ಯಾವುದೇ ಚಿಲ್ಲರೆ ಮಾತುಗಳಿಗೆ ಬೆಲೆ ಕೊಡಲ್ಲ : ಶಾಸಕ ಲಕ್ಷ್ಮಣ ಸವದಿ

ಅಥಣಿ :ಸೆ.17: ಯಾರೂ ಬಂದು. ಎಲ್ಲಿಂದಲೋ ಬಂದು. ಯಾವುದೇ ತಾಲೂಕಿನಿಂದ ಬಂದು. ಯಾವುದೇ ತಾಲೂಕಿನಲ್ಲಿ ಇಂತಹ ಹೋರಾಟ ಹಾಗೂ ನಟನೆ ಮಾಡುವುದನ್ನ ನಾನು ಬಹಳಷ್ಟು ಕಂಡಿದ್ದೇನೆ. ಇಂತಹ ಯಾವುದೇ ಚಿಲ್ಲರೆ ಮಾತುಗಳಿಗೆ ನಾನು ಬೆಲೆ ಕೊಡಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಅವರು ರಮೇಶ ಜಾರಕಿಹೊಳಿ ತಿರುಗೇಟು ನೀಡಿದರು.
ಅವರು ಅಥಣಿ ಸರಕಾರಿ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿ, ರಮೇಶ ಜಾರಕಿಹೊಳಿಯವರು ಇತ್ತೀಚೆಗೆ ಅಥಣಿಗೆ ಬಂದ ಸಂದರ್ಭದಲ್ಲಿ ಅಥಣಿ ತಾಲೂಕಿನ ಅಧಿಕಾರಿಗಳು ಸ್ಥಳೀಯ ಶಾಸಕರ ಕೈಗೊಂಬೆಯಾಗಿದ್ದಾರೆಂದು ಆರೋಪಿಸಿ, ಇದು ಹೀಗೆ ಮುಂದುವರೆದರೆ ಅಥಣಿಯಲ್ಲಿ ಬಂದು ಹೋರಾಟ ಮಾಡುತ್ತೇನೆ ಎಂದು ಎಚ್ಚರಿಸಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ತಾಲೂಕಿನ ಯಾವ ಅಧಿಕಾರಿಯೂ ಯಾರ ಕೈಗೊಂಬೆಯಲ್ಲ ಡಾ, ಬಾಬಾಸಾಹೇಬ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದ ಚೌಕಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕಾಗುತ್ತದೆ. ಆ ಕೆಲಸವನ್ನ ನಾವು ಮಾಡುತ್ತೇವೆ ಹಾಗೆಯೇ ತಾಲೂಕಿನ ಅಧಿಕಾರಿಗಳು ಸಂವಿಧಾನಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲಿಂದಲೋ ಬಂದು ಇಲ್ಲಿ
ಆರೋಪ ಮಾಡುತ್ತಿರುವುದು ಸರಿಯಲ್ಲ. ಇಂತಹವರ ಬಗ್ಗೆ ನಾನು ತೆಲೆ ಕೆಡಿಸಿಕೊಳ್ಳುವುದಿಲ್ಲ ಈ ಬಗ್ಗೆ ಗಮನ ಹರಿಸುವುದಿಲ್ಲ ಎಂದರು.

ಜಿಲ್ಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ನನ್ನ ನಡುವೆ ಯಾವುದೇ ರೀತಿಯ ಮುಸುಕಿನ ಗುದ್ದಾಟವು ಇಲ್ಲ. ಯಾವುದೇ ರೀತಿಯ ಮುಸುಕಿನ ಗುದ್ದಾಟವು ನಡೆದಿಲ್ಲಾ. ಯಾವುದೇ ವೈಮನಸ್ಸು ಇಲ್ಲ. ಯಾವುದೇ ಭಿನ್ನಾಭಿಪ್ರಾಯ ಕೂಡಾ ಇಲ್ಲ. ಇದೆಲ್ಲವೂ ಮಾಧ್ಯಮಗಳ ಸೃಷ್ಟಿ ಎಂದು ಸ್ಪಷ್ಟಪಡಿಸಿದರು.