ಯಾವುದೇ ಕ್ಷಣ ಯುವತಿ ಹಾಜರು

ಬೆಂಗಳೂರು,ಮಾ.೨೯-ರಾಸಲೀಲೆ ಸಿಡಿ ಪ್ರಕರಣವು ದಿನಕ್ಕೊಂದು ಅಯಾಮ ಪಡೆಯುತ್ತಿದ್ದು ಸಿಡಿ ಯುವತಿಯು ನ್ಯಾಯಾಲಯದ ಅನುಮತಿ ದೊರೆತ ತಕ್ಷಣವೇ ಹಾಜರಾಗಲಿದ್ದಾರೆ.
ಸಿಡಿ ಯುವತಿಯ ಪರ ವಕೀಲ ಜಗದೀಶ್ ಕುಮಾರ್ ಅವರ ನೇತೃತ್ವದ ವಕೀಲರ ತಂಡವು ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ನ ಡೆಪ್ಯುಟಿ ರಿಜಿಸ್ಟ್ರಾರ್ ಅವರನ್ನು ಭೇಟಿಮಾಡಿ ಯುವತಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಅವಕಾಶ ನೀಡುವಂತೆ ವಿನಂತಿಸಿತು.
ಇತಿಹಾಸದಲ್ಲೇ ಮೂದಲು ಪೊಲೀಸರು ಹಾಗೂ ಎಸ್ ಐಟಿಯನ್ನು ನಂಬದೇ ಹೇಳಿಕೆ ದಾಖಲಿಸಲು ಅನುಮತಿ ನೀಡುವಂತೆ ಕೋರಿದ್ದಕ್ಕೆ ಡೆಪ್ಯುಟಿ ರಿಜಿಸ್ಟ್ರಾರ್ ನಿಯಮಾವಳಿ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ.
ಅಲ್ಲದೇ ಸಂತ್ರಸ್ತ ಯುವತಿಯು ನ್ಯಾಯಾಲಯದ ಮಧ್ಯಪ್ರವೇಶಕ್ಕೆ ಕೋರಿ ಯುವತಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದಿದ್ದು ಈ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಸಂತ್ರಸ್ತ ಯುವತಿಯ ಹೇಳಿಕೆಗೆ ಅವಕಾಶ ಕಲ್ಪಿಸುವುದೇ ಎನ್ನುವುದನ್ನು ತಿಳಿದು ಅವಕಾಶ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಯುವತಿಯ ಪರ ವಕೀಲರ ತಂಡಕ್ಕೆ ಡೆಪ್ಯುಟಿ ರಿಜಿಸ್ಟ್ರಾರ್ ಮಾಹಿತಿ ನೀಡಿದ್ದಾರೆ.
ಡೆಪ್ಯುಟಿ ರಿಜಿಸ್ಟ್ರಾರ್ ಗೆ ಮನವಿ ಮಾಡಿದ ನಂತರ ಕೋರ್ಟ್ ನಿಂದ ಹೊರಬಂದು ಮಾತನಾಡಿದ ವಕೀಲ ಜಗದೀಶ್ ಕುಮಾರ್ ಅತ್ಯಾಚಾರ ಪ್ರಕರಣವು ಅತ್ಯಂತ ಗಂಭೀರವಾಗಿದೆ.
ಅದರ ಬಗ್ಗೆ ಸುಪ್ರೀಂ ಕೋರ್ಟ್ ಮಾರ್ಗ ಸೂಚಿಯ ಅನ್ಬಯ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.
ನ್ಯಾಯಾಲಯದ ಅನುಮತಿ ದೊರೆತ ತಕ್ಷಣವೇ ಸಂತ್ರಸ್ತ ಯುವತಿಯನ್ನು ಹಾಜರುಪಡಿಸಲಾಗುವುದು ಎಂದು ಹೇಳಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಾಗಿ ೨೭ ದಿನ ಕಳೆದಿದ್ದು ಅಲ್ಲಿಂದ ಇಲ್ಲಿಯವರೆಗೆ ಯುವತಿ ನಾಪತ್ತೆಯಾಗಿದ್ದಾರೆ.
ಸಂತ್ರಸ್ತ ಯುವತಿ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೋರ್ಟ್ ಬಳಿ ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟಿಲ್ ನೇತೃತ್ವದಲ್ಲಿ ಭದ್ರತೆಗಾಗಿ ಒಬ್ಬರು ಡಿಸಿಪಿ, ಇಬ್ಬರು ಎಸಿಪಿ೫ ಜನ ಇನ್?ಸ್ಪೆಕ್ಟರ್?, ೧೦ ಜನ ಸಬ್ ಇನ್?ಸ್ಪೆಕ್ಟರ್ ಗಳನ್ನು ನಿಯೋಜಿಸಲಾಗಿತ್ತು.