ಯಾವ ಪುರುಷಾರ್ಥಕ್ಕೆ ಜಾತಿಗಳ ಸಮಾವೇಶ

ಕೋಲಾರ, ಏ.೧೧: ಜಾತಿ ಜಾತಿಗಳ ಮಧ್ಯೆ ವಿಷ ಬೀಜ ತುಂಬುವ ರಮೇಶ್‌ಕುಮಾರ್ ಅವರೇ ನಿಮಗೆ ಚುನಾವಣೆ ಸಮೀಪಿಸುತ್ತಿದ್ದಂತೆ ಜಾತಿಗಳ ಜ್ಞಾಪಕಕ್ಕೆ ಬರುವುದು ಎಷ್ಟರ ಮಟ್ಟಿಗೆ ಸರಿ ? ಎಂಬುದನ್ನು ನೀವೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕೋಲಾರ ಜಿಲ್ಲಾ ಬಿಜೆಪಿ ಯುವ ಮುಖಂಡ ಮದನಹಳ್ಳಿ ಸೋಮಶೇಖರ್‌ರೆಡ್ಡಿ ವಂಗ್ಯವಾಡಿದ್ದಾರೆ.
ರಮೇಶ್ ಕುಮಾರ್ ರವರೇ ಶ್ರೀನಿವಾಸಪುರ ಕ್ಷೇತ್ರದಲ್ಲಿ ಒಕ್ಕಲಿಗ ಸಮಾವೇಶ ಮಾಡಿದೀರ, ಒಕ್ಕಲಿಗರ ಸಮುದಾಯದ ಬಗ್ಗೆ ಮಾತಾಡಲು ಒಕ್ಕಲಿಗ ಸಮಾವೇಶ ಮಾಡವ ನೈತಿಕತೆ ಉಳಿಸಿಕೊಂಡಿದ್ದೀರಾ?, ನಿಮ್ಮನ್ನು ಆರು ಬಾರಿ ಶಾಸಕರನ್ನಾಗಿ ಮಾಡಲು ಶ್ರಮಿಸಿದಂತ ಹಿರಿಯ ಒಕ್ಕಲಿಗ ಮುಖಂಡರಾದ ಶೇಷಾಪುರ ಗೋಪಾಲ್, ದಳಸನೂರು ಗೋಪಾಲಕೃಷ್ಣ ರವರನ್ನು ಯಾವ ರೀತಿ ನಡೆಸಿಕೊಂಡಿದ್ದೀರಿ? ಅವರು ಬೆಳೆದರೆ ನನ್ನ ಶಾಸಕ ಸ್ಥಾನಕ್ಕೆ ಎಲ್ಲಿ ಕುತ್ತು ಬರುತ್ತದೋ ಎಂದು ಒಕ್ಕಲಿಗ ಸಮುದಾಯದ ಮುಖಂಡರನ್ನು ತುಳಿಯುವುದೇ ನಿಮ್ಮ ಕೆಲಸವಾಗಿದೆ ಎಂದು ದೂರಿದ್ದಾರೆ
ಎಂ.ಎಲ್.ಸಿ ಎಂ.ಎಲ್.ಅನಿಲ್ ಕುಮಾರ್ ನಿಮ್ಮ ಪರ ಪ್ರಚಾರ ಮಾಡುತ್ತಿದ್ದಾರೆ ಐದು ವರ್ಷದ ಹಿಂದೆ ಎಂ.ಎಲ್.ಸಿ ಚುನಾವಣೆಯಲ್ಲಿ ಅನಿಲ್ ಕುಮಾರ್ ರವರು ದಲಿತ ನಾಯಕ ಕೆ.ಎಚ್ ಮುನಿಯಪ್ಪ ರವರ ಗುಂಪಲ್ಲಿ ಇದ್ದರು ಎಂಬ ಕಾರಣಕ್ಕೆ ಅನಿಲ್ ಕುಮಾರ್ ರವರನ್ನು ಸೋಲಿಸಿದ್ದು ಇದೇ ರಮೇಶ್, ಆದರೆ ಅನಿಲ್ ಕುಮಾರ್ ರವರು ತಮ್ಮ ಹಿತಶತ್ರುಗೆ ಸಪೋರ್ಟ್ ಮಾಡುತ್ತಿದ್ದಾರೆ. ನನ್ನಂತ ಒಕ್ಕಲಿಗ ಯುವ ಮುಖಂಡರ ಮೇಲೆ ಸುಳ್ಳು ಕೇಸುಗಳನ್ನು ಹಾಕಿಸಿರುವುದು ಇದೇ ರಮೇಶ್ ಕುಮಾರ್ ಇಂತಹವರು ಜಾತಿಗಳ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಕುಟುಕಿದ್ದಾರೆ.