ಯುಗಾದಿ: ಬಾವಗಿ ಗುರು ಭದ್ರೇಶ್ವರ ಸಂಸ್ಥಾನದಲ್ಲಿ ವಿಶೇಷ ಪೂಜೆ

ಬೀದರ್:ಮಾ.23: ತಾಲೂಕಿನ ಬಾವಗಿ ಗ್ರಾಮದ ಗುರು ಭದ್ರೇಶ್ವರ ಸಂಸ್ಥಾನದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು
ಬೆಳಿಗ್ಗೆ ಗದ್ದುಗಿಗೆ ಮಾಹರುದ್ರ ಅಭಿಷೇಕ ಮಾಡಿ ಹೂವಿನಿಂದ ಅಲಂಕರಿಸಲಾಯಿತು ಭಕ್ತರು ಸಾಲು ಸಾಲಾಗಿ ನಿಂತು ದರ್ಶನ ಪಡೆದರು.
ಈ ಸಂದರ್ಭದಲ್ಲಿ ಸಂಸ್ಥಾನದ ಶಾಂತಕುಮಾರ ಸ್ವಾಮಿ ಮಾತಾನಾಡಿ ಹಿಂದೂ ಸಂಪ್ರದಾಯ ಪ್ರಕಾರ ಯುಗಾದಿ ಹೊಸ ವರ್ಷ ಈ ಯುಗಾದಿ ಹಬ್ಬವು ನಾಡಿನ ಜನತೆಗೆ ಬದುಕಲ್ಲಿ ಆರೋಗ್ಯ, ಸುಖ, ಶಾಂತಿ, ಸಂಪತ್ತು, ಸಂತೋಷ ತರಲಿ ವಿಶೇಷವಾಗಿ ರೈತರಿಗೆ ಮಳೆ ಬೆಳೆ, ಚನ್ನಾಗಿ ಆಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುರು ಭದ್ರೇಶ್ವರ ಸಂಸ್ಥಾನದ ಭದ್ರಯ್ಯ ಸ್ವಾಮಿ, ಗುಂಡಯ್ಯಾ ಸ್ವಾಮಿ,
ಕಾಂಗ್ರೆಸ್ ಯುವ ಮುಖಂಡ ಲೊಕೇಶ ಕನಶಟ್ಟಿ, ಮುಖಂಡರಾದ ಹಣಮಂತ ಹೋನ್ನೀಕೇರಿ, ಸೇರಿ ಅನೇಕರು ಉಪಸ್ಥಿತರಿದ್ದರು.