ಯುಗಾದಿಯಂದು 6ನೇ ವಾರ್ಷಿಕೋತ್ಸವ

ಸತ್ತೂರು, ಏ 10: ಸತ್ತೂರಿನ ನಾರಾಯಣ ಪಾರಾಯಣ ಬಳಗದ 6ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಇದೇ ದಿ. 13 ರಂದು ಸಾಯಂಕಾಲ 5-30 ಘಂಟೆಗೆ, ಶ್ರೇಯಸ ಕಾಲನಿಯಲ್ಲಿರುವ 8ನೇ ಪ್ಲಾಟ, ಸಂಜೀವ ಜೋಶಿಯವರ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದೆ.
ಪಂಚಾಂಗ ಶ್ರವಣ, ಪಾರಾಯಣ, ವರದಿ ವಾಚನ, ಉಪನ್ಯಾಸ, ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ಮುಖ್ಯ ಅತಿಥಿಗಳಾಗಿ ಡಾ. ವಾದಿರಾಜಾಚಾರ್ಯ ತಡಕೋಡ ಇವರು ಆಗಮಿಸಲಿದ್ದಾರೆ ಎಂದು ಬಳಗದ ಕಾರ್ಯದರ್ಶಿಗಳಾದ ರಘೋತ್ತಮ ಅವಧಾನಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 6360810794 ಸಂಪರ್ಕಿಸಬಹುದು.