆಯನ್ನು ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಕೆ  ಎಲ್  ಶಿವಲಿಂಗ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಬಸಮ್ಮ ಅವರು ಸಂದರ್ಭದಲ್ಲಿ ಮಾತನಾಡಿದರು ಕೆ ಎಲ್ ಶಿವಲಿಂಗರು ಮಾತನಾಡಿ ಕಲೆ ಸಂಸ್ಕೃತಿಕ ಪರಂಪರೆ ನಶಿಸಿ ಹೋಗುತ್ತಿರುವ ಇಂದಿನ ಕಾಲದಲ್ಲಿ ಇದನ್ನು ಉಳಿಸಿ ಬೆಳೆಸುವ ಕಾರ್ಯ ಭೀಮರತ್ನ ಸಾಂಸ್ಕೃತಿಕ ಕಲಾ ಸೇವಾ ಸಂಸ್ಥೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು ಇಂಥ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚು ನಡೆದರೆ ಗ್ರಾಮೀಣ ಭಾಗದ ಕಲಾವಿದರನ್ನು ಬೆಳಕಿಗೆ ತರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಶರಣಬಸಪ್ಪ ಸಂಸ್ಥೆಯ ಅಧ್ಯಕ್ಷರ ಧರ್ಮಣ್ಣ ಖರ್ಚನ್ ಬಸಮ್ಮ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು ಹಲವಾರು ಕಲಾವಿದರು ಭಾಗವಹಿಸಿದ್ದರು ರೇವಣಸಿದ್ದ ಖರ್ಚನ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿ ವಂದಿಸಿದರು