ಯಾವುದೇ ಪ್ರಕರಣ ಎದುರಿಸಲು ಸಿದ್ಧ:ಉದಯ್

ಸನಾತನ ಧರ್ಮ ಹೇಳಿಕೆ
ಚೆನ್ನೈ, ಸೆ.೪- ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದೇನೆ. ಆ ಮಾತಿಗೂ ಈಗಲೂ ಬದ್ದ. ಈ ಸಂಬಂಧ ಯಾವುದೇ ಪ್ರಕರಣ ಎದುರಿಸಲು ಸಿದ್ದ ಎಂದು ತಮಿಳುನಾಡು ಮುಖ್ಯಮಂತ್ರಿ ಎ.ಕೆ ಸ್ಟಾಲಿನ್ ಪುತ್ರ ಹಾಗು ಸಚಿವ ಉದಯ್ ನಿಧಿ ಸ್ಟಾಲಿನ್ ಹೇಳಿದ್ದಾರೆ.ಸನಾತನ ಧರ್ಮವನ್ನು ಮಾತ್ರ ಟೀಕಿಸಿದ್ದೇನೆ.ಅದನ್ನು ಕೆಲವರು ನರಮೇಧಕ್ಕೆ ಆಹ್ವಾನಿಸಿದ್ದೇನೆ ಎನ್ನುವ ರೀತಿಯಲ್ಲಿ ಟೀಕೆ ಮಾಡುತ್ತಿದ್ದಾರೆ.ಅವರು ಮಾಡಲಿ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.ಸನಾತನ’ ಧರ್ಮದ ಕುರಿತು ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅವರು ಭಾರತೀಯ ಜನತಾ ಪಕ್ಷವನ್ನು ತಮ್ಮ ಹೇಳಿಕೆಯನ್ನು ’ತಿರುಚಿ’ ಮತ್ತು ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ಕಿಡಿಕಾರಿದ್ದಾರೆ.ನನ್ನ ವಿರುದ್ಧ ಬಿಜೆಪಿ ನಾಯಕರು ಏನೇ ಪ್ರಕರಣ ಹಾಕಿದರೂ ಎದುರಿಸಲು ಸಿದ್ಧನಿದ್ದೇನೆ. ಎಂದ ಅವರು ಇಂಡಿಯಾ ಮೈತ್ರಿಕೂಟಕ್ಕೆ ಬಿಜೆಪಿ ಹೆದರಿದೆ.ಹೀಗಾಗಿ ಇದೆನ್ನೆಲ್ಲಾ ಮಾಡುತ್ತಿದ್ದಾರೆ. ಡಿಎಂಕೆಯ ನೀತಿ ಒಂದೇ ಕುಲ, ಒಂದೇ ದೇವರು” ಎಂದು ಹೇಳಿದ್ದಾರೆ.
’ಕಾಂಗ್ರೆಸ್ ಮುಕ್ತ ಭಾರತ’ ಎಂದು ಪ್ರಧಾನಿ ಮೋದಿ ಹೇಳಿದಾಗ ಕಾಂಗ್ರೆಸ್ಸಿಗರನ್ನು ಕೊಲ್ಲಬೇಕೆ ಎಂದು ಪ್ರಶ್ನಿಸಿದ ಅವರು ಸನಾತನ ಎಂದರೇನು, ಸನಾತನ ಎಂದರೆ ಯಾವುದನ್ನೂ ಬದಲಾಯಿಸಬಾರದು ಮತ್ತು ಎಲ್ಲರೂ ಶಾಶ್ವತರು, ಆದರೆ ದ್ರಾವಿಡ ಮಾದರಿ ಬದಲಾವಣೆಗೆ ಕರೆ ನೀಡುತ್ತದೆ ಎಂದಿದ್ದಾರೆ.
ಬಿಜೆಪಿ ಹೇಳಿಕೆ ತಿರುಚುತ್ತಿದೆ. ಮತ್ತು ಸುಳ್ಳು ಸುದ್ದಿಗಳನ್ನು ಹರಡುವುದು ಅವರ ಸಾಮಾನ್ಯ ಕೆಲಸ, ”ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಪರಂಪರೆ ಮೇಲಿನ ದಾಳಿ
ಪ್ರತಿ ಪಕ್ಷಗಳು ಹಿಂದೂ ಧರ್ಮವನ್ನು ದ್ವೇಷಿಸುತ್ತಾರೆ’ ಸ್ಟಾಲಿನ್ ಪುತ್ರನ ಹೇಳಿಕೆ ’ನಮ್ಮ ಪರಂಪರೆಯ ಮೇಲಿನ ದಾಳಿ’ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ರೀತಿಯ ಹೇಳಿಕೆಯನ್ನು ಹಿಂದೂಗಳು ಕ್ಷಮಿಸುವುದಿಲ್ಲ ಎಂದು ತಿಳಿಸಿದ್ದಾರೆ.