ಯುಗಾದಿಯ ಕೋಲಾಹಲದ ಕೋಲಾಟ ಸಂಭ್ರಮ

ಗುರುಮಠಕಲ್:ಏ.11:ಯುಗಾದಿ ಹಬ್ಬ ಅಂದ್ರೆನೆ ಸಡಗರ ಸಂಭ್ರಮದ ಹಬ್ಬ ಹಾಗೂ ಪ್ರಕೃತಿ ಹಬ್ಬ, ಹಿಂದೂ ಧರ್ಮ ಪ್ರಕಾರ ವರ್ಷಾರಂಭದ ದಿನವಾಗಿದ್ದು ನಮ್ಮ ಚಂಡರಿಕಿ ಗ್ಯರಾಮದಲ್ಲಿ ರೈತಾಪಿ ವರ್ಗದವರು ಅಂದು ತಮ್ಮ ಹೊಲಗಳಲ್ಲಿ ಕುಂಟೆ, ನೇಗಿಲು ಹೊಡೆಯುವ ಮೂಲಕ ಭೂಮಿ ಪೂಜೆ ಮಾಡುತ್ತಾರೆ. ಇತ್ತ ಕಡೆ ಮಹಿಳೆಯರು ತಮ್ಮ ಮನೆಯನ್ನು ಶುಚಿಗೊಳಿಸಿ,, ಸಿಂಗಾರ ಮಾಡಿ ಪಂಚಭಕ್ಷ ಪರಮಾನ್ನಗಳನ್ನು ಮಾಡಿ ಊರಿನ ದೇವ ದೇವತೆಯರಿಗೆ ನೈವೇದ್ಯ ಹಾಗೂ ಪೂಜೆ ಸಲ್ಲಿಸಿದನಂತರ ಕುಟುಂಬ ಸದಸ್ಯರೊಂದಿಗೆ ಮಸ್ತ್ ಭೋಜನ ಸ್ವೀಕರಿಸುತ್ತಾರೆ.

ಸಾಯಂಕಾಲ 4 ಗಂಟೆಗೆ ಅಚಲಗುರುಗೀತಾಮಂದಿರ ಹಾಗೂ ಊರಡಮ್ಮದೇವಾಲಯ ದ ಪ್ರಾಂಗಣದಲ್ಲಿ ಹಿರಿಯರು, ಯುವಕರು ಸೇರಿ ಹಾಡುಗಳು ಹಾಡುತ್ತಾ ಕುಣಿಯುತ್ತಾ ಹಾಗೂ ಹಲಗಿಯ ತಾಳಕ್ಕೆ ಅತ್ಯಂತ ಉತ್ಸಾಹದಿಂದ ಕೋಲಾಟ ಆಡುತ್ತಾರೆ,,ಕೋಲಾಟ ನೋಡಲು ಊರಿನ ಮಹಿಳೆಯರು,,ಯುವಕ ಯುವತಿಯರು, ಹಿರಿಯರು ಬರುತ್ತಾರೆ. ಇತ್ತ ಕಡೆ ಮಂದಿರ ದಲ್ಲಿ ಭಜನೆ ಮಾಡುತ್ತಾರೆ.ಆದರೆ, ಈ ಸಲ ಭಜನೆಯ ಬಾಕಿ ಬಯಲಾಟ ತಾಳ ಮದ್ದಳೆ ಹಮ್ಮಿಕೊಂಡಿದ್ದರು. ನಂತರ ಮಂದಿರದಲ್ಲಿ ಗುರುಮೂರ್ತಿ ಮಂತ ಅವರ ನೇತೃತ್ವದಲ್ಲಿ ಪಂಚಾಂಗ ಶ್ರವಣ ನಡೆಯುತ್ತದೆ,,ಈ ಕಾರ್ಯಕ್ರಮದಲ್ಲಿ ರೈತಾಪಿ ವರ್ಗದವರು ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ. ಇದಾದ ನಂತರ ಮಂದಿರದಲ್ಲಿ ಬಂದ ಭಕ್ತರಿಗೆ ಬೇವು ವಿತರಣೆ,, ಬೇವು ಸೇವನೆ ಮಾಡುತ್ತಾರೆ. ರಾತ್ರಿ ತಮ್ಮ ತಮ್ಮ ದೇವಾಲಯಗಳಲ್ಲಿ ಭಜನೆ ಮಾಡಿ ಯುಗಾದಿ ಹಬ್ಬ ಆಚರಣೆ ಮುಕ್ತಾಯವಾಗುತ್ತದೆ.