ಯುಎಸ್‌ಗೆ ತಿರುಗೇಟು ನೀಡಿದ ರಶ್ಯಾ

ಮಾಸ್ಕೋ, ಎ.೧೭- ಅಮೆರಿಕಾ ಹಾಗೂ ರಶ್ಯಾ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಕೆಲ ದಿನಗಳ ಹಿಂದೆ ರಶ್ಯಾದ ೧೦ ರಾಜತಾಂತ್ರಿಕರನ್ನು ಅಮೆರಿಕಾ ಉಚ್ಛಾಟಿಸಿದ್ದು, ಇದೀಗ ರಶ್ಯಾ ಇದಕ್ಕೆ ತಿರುಗೇಟು ನೀಡಿದೆ. ಇದೀಗ ನಡೆದ ಬೆಳವಣಿಗೆಯಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಸರ್ಕಾರದ ಹಲವು ಅಧಿಕಾರಿಗೆ ರಶ್ಯಾ ಪ್ರವೇಶಿಸದಂತೆ ನಿಷೇಧ ಹೇರಲಾಗಿದೆ.
ಅಮೆರಿಕಾ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿದ ಹಿನ್ನೆಲೆಯಲ್ಲಿ ರಶ್ಯಾದ ೧೦ ರಾಜತಾಂತ್ರಿಕರನ್ನು ಇತ್ತೀಚಿಗೆ ಅಮೆರಿಕಾ ಉಚ್ಛಾಟಿಸಿದ್ದು, ಸದ್ಯದ ಪರಿಸ್ಥಿತಿ ಉಲ್ಬಣಕ್ಕೆ ಕಾರಣವಾಗಿದೆ. ಇದೀಗ ಅಮೆರಿಕಾಗೆ ರಶ್ಯಾದ ತನ್ನದೇ ರೀತಿಯಲ್ಲಿ ಆಘಾತ ನೀಡಿದೆ. ಬೈಡೆನ್ ಸರ್ಕಾರದ ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್, ಬಿಡೆನ್‌ನ ಮುಖ್ಯ ದೇಶೀಯ ನೀತಿ ಸಲಹೆಗಾರ ಸುಸಾನ್ ರೈಸ್ ಮತ್ತು ಎಫ್‌ಬಿಐ ಮುಖ್ಯಸ್ಥ ಕ್ರಿಸ್ಟೋಫರ್ ವ್ರೇ ಅವರನ್ನು ರಷ್ಯಾಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗುವುದು ಎಂದು ರಶ್ಯಾ ತಿಳಿಸಿದೆ. ಅಲ್ಲದೆ ಪೋಲ್ಯಾಂಡ್‌ನ ಐವರು ಅಧಿಕಾರಿಗಳಿಗೂ ಕೂಡ ಇದೇ ರೀತಿಯ ನಿಷೇಧ ಹೇರಲಾಗಿದೆ.