ಯಾವ ಕಲೆಗೂ ಯಾವುದೇ ಜಾತಿ ಧರ್ಮವಿಲ್ಲ : ದೇವಿಂದ್ರಪ್ಪ

ಕಲಬುರಗಿ,ಸೆ.18: ಯಾವುದೇ ಕಲೆ ಇರಲಿ ಅದಕ್ಕೆ ಯಾವುದೇ ಜಾತಿ ಧರ್ಮವಿಲ್ಲವೆಂದು ಅದು ಎಲ್ಲರಲ್ಲೂ ಹುಟ್ಟತ್ತದೆ ಎಂದು ಹಿರಿಯ ಕಲಾವಿದರಾದ ಟಿ.ದೇವಿಂದ್ರಪ್ಪ ಹೇಳಿದರು.
ಅವರು ನಗರದ ಆಯಾಜ್ ಆರ್ಟ್ ಗ್ಯಾಲರಿಯಲ್ಲಿ ಗುಲಬರ್ಗಾ ಅಕಾಡೆಮಿ ಆಫ್ ಆರ್ಟ್, ಕಲ್ಚರ್ ಅ್ಯಂಡ್ ಲಿಟ್ರೇಚರ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಜಾನಪದ ಗೀತೆಗಳ ಗಾಯನ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕಲಾವಿದರಿಗೆ ಸನ್ಮಾನ ಕಾರ್ಯಕ್ರವನ್ನು ಉದ್ಘಾಟಿಸುತ್ತಾ ಮಾತನಾಡಿದರು. ಸ್ಥಳೀಯ ಕಲಾವಿದರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮಯ ಸಂಗತಿ. ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ ಗುಲಬರ್ಗಾ ಅಕಾಡೆಮಿ ಸಂಸ್ಥೆ ಇನ್ನು ಹೆಚ್ಚಿನ ರೀತಿಯಲ್ಲಿ ಸೇವೆಗೈಯಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೇಂದ್ರ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ಆಯಾಜೋದ್ಧಿನ ಪಟೇಲ್ ಅವರು ಮಾತನಾಡುತ್ತಾ ಕಲೆ, ಕಲಾವಿದರಿಗೆ ಒಂದು ಮೌಲ್ಯವಿದೆ ಅದನ್ನು ಕಾರ್ಯರೂಪಕ್ಕೆ ತರಬೇಕಾದರೆ ಸತತ ಪ್ರಯತ್ನ ದುಡಿಮೆಯಿಂದ ಮಾತ್ರ ಸಾಧ್ಯವಾಗಿದೆ. ಒಂದು ಯಶಸ್ಸು ಪಡೆಯಬೇಕಾದರೆ ಅದರ ಹಿಂದೆ ಸಾಕಷ್ಟು ಶ್ರಮವಿರುತ್ತದೆ ಅದನ್ನು ಗುರುತಿಸುವಂತಹ ಕಾರ್ಯವನ್ನು ಸಂಘ, ಸಂಸ್ಥೆಗಳು ಮಾಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಸಂಸ್ಥೆಯ ಕಾರ್ಯದರ್ಶಿ ಚಿದಾನಂದ ಅವರು ಮಾತನಾಡುತ್ತಾ ರಾಜ್ಯ ಸರ್ಕಾರ ನಮ್ಮ ಸಾಂಸ್ಕøತಿಕ ಪರಂಪರೆಯನ್ನು ಉಳಿಸುವುದಕ್ಕೆ ಸಾಕಷ್ಟು ಪ್ರೋತ್ಸಾಹಿಸುತ್ತಾ ಬರುತ್ತಿದೆ. ಅದರ ಸದುಪಯೋಗವನ್ನು ಸಂಸ್ಥೆಗಳು ಪಡೆದು ಕನ್ನಡ, ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ ಎಂದು ಹೇಳಿದರು.
ಕಲೆ, ಕನ್ನಡ ಕುರಿತು ಡಾ.ರೆಹಮಾನ್ ಪಟೇಲ್ ಅವರು ಉಪನ್ಯಾಸ ನೀಡಿದರು ಮತ್ತು ವಿವಿಧ ಕಲಾವಿದರು ಕನ್ನಡ ಜಾನಪದ ಗೀತೆಗಳನ್ನು ಹಾಡುವುದರ ಮೂಲಕ ಗಮನ ಸೆಳೆದರು. ಹಾಗೂ ಕಲಾ ಪ್ರಕಾರದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕಲಾವಿದರನ್ನು ಫಲಕಗಳನ್ನು ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಂಜುಳಾ ಚಿದಾನಂದ, ಹಿರಿಯ ಕಲಾವಿದರಾದ ಡಾ.ನೀಲಾ ಸುಬ್ಬಯ್ಯ, ರಾಜಶೇಖರ್, ಖಾಜಾ ಪಟೇಲ್, ಎಸಾನ್, ರೇವಣಸಿದ್ದಪ್ಪ ಹೊಟ್ಟಿ, ಖನೀಶಾ ನಾಜಿನ್, ಹಾಜಿ ಮಲಂಗ, ಚಂದ್ರಶೇಖರ ದೊಡ್ಡಮನಿ, ಸಾಜೀದ್ ಅಲಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.