ಯಾವ ಸರ್ಕಾರ ಮಾಡದ ಕಾರ್ಯ ಬಿಜೆಪಿ ಮಾಡಿದೆ

ರಾಯಚೂರು ಮಾ ೨೫
ಸತತ ಮೂವತ್ತು ವರ್ಷಗಳಿಂದ ಹತ್ತಾರು ಸರ್ಕಾರಗಳ ಮುಂದೆ ಮೀಸಲಾತಿ ಬೇಡಿಕೆ ಇಡುತ್ತಲೇ ಇದ್ದರೂ, ಯಾವ ಸರ್ಕಾರವಾಗಲಿ, ಪಕ್ಷಗಳಾಗಲಿ, ನಮ್ಮ ಎಸ್ಟಿ ಸಮುದಾಯಗಳ ಅಳಲಿಗೆ ಸ್ಪಂದಿಸಲೇ ಇಲ್ಲ, ಆದರೆ ಕಳೆದ ಆರು ತಿಂಗಳ ಹಿಂದೆ ಮೀಸಲಾತಿ ಮಿತಿಯನ್ನ ಹೆಚ್ಚಿಸಿ, ದಲಿತ ಸಮುದಾಯಗಳ ಬೆಂಬಲಕ್ಕೆ ಬಂದಿದ್ದ ಬಿಜೆಪಿ ಸರ್ಕಾರ, ಈಗ ಮತ್ತೆ ಎಸ್ಸಿ ಮಿಸಲಾತಿಯಲ್ಲಿನ, ಒಳ ಮೀಸಲಾತಿ ಪ್ರಸ್ತಾವನೆಯನ್ನ ಪುರಸ್ಕರಿಸಿ, ಎಸ್ಸಿ ಸಮುದಾಯದ ಎಲ್ಲ ಉಪಜಾತಿಗಳಿಗೂ ನ್ಯಾಯ ಒದಗಿಸುವುದರ ಜೊತೆಗೆ ಮೂರು ದಶಕಗಳ ಹೋರಾಟಕ್ಕೆ ಜಯ ದೊರಕಿಸಿ ಕೊಟ್ಟಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಎಸ್ಸಿ ಮೋರ್ಚಾ ಪ್ರಭಾರಿಯಾಗಿರುವ ಶಾಂತಕುಮಾರ ಉಪ್ರಾಳ(ಸಿಂಗಂ) ಸಂತೋಷ ವ್ಯಕ್ತಪಡಿಸಿದರು.
ನಿನ್ನೆ ನಡೆದ ವಿಶೇಷ ಸಂಪುಟ ಸಭೆಯಲ್ಲಿ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಹಾಗೂ ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉಳಿದ ಸಚಿವರೆಲ್ಲರು ಒಕ್ಕೊರಲಿನಿಂದ, ಒಳ ಮೀಸಲಾತಿ ಪ್ರಸ್ತಾವನೆಯನ್ನು ಅಂಗೀಕರಿಸಿ, ಪರಿಶಿಷ್ಟ ಜಾತಿ ಗಳನ್ನ ನಾಲ್ಕು ಭಾಗಗಳಾಗಿ ವಿಂಗಡಿಸಿ, ಪ್ರತಿ ಭಾಗದಲ್ಲಿನ ಜಾತಿಗಳಿಗೂ ಕೂಡ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನ ನಿಗದಿಪಡಿಸಿ, ನಮ್ಮ ಎಲ್ಲ ೧೦೨ ಜಾತಿಗಳಿಗೆ ನ್ಯಾಯ ಒದಗಿಸಿದ ಭಾರತೀಯ ಜನತಾ ಪಾರ್ಟಿಯ ಸರ್ಕಾರಕ್ಕೆ ಹಾಗೂ ಇಂತಹ ಐತಿಹಾಸಿಕ ನಿರ್ಧಾರದ ಬೆನ್ನಿಗೆ ನಿಂತು ಬೆಬಂಲಿಸಿದ ಬಿಜೆಪಿ ಪಕ್ಷದ ಎಲ್ಲ ವರಿಷ್ಠರಿಗೆ ಹಾಗೂ ವಿಶೇಷವಾಗಿ ಬಿಜೆಪಿ ರಾಜ್ಯ ಎಸ್ ಟಿ ಮೋರ್ಚಾ ಅಧ್ಯಕ್ಷರಾಗಿ, ಮೀಸಲಾತಿ ಹೆಚ್ಚಳಾತಿಗೆ ಶ್ರಮಿಸಿದ್ದ ನಮ್ಮ ತಿಪ್ಪರಾಜು ಹವಲ್ದಾರ್ ಅವರಿಗೆ, ಬಿಜೆಪಿ ಎಸ್ಸಿ ಮೋರ್ಚಾ ರಾಯಚೂರು ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.
ಈ ಐತಿಹಾಸಿಕ ನಿರ್ಣಯ ಅತ್ಯಂತ ಕಠಿಣ ಮತ್ತು ಸವಾಲಿನದ್ದಾಗಿತ್ತು, ಇಲ್ಲಿ ಸ್ವಲ್ಪ ಎಡವಿದ್ದರೂ ಸಮಾಜಗಳ ನಡುವೆ ಕಲಹಕ್ಕೆ ನಾಂದಿಯಾಗುವ ಸಾಧ್ಯತೆಯಿತ್ತು, ಆದರೆ ಮೊದಲು ಮೀಸಲಾತಿ ಹೆಚ್ಚಿಸಿ, ನಂತರ ಒಳಮೀಸಲಾತಿಯನ್ನು ಜನಸಂಖ್ಯೆ ಗೆ ಅನುಗುಣವಾಗಿ ನಿಗದಿಪಡಿಸಿ, ಎಲ್ಲ ಸಮುದಾಯಗಳಿಗೂ ಸಮಾನ ನ್ಯಾಯ, ಒದಗಿಸಿ, ಯಾವುದೇ ಅಂತಃಕಲಹಕ್ಕೆ ಅವಕಾಶವಿಲ್ಲದಂತೆ ನಿಭಾಯಿಸಿದ ನಮ್ಮ ಮುಖ್ಯಮಂತ್ರಿಗಳು ಮತ್ತು ಬಿಜೆಪಿಯ ವರಿಷ್ಠರಿಗೆ ಮತ್ತೊಮ್ಮೆ ಎಲ್ಲ ಸಮಾಜಗಳ ಪರವಾಗಿ, ನೊಂದ ದಲಿತರ ಪರವಾಗಿ ಅನಂತ ಅನಂತ ಧನ್ಯವಾದಗಳನ್ನು ತಿಳಿಸಿದರು.