ಹುಬ್ಬಳ್ಳಿ.ಮಾ. ೨೩; ಯುಗಾದಿ ಹಬ್ಬ ಹಿಂದೂ ಸಂಸ್ಕೃತಿಯ ಆರಂಭದ ದಿನ. ಎಲಿ ನೋಡಿದಲ್ಲೆಲ್ಲ ಹಸಿರೆಲೆಗಳು ಚಿಗುರೊಡೆಯುವ ದಿನ. ಯುಗಾದಿ ಹೊಸ ವರುಷ ಜೀವನದಲ್ಲಿ ಚೈತನ್ಯ ಸಮೃದ್ದಿ ಸರ್ವರಿಗೂ ಪ್ರಾಪ್ತವಾಗಲೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ತಾಲೂಕಿನ ತಿರುಮಲಕೊಪ್ಪದ ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸದಲ್ಲಿ ಜರುಗಿದ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯ ರಥೋತ್ಸವ ಮತ್ತು ಜನ ಜಾಗೃತಿ ಧರ್ಮ ಸಮಾವೇಶ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಮಾನವ ಜೀವನ ಸುಖ ದು:ಖಗಳ ಸಮ್ಮಿಶ್ರಣ. ಸಿಹಿಗೆ ಹಿಗ್ಗದೇ ಕಹಿಗೆ ಕುಗ್ಗದೇ ಎಲ್ಲವನ್ನು ಸಮಾನವಾಗಿ ಸ್ವೀಕರಿಸಬೇಕೆಂಬುದನ್ನು ಬೇವು ಬೆಲ್ಲ ಸೂಚಿಸುತ್ತದೆ. ಪ್ರಕೃತಿಯಲ್ಲಿ ಹೊಸತನ ಎಲ್ಲೆಡೆಯಲ್ಲೂ ಕಾಣುತ್ತೇವೆ. ಮರ ಗಿಡಗಳು ಚಿಗುರೊಡೆಯುವುದು ಹೇಗೆ ಸಹಜವೋ ಹಾಗೆಯೇ ಮನುಷ್ಯ ಜೀವನದ ವಿಕಾಸದ ಪ್ರಗತಿಯ ಸಂದೇಶವನ್ನು ಕೊಡುತ್ತದೆ. ಯುಗಾದಿ ಹೊಸ ವರುಷದ ಶುಭ ದಿನದಂದು ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಪ್ರಾರಂಭಿಸಿದ ಕೀರ್ತಿ ಲಿಂ.ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳಿಗೆ ಸಲ್ಲುತ್ತದೆ. ಪರಶಿವನ ಪಂಚ ಮುಖಗಳಿಂದ ಆವಿರ್ಭವಿಸಿದ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಕೊಲ್ಲಿಪಾಕಿ ಸೋಮೇಶ್ವರಾದಿ ಪಂಚ ಲಿಂಗಗಳಿAದ ಅವತರಿಸಿ ಭೂಮಂಡಲದಲ್ಲಿ ಎಲ್ಲರಿಗೂ ಒಳಿತಾಗುವಂಥ ವೀರಶೈವ ಧರ್ಮವನ್ನು ಸ್ಥಾಪಿಸಿದ್ದನ್ನು ಮರೆಯಲಾಗದು. ಅಗಸ್ತö್ಯ, ದಧೀಚಿ, ವ್ಯಾಸ, ಸಾನಂದ ಮತ್ತು ದೂರ್ವಾಸ ಮಹರ್ಷಿಗಳಿಗೆ ಶಿವಾದ್ವೆöÊತ ಸಿದ್ಧಾಂತವನ್ನು ಬೋಧಿಸಿ ಹರಸಿದ ಇತಿಹಾಸವನ್ನು ಕಾಣುತ್ತೇವೆ. ವಿಶ್ವ ಬಂಧುತ್ವ ಭಾವೈಕ್ಯತೆ ಸಾರಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಹಾ ರಥೋತ್ಸವ ಯುಗಾದಿ ಹೊಸ ವರುಷದಂದು ಜರುಗುತ್ತಿರುವುದು ಮತ್ತೊಂದು ವಿಶೇಷ. ಜಗದಾಚಾರ್ಯರ ಕಾರುಣ್ಯದಿಂದ ಜಾತಿ ಸಂಘರ್ಷ ನಿಂತು ಧರ್ಮ ಸಂಸ್ಕೃತಿ ಸಮೃದ್ಧಿಗೊಂಡು ಜನ ಸಮುದಾಯಕ್ಕೆ ಸುಖ ಶಾಂತಿ ನೆಮ್ಮದಿ ಸಾಮರಸ್ಯ ಬದುಕನ್ನು ಉಂಟು ಮಾಡಲೆಂದು ಶುಭ ಹಾರೈಸಿದರು.