ಯುಕೆಯಿಂದ ಬಂದ ೪೦ ಮಂದಿಗೆ ಕೊರೊನಾ

ನವದೆಹಲಿ, ಜ. ೩- ಇತ್ತೀಚೆಗೆ ಯುಕೆಯಿಂದ ದೆಹಲಿಗೆ ಆಗಮಿಸಿದ ಒಟ್ಟು ೪೦ ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ದೆಹಲಿಯಲ್ಲಿ ಶನಿವಾರ ೪೯೪ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿ ೧೪ ಮಂದಿ ಸಾವನ್ನಪ್ಪಿದ್ದಾರೆ. ಇದು ಏಳು ತಿಂಗಳಲ್ಲೇ ಅತ್ಯಂತ ಅತಿ ಕಡಿಮೆ ಪ್ರಕರಣವಾಗಿದ್ದು,ಪಾಸಿಟವ್ ಪ್ರಮಾಣವು ಶೇಕಡಾ ೦.೭೩ ರಷ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾಸಿಗೆಗಳ ಲಭ್ಯತೆಯನ್ನು ಕಡಿಮೆ ಮಾಡಿದ ನಂತರವೂ, ೧೦,೫೦೦-೧೧,೦೦೦ ಹಾಸಿಗೆಗಳು ಇನ್ನೂ ಖಾಲಿ ಇವೆ. ಪ್ರಸ್ತುತ ೨ ಸಾವಿರ ಹಾಸಿಗೆಗಳನ್ನು ಮಾತ್ರ ರೋಗಿಗಳು ಉಪಯೋಗಿಸುತ್ತಿದ್ದಾರೆ” ಎಂದು ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಟ್ಟು ೪೦ ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರನ್ನು ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. “ಇದರೊಂದಿಗೆ, ನಾಲ್ಕು ಖಾಸಗಿ ಆಸ್ಪತ್ರೆಗಳಿಗೂ (ಸಾಂಸ್ಥಿಕ ಪ್ರತ್ಯೇಕ ಘಟಕಗಳಿಗೆ) ಅಧಿಕಾರ ನೀಡಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು ಜೈನ್ ಹೇಳಿದರು.
ಈ ಎರಡು ಪ್ರಕರಣಗಳು ಹೊಸ ಸೋಂಕಿನಿಂದ ಕೂಡಿವೆಯೇ ಅಥವಾ ಇಲ್ಲವೇ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿಲ್ಲ.
ಡಿಸೆಂಬರ್ ೨೯ ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಜೈನ್, ಇತ್ತೀಚೆಗೆ ಯುಕೆ ಯಿಂದ ದೆಹಲಿಗೆ ಬಂದ ನಂತರ ಒಟ್ಟು ೩೮ ಜನರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಅವರನ್ನು ಎಲ್‌ಎನ್‌ಜೆಪಿ ಆಸ್ಪತ್ರೆ ಆವರಣದಲ್ಲಿ ಪ್ರತ್ಯೇಕ ಘಟಕದಲ್ಲಿ ಇರಿಸಲಾಗಿದೆ ಎಂದು ಹೇಳಿದ್ದರು.