ಯುಕೆಪಿ 3ನೇ ಹಂತದಲ್ಲಿ ಮುಳುಗಡೆಯಾಗುವ ರೈತರ ಜಮೀನುಗಳಿಗೆ ಏಕರೂಪ ಬೆಲೆ ನಿಗದಿಪಡಿಸುವಂತೆ ಸಿದ್ದರಾಮಯ್ಯನವರಿಗೆ ಮನವಿ

ವಿಜಯಪುರ, ಶೇ.24-ಯುಕೆಪಿ 3ನೇ ಹಂತದಲ್ಲಿ ಮುಳುಗಡೆಯಾಗುವ ಎಲ್ಲಾ ರೈತರ ಜಮೀನುಗಳಿಗೆ ಏಕರೂಪ ಬೆಲೆ ನಿಗದಿಪಡಿಸುವಂತೆ ಬಬಲೇಶ್ವರ ತಾಲೂಕಿನ ರೈತರ ನಿಯೋಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಈ ಹಿಂದೆ ತಾವು ಮುಖ್ಯ ಮಂತ್ರಿಯಾಗಿದ್ದಾಗ ಹಾಗೂ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ನಮ್ಮ ಬೇಡಿಕೆಯನ್ನು ಒಪ್ಪಿ, ಶಿಫಾರಸ್ಸು ಮಾಡಿದ್ದೀರಿ. ಆದರೆ ನಂತರ ಅದು ಕಾರ್ಯಗತಗೊಂಡಿಲ್ಲ. ಕಾರಣ ವಿರೋಧ ಪಕ್ಷದ ನಾಯಕರಾದ ತಾವು ಸದನದಲ್ಲಿ ಈ ವಿಷಯವನ್ನು ಚರ್ಚಿಸಿ, ಏಕರೂಪ ಬೆಲೆ ನಿಗದಿ ಪಡಿಸಲು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ರೈತ ಮುಖಂಡರ ನಿಯೋಗ ಕೋರಿದರು.
ರೈತರ ಮನವಿ ಸ್ವೀಕರಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಮಾಜಿ ನೀರಾವರಿ ಸಚಿವ ಎಂ.ಬಿ.ಪಾಟೀಲರೊಂದಿಗೆ ಚರ್ಚಿಸಿ, ಈ ವಿಚಾರವನ್ನು ಪ್ರಸ್ತಾಪಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್, ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಉಪಾಧ್ಯಕ್ಷ ಎಚ್.ಆರ್.ಬಿರಾದಾರ, ಜಿ.ಪಂ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ತಾಲೂಕು ಪಂಚಾಯತ ಮಾಜಿ ಅಧ್ಯಕ್ಷ ಶ್ರೀಶೈಲ ಸುಳ್ಳದ, ಭೀಮನಗೌಡ ಪಾಟೀಲ, ರಾಮನಗೌಡ ಪಾಟೀಲ, ವೆಂಕಟೇಶ ನಿಡೋಣಿ, ಸುಭಾಸ ಪಾಟೀಲ, ಸಂಗನಗೌಡ ಪಾಟೀಲ, ಸಂಗಣ್ಣ ಹುಣಸಿಕಟ್ಟಿ, ಶಿವಾನಂದ ಕಳ್ಳಿಗುದ್ದಿ, ಹಣಮಂತ ಮುದಕರೆಡ್ಡಿ, ವೆಂಕಣ್ಣ ಬಿರಾದಾರ, ರಮೇಶ ಗಡದಾನಿ, ವಿಠ್ಠಲ ಶೇಬಾನಿ, ಸುರೇಶ ಪೂಜಾರಿ, ಗೋವಿಂದಪ್ಪ ಶಿರಬೂರ, ಮಹೇಶ ಯರಗಟ್ಟಿ, ಸುರೇಶ ಬಿರಾದಾರ, ಸುರೇಶ ಕೊಡಬಾಗಿ, ಸುನೀಲಗೌಡ ಪಾಟೀಲ, ಮಹಾದೇವ ಮಾಸರೆಡ್ಡಿ, ವಿಜಯ ಸುತಗುಂಡಿ, ವೆಂಕಪ್ಪ ಚಿಕ್ಕಗಲಗಲಿ, ಅರವಿಂದ ಗುರಡ್ಡಿ, ವಿಠ್ಠಲ ಪೋತರೆಡ್ಡಿ, ಗಿರೀಶ ಪಾಟೀಲ ಸೇರಿದಂತೆ ಚಿಕ್ಕಗಲಗಲಿ, ಜೈನಾಪುರ, ಲಿಂಗದಳ್ಳಿ, ಹಂಗರಗಿ, ಬೆಳ್ಳುಬ್ಬಿ, ಬಬಲಾದ, ದೇವರಗೆಣ್ಣೂರ, ಕಣಬೂರ, ಹೊಸೂರ, ಸುತಗುಂಡಿ, ಜಂಬಗಿ, ಶಿರಬೂರ, ಮಂಗಳೂರ, ತಾಜಪೂರ ಗ್ರಾಮದ ರೈತರು ಉಪಸ್ಥಿತರಿದ್ದರು.