ಯುಕೆಜಿ ಮಕ್ಕಳ ಗ್ರಾಜುಯೇಷನ್ ಡೇ

ಕಲಬುರಗಿ:ಮಾ.25:ಎಸ್ ಆರ್ ಎನ್ ಮೆಹತಾ ಶಾಲೆಯಲ್ಲಿ ಯುಕೆಜಿ ಮಕ್ಕಳ ಗ್ರಾಜುಯೇಷನ್ ಡೇಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶ್ರೀ ಪ್ರಫುಲ್ ಪಾರೆಕ್, ನಾಗಪುರ ಮಹಾರಾಷ್ಟ್ರದಿಂದ ದೂರ ಸಂಪರ್ಕದ ಮೂಲಕ ಉಪಸ್ಥಿತ ರಿದ್ದು ,ಪಾಲಕರು ಮಕ್ಕಳ ಪಾಲನೆ ಪೆÇೀಷಣೆಯಲ್ಲಿ ಅನುಸರಿಸಬೇಕಾದ ಏಳು ವಿಷಯಗಳನ್ನು ಅತಿ ಸರಳ ರೀತಿಯಲ್ಲಿ ತಿಳಿಸಿಕೊಟ್ಟರು. ಮತ್ತೋರ್ವ ಅತಿಥಿಯಾದ ಡಾ. ಅರುಂಧತಿ ಪಾಟೀಲ್ ಮಕ್ಕಳ ನರವಿಜ್ಞಾನಿ ,ಅವರು ಮಕ್ಕಳಲ್ಲಿ ಸಾಮಾಜಿಕ ಮಾನಸಿಕ ಬೆಳವಣಿಗೆಯಲ್ಲಿ ಪೆÇೀಷಕರ ಪಾತ್ರವನ್ನು ತಿಳಿಸುತ್ತಾ ಮಕ್ಕಳ ಒಳ್ಳೆಯ ನಡವಳಿಕೆ ಕೇವಲ ಪಾಲಕ ಪೆÇೀಷಕರ ನಡವಳಿಕೆಯನ್ನೇ ಅವಲಂಬಿಸುತ್ತದೆ ಎಂದು ಕಥೆಯ ಮೂಲಕ ಮನಮುಟ್ಟುವಂತೆ ಮಾತನಾಡಿದರು ಕಾರ್ಯಕ್ರಮದಲ್ಲಿ ಎಸ್ ಆರ್ ಏನ್ ಮೆಹತಾ ಶಾಲೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರೀತಮ್ ಮೆಹತಾ,ವ್ಯವಸ್ಥಾಪಕ ಟ್ರಸ್ಟಿ ಆದ ಶ್ರೀ ಚಕೋರ ಮೆಹತಾ , ಪ್ರಾಂಶುಪಾಲರಾದ ಶ್ರೀಮತಿ ಪ್ರೀತಿ ಮೆಹತಾ , ಹಾಗೂ ಶಾಲೆಯ ಸಿಬ್ಬಂದಿ ವರ್ಗದವರೆಲ್ಲರೂ ಉಪಸ್ಥಿತರಿದ್ದರು.