ಯಾಸೀನ್‌ಗೆ ತಪ್ಪಿದರೂ ಮುಸ್ಲೀಂರಿಗೆ ಟಿಕೆಟ್

ರಾಯಚೂರು.ಮೇ.೨೭- ರಾಯಚೂರು ವಿಧಾನಸಭಾ ಕ್ಷೇತ್ರದಿಂದ ಮುಂಬರುವ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ಹೊರತು ಪಡಿಸಿದರೇ, ಅನ್ಯ ಸಮುದಾಯಗಳಿಗೆ ಟಿಕೆಟ್ ನೀಡುವುದಿಲ್ಲವೆಂದು ಮಾಜಿ ನಗರಸಭೆ ಸದಸ್ಯ ಲಕ್ಷ್ಮೀರೆಡ್ಡಿ ಅವರು ಹೇಳಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುತ್ತಲೇ ಬರಲಾಗಿದೆ. ಮಾಜಿ ಶಾಸಕ ಸೈಯದ್ ಯಾಸೀನ್ ಅವರಿಗೆ ಟಿಕೆಟ್ ನೀಡದಿದ್ದರೇ ಸ್ಥಳೀಯ ಅಲ್ಪಸಂಖ್ಯಾತ ಮುಖಂಡರಾದ ಬಷೀರುದ್ದೀನ್, ಅಬ್ದುಲ್ ಕರೀಂ, ಜಾವೀದ್ ಉಲ್ ಹಕ್ ಅಥವಾ ಬೇರೆ ಯಾರಿಗಾದರೂ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವುದು ನಿಶ್ಚಿತ. ಕಾಂಗ್ರೆಸ್ ಪಕ್ಷ ಈ ಕ್ಷೇತ್ರವನ್ನು ಅಲ್ಪಸಂಖ್ಯಾತರ ಕ್ಷೇತ್ರವನ್ನಾಗಿ ಪರಿಗಣಿಸಿದೆಂದರು. ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿ ನಗರಸಭೆಯ ಸಹಕಾರಕ್ಕಾಗಿ ಇತ್ತೀಚಿಗೆ ಕರೆದ ಸಭೆಯಲ್ಲಿ ನಡೆದ ಗೊಂದಲ ಮತ್ತು ವಾಗ್ವಾದ ಅತ್ಯಂತ ದುರದೃಷ್ಟಕರವಾಗಿದೆ.
ಇದರಿಂದ ನಾಗರೀಕರೂ ಅಸಮಾಧಾನಗೊಳ್ಳುವಂತಾಗಿದೆ. ನಗರಸಭೆ ಸದಸ್ಯರು ತಮ್ಮ ತಮ್ಮ ವಾರ್ಡಿಗೆ ಜನರಿಂದ ಆಯ್ಕೆಗೊಂಡ ಪ್ರತಿನಿಧಿಗಳಾಗಿದ್ದಾರೆ. ನೀವೇ ನಿಮ್ಮ ನಿಮ್ಮ ವಾರ್ಡ್‌ಗಳಲ್ಲಿ ಸಭೆ ಕರೆದು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಕೊರೊನಾ ಮಹಾಮಾರಿ ವಾರ್ಡ್ ಮಟ್ಟದಲ್ಲಿ ನಿಯಂತ್ರಿಸುವ ಅಗತ್ಯವಿದೆ. ವಾರ್ಡ್ ಜನಪ್ರತಿನಿಧಿಗಳ ಸಹಾಯ ಸಹಕಾರ ಅತ್ಯಂತ ಮುಖ್ಯವಾಗಿದೆಂದು ಅವರು ತಿಳಿಸಿದ್ದಾರೆ.