ಕಲಬುರಗಿ,ಮಾ.24: ಯುಗಾದಿಯ ಆರಂಭ ವಿಶ್ವ ಕಾವ್ಯ ದಿನವಾಗಿದೆ ಎಂದು ಹಿರಿಯ ಸಾಹಿತಿ ಡಾ. ವಾಸುದೇವ್ ಸೇಡಂ ಅವರು ಹೇಳಿದರು.
ನಗರದ ಉಚ್ಛ ನ್ಯಾಯಾಲಯದ ರಸ್ತೆಯಲ್ಲಿರುವ ರಾಮ ಮಂದಿರದ ಸಿ- ವಿಂಗ್‍ನಲ್ಲಿನ ಕಾರ್ತಿಕ್ ಹೈಟ್ಸ್‍ನಲ್ಲಿ ಶಿವಸಂಗ ಸಾಂಸ್ಕøತಿಕ ಸೇವಾ ಸಂಘವು ಹಮ್ಮಿಕೊಂಡ ಯುಗಾದಿ ನಿಮಿತ್ಯದ ಬೇವಿನೊಳಗಣ ಬೆಲ್ಲ ಕುರಿತ ಕವಿಗೋಷ್ಠಿ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಯುಗಾದಿಯ ಬೇವಿನೊಳಗನ ಬೆಲ್ಲ ಸಂಭ್ರಮ ಸಡಗರದ ವರ್ಷದ ಮೊದಲ ಹಬ್ಬ ಇಂದು. ಸಮನಾದ ಪ್ರೀತಿ ಹಂಚುವ ಹಬ್ಬ. ಎಲ್ಲರೂ ಪ್ರೀತಿ ಹಂಚಿಕೊಂಡು ತಿಂದುಂಡು ದ್ವೇಷ, ಅಸೂಯೆ ಬಿಟ್ಟು ಸಮನಾಗಿ ಇದ್ದುಬಿಟ್ಟರೆ ಯಾವುದೇ ತಗಾದೆಯೂ ಬರುವುದಿಲ್ಲ ಎಂದರು.
ಕಾವ್ಯದ ಸತ್ವ ಬೇಂದ್ರೆಯವರ ಯುಗಾದಿ ಕವನ ಯುಗ, ಯುಗಾದಿ ಕಳೆದರೂ ಮರಳಿ ಬರುತಿದೆ ಎಂಬುದು ಮರೆಯುವ ಹಾಗೆ ಇಲ್ಲ. ಯುಗಾದಿಯ ಆರಂಭ ವಿಶ್ವ ಕಾವ್ಯ ದಿನವಾಗಿದೆ. ಈ ದಿನದಿಂದ ಪ್ರಕೃತಿ ದಿನವನ್ನು ಪೂಜಿಸುವ ದಿನವಾಗಿದೆ. 3002ರ ಮಾರ್ಚ್ 18ರಂದು ಯುಗಾದಿ ಆರಂಭವಾಯಿತು ಎಂಬ ಇತಿಹಾಸವೂ ಇದೆ. ಬೆವು ಬೆಲ್ಲದಲ್ಲಿ ಸಾಕಷ್ಟು ಪೌಷ್ಠಿಕಾಂಶ ಅಂಶವು ಇದೆ. ಬೇವಿನ ಎಳೆಯಲ್ಲಿ ದುಷ್ಟ ಶಕ್ತಿಗಳನ್ನು ಓಡಿಸುತ್ತೆ ಎಂದು ಅವರು ಹೇಳಿದರು.
ಕಾವ್ಯ ಬೆಳಕಿನ ಬಿರುದನ್ನು ಕಂಡು ಸಾಹಿತ್ಯಕ್ಕೆ ಶಕ್ತಿಯನ್ನು ಕೊಡುತ್ತದೆ. ಕಾವ್ಯ ಶಬ್ದ ಅರ್ಥಗಳ ಮೊದಲ ಸಮ್ಮಿಲನ ಎಂಬುದನ್ನು ಆನಂದವರ್ಧನ್ ಅವರು ಹೇಳಿದ್ದನ್ನು ನೋಡಬಹುದು ಎಂದು ತಿಳಿಸಿದ ಅವರು, ಶಬ್ದಗಳ ಬಳಕೆ ಕಾವ್ಯದಲ್ಲಿ ಮಿತವಾಗಿರಬೇಕು ಎಂದರು.
ಶ್ರೀಮತಿ ಗೀತಾ ಪಾಟೀಲ್ ಅವರು ವಿಶೇಷ ಉಪನ್ಯಾಸ ನೀಡಿ, ಭಾರತೀಯರಿಗೆ ಇದು ಸಮೃದ್ಧಿಯ ಹಬ್ಬವಾಗಿದೆ. ನಾದವಿರದ ಬದುಕು ಜೋಡಿಸುವುದು ಹಬ್ಬ. ಮನೆಯೇ ಮಂತ್ರಾಲಯವಾಗಿದೆ ಈ ಯುಗಾದಿ. ಪ್ರಕೃತಿಯಲ್ಲಿ ಸಾಕಷ್ಟು ಸಮೃದ್ಧಿಯಿಂದ ಕೂಡಿಕೊಳ್ಳುವ ದಿನ. ಹೊಸದನ್ನು ಹೊತ್ತು ತರುವ ಹಬ್ಬವಾಗಿದೆ. ಮನಸ್ಥಿತಿಯನ್ನು ಬದಲಿಸಿಕೊಳ್ಳುವ ಹಬ್ಬವಾಗಿದೆ ಎಂದರು.
ನಾದೇರಿಯ ಹೆಣ್ಣುಮಗಳ ಟ್ಯಾಕ್ಸ್ ಪದ್ದತಿಯ ಕುರಿತು ಹೇಳಿದ ಅವರು, ಸಹಗಮನ ವಿರೋಧಿಸಿ ರಾಜನಿಗೆ ಎದೆ ತಟ್ಟಿ ಪತ್ನಿ ಹೋರಾಟ ಮಾಡಿದ ಪತ್ನಿ ಚಿತೆಗೆ ಹಾರಿ ಸತ್ತನು ಎಂದರು.
ಕವಿಗೋಷ್ಠಿಯಲ್ಲಿ ಶಿವಲೀಲಾ ಹಳ್ಳದಮಠ್ ಅವರ ಗಿಡಕ್ಕೆ ಬೇರಿನ ಮಹತ್ವ ಕುರಿತು, ಡಾ. ಬಾಬುರಾವ್ ಶೇರಿಕಾರ್ ಅವರ ಮಾನವೀಯ ಸಂಬಂಧಗಳ ಕುರಿತು ಜನಪದ ಶೈಲಿಯ ಕಾವ್ಯವು ಸಭಿಕರನ್ನ ರಂಜಿಸಿತು. ಕವಿರಾಜ್ ನಿಂಬಾಳ್ ಅವರ ದ್ವಿಮುಖ ನೀತಿಯನ್ನು ಈ ಸಂದರ್ಭದಲ್ಲಿ ತಮ್ಯ ಕಾವ್ಯದ ಮಜಲುಗಳಲ್ಲಿ ಅರ್ಥಗರ್ಭಿತವಾಗಿ ಹೊರಹಾಕಿದರು. ಕಿರಣ್ ಪಾಟೀಲ್ ಅವರ ಕಾವ್ಯಗಳು ಬರೀ ಶಬ್ದಗಳ ಗೋಜಲ್ಲ, ಬದುಕಿನ ಸಾರ್ಥಕತೆಯನ್ನು, ವಿಫಲತೆಯನ್ನು ಬೇವು ಬೆಲ್ಲದೊಂದಿಗೆ ಸಮೀಕರಿಸಿ ಸಾಸಿವೆಯೊಳಗಿನ ಸಾಗರ ಎನ್ನುವ ರೀತಿಯಲ್ಲಿ ಚಿಕ್ಕ ಕವನದಲ್ಲಿ ಯುಗಾದಿಯ ಸಮಗ್ರ ಅರ್ಥವನ್ನು ಕಾವ್ಯವದಲ್ಲಿ ಬಿಂಬಿಸಿದರು. ವಾಸುದೇವ್ ಸೇಡಂ ಅವರು ಮುಸುಕಿನ ಗುದ್ದಾಟದಲ್ಲಿ ಪ್ರೇಯಸಿಯೊಂದಿಗೆ ಸರಸ ಸಲ್ಲಾಪದ ಮಾತುಗಳು ಆಡುವಾಗ ಪತ್ನಿ ಬಂದು ಮೈಮೇಲೆ ರಗ್ಗು ಎಳೆದಾಗ ಆಗುವ ರದ್ದಾಂತವನ್ನು ತಮ್ಮ ಕಾವ್ಯದ ಮೂಲಕ ಪ್ರಸ್ತುತಪಡಿಸಿದರು. ನಾಗೇಂದ್ರಪ್ಪ ಮಾಡ್ಯಾಳ್ ಅವರು ಬಸವಚೈತನ್ಯದ ನಾನಾ ಮಜಲುಗಳನ್ನು ಕಾವ್ಯದ ಮೂಲಕ ಹೊರಸೂಸಿದರು. ಡಾ. ಅಶೋಕ್ ಶೆಟಗಾರ್ ಅವರು ಮಡದಿಯೊಂದಿಗಿನ ಸಂಸಾರದ ಗುಟ್ಟನ್ನು ಕಾವ್ಯದ ಮೂಲಕ ರಟ್ಟುಪಡಿಸಿದರು. ಮಂಗಳಾ ಶೆಟಗಾರ್ ಅವರು ಪತಿ, ಪತ್ನಿಯ ಮಧುರ ಬಾಂಧವ್ಯವನ್ನು ಸೂಜಿಗೆ ಮುತ್ತು ಕೊಡುವ ರೀತಿಯಲ್ಲಿ ಸೂಕ್ಷ್ಮವಾಗಿ ಕಾವ್ಯದ ಜರಿಯಲ್ಲಿ ಹೊರಹಾಕಿದರು. ಪರಮೇಶ್ವರ್ ಶೆಟಗಾರ್ ಅವರು ಯುಗಾದಿಯ ಬೇವು ಬೆಲ್ಲವನ್ನು ಹಂಚಿಕೊಳ್ಳುವ ರೀತಿಯನ್ನು ಕಾವ್ಯದಲ್ಲಿ ಪ್ರಸ್ತುತಪಡಿಸಿದರು.
ಸಮಾರಂಭದಲ್ಲಿ ಬೋಧಿವೃಕ್ಷದ ಸುಭಾಷ್ ಚಕ್ರವರ್ತಿ, ಭೀಮರಾವ್ ಕೋಗನೂರ್, ಶರಣು ಪಟ್ಟಣಶೆಟ್ಟಿ, ಸಂಗಯ್ಯ ಹಳ್ಳದಮಠ್, ಕಾರ್ತಿಕ್ ಹೈಟ್ಸ್‍ನ ಮಹಿಳೆಯರು ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ರಘುವೀರ್ ಅವರು ವಹಿಸಿದ್ದರು. ಡಾ. ಅಶೋಕ್ ಶಟಗಾರ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು. ಆರಂಭದಲ್ಲಿ ಸಂಗಯ್ಯ ಹಳ್ಳದಮಠ್ ಅವರ ವಚನ ಗಾಯನದೊಂದಿಗೆ ಪ್ರಾರ್ಥನಾಗೀತೆ ಹಾಡಿದರು.