ಯಾವ ಭಾಷೆಗೂ ಇರದ ಶಕ್ತಿ ನಮ್ಮ ಕನ್ನಡ ಭಾಷೆಗಿದೆ : ಅಫ್ಫಾನ್ ಮಾಸ್ಟರ್

ಅಥಣಿ :ನ.3: ನಮ್ಮ ಕನ್ನಡ ಭಾಷೆಯೇ ನಮ್ಮ ಹೆಮ್ಮೆ. ಯಾವ ಭಾಷೆಗೂ ಇರದ ಶಕ್ತಿ ಕನ್ನಡ ಭಾಷೆಗಿದೆ. ನಾವು ಕನ್ನಡ ಉಳಿಸಿ ಬೆಳೆಸುವ ಜೊತೆಗೆ ಕರ್ನಾಟಕದಲ್ಲಿ ವಾಸವಾಗಿರುವ ಬೇರೆ ರಾಜ್ಯದ ಜನರಿಗೂ ಕನ್ನಡ ಕಲಿಸುವ ಮೂಲಕ ನಮ್ಮ ಭಾಷೆಯ ರಕ್ಷಣೆಗೆ ಮುಂದಾಗಬೇಕಿದೆ. ಆ ಮೂಲಕ ಕನ್ನಡ ನಾಡು, ನುಡಿ, ಸಂಸ್ಕøತಿ ಹಾಗೂ ಪರಂಪರೆಯನ್ನು ಉಳಿಸುವ ಬದ್ಧತೆಯನ್ನು ನಾವು ಮೆರೆಯಬೇಕಿದೆ ಎಂದು ಕರವೇ ಜಿಲ್ಲಾ ಸಂಚಾಲಕ ಅಫ್ಫಾನ್ ಮಾಸ್ಟರ್ ಹೇಳಿದರು,
ಅವರು ಪಟ್ಟಣದ ಅಂಬೇಡ್ಕರ್ ಸರ್ಕಲ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಆಟೋ ರಿಕ್ಷಾ ಚಾಲಕರ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು,
ಮಾತೃಭಾಷೆಯನ್ನು ಗೌರವಿಸುವುದು ತಾಯಿಯನ್ನು ಗೌರವಿಸಿದಂತೆ. ಮಾತೃ ಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡುವ ಹಿನ್ನೆಲೆಯಲ್ಲಿ ನಾವೆಲ್ಲರೂ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸೋಣ. ನಮ್ಮ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸೋಣ, ಎಂದರು,
ಈ ಸಂದರ್ಭದಲ್ಲಿ ಕೆರವೇ ಪದಾಧಿಕಾರಿಗಳು, ಕಾರ್ಯಕರ್ತರು, ಸೇರಿದಂತೆ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.