ಯಾವುದೇ ಕೆಲಸ ಅಚ್ಚುಕಟ್ಟಾಗಿ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ: ಡಾ. ಯೋಗೇಶ್ ಬೆಸ್ತರ್

ಗುರುಮಠಕಲ್:ಸೆ.20: ಮತಕ್ಷೇತ್ರದ ಪ್ರೌಢಶಾಲೆಗಳಲ್ಲಿ ರಕ್ಷಾಬಂಧನ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ಶಾಲೆಗಳಿಗೆ ಪ್ರಶಸ್ತಿಗಳನ್ನು ಘೋಷಿಸಿದ್ದ ಪ್ರಯುಕ್ತ ಪ್ರಥಮ ಬಹುಮಾನ ಚಂಡ್ರಿಕಿ ಸರ್ಕಾರಿ ಪ್ರೌಢಶಾಲೆ ಪಡೆದಿರುವ ಕಾರಣ ಶಾಲಾ ಆವರಣದ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ದಲ್ಲಿ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರು ಹಾಗೂ ಸಮಾಜಸೇವಕರು ಡಾಕ್ಟರ್ ಯೋಗೇಶ ಬೆಸ್ತರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಂಸ್ಕøತಿ ಹಾಗೂ ಸಂಸ್ಕಾರದ ಜ್ಞಾನ ಬಹಳ ಅವಶ್ಯಕ ವಾಗಿದೆ ಎಂದರು ಯಾವುದೇ ಕೆಲಸ ವಿರಲಿ ಅದು ಸಣ್ಣ ಕೆಲಸದಿಂದ ದೊಡ್ಡ ಕೆಲಸದವರೆಗೆ ಯಾವುದಾದರೂ ವಿರಲಿ ಅಚ್ಚುಕಟ್ಟಾಗಿ ಮಾಡಿದರೆ ಅದರಿಂದ ನಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು. ರಕ್ಷಾ ಬಂಧನ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ದಲ್ಲಿ ಶಾಲಾ ಮಕ್ಕಳಿಗೆ ಪ್ರಥಮ ಬಹುಮಾನ ವಿತರಿಸಿ ಮಾತನಾಡುತ್ತ ರಕ್ಷಾ ಬಂಧನವು ಸಹೋದರತ್ವ ಬಾಂದವ್ಯವು ನಮಗೆ ತೊರಿಸಿ ಕೊಡುತ್ತದೆ ಇದರಲ್ಲಿ ಜಾತಿ ಕುಲ ಧರ್ಮ ಹೆಣ್ಣು ಗಂಡು ಎಂಬ ಭೇದ ಭಾವ ಮರೆತು ನಿಮ್ಮೊಂದಿಗೆ ನಾನು ಇದ್ದೇನೆ ಎಂಬ ಮನೋಭಾವ ಬೆಳೆಸಿಕೊಳ್ಳುವ ಒಂದು ರಕ್ಷಾಬಂಧನ ಹಬ್ಬ ವೆನ್ನಬಹುದು.ಇಂತ್ತಹ ರಕ್ಷಾ ಬಂಧನದ ಕಾರ್ಯಕ್ರಮವನ್ನು ಬಹು ಅಚ್ಚುಕಟ್ಟಾಗಿ ಮತ್ತು ಅರ್ಥಪೂರ್ಣವಾಗಿ ಮಾಡಿರುವ ಶಾಲಾ ಮುಖ್ಯಗುರುಗಳಿಗು ಹಾಗೂ ಸಿಬ್ಬಂದಿ ವರ್ಗಕ್ಕು ತುಂಬಾ ಧನ್ಯವಾದಗಳನ್ನು ತಿಳಿಸುತ್ತ ಮಕ್ಕಳ ಭವಿಷ್ಯತ್ತುಗೆ ಶಿಕ್ಷಣಬಹಳ ಅವಶ್ಯಕತೆ ಇರುವುದರಿಂದ ಮೂಲಭೂತ ಸೌಕರ್ಯಗಳನ್ನು ಸಾಧ್ಯ ವಾದಷ್ಟು ಟ್ರಸ್ಟ್ ವತಿಯಿಂದ ಮಾಡಿಸಿಕೊಡುತ್ತೆವೆ ವೆಂಬ ಭರವಸೆಯನ್ನು ನೀಡಿದರು. ಮುಖ್ಯ ಗುರುಗಳು ಕೆ ಮೊಗುಲಪ್ಪ ಅವರು ಮಾತನಾಡುತ್ತ ಸಮಾಜ ಸೇವಕರಾದ ಡಾಕ್ಟರ್ ಯೋಗೇಶ ಬೆಸ್ತರ್ ಅವರು ನಮ್ಮ ಗಡಿಭಾಗದ ಮಕ್ಕಳ ಶಿಕ್ಷಣಕ್ಕೆ ಪ್ರೂತ್ಸಹ ನೀಡುವ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಅದರಲ್ಲು ಇಂತ್ತಹ ವೈಜ್ಞಾನಿಕ ಹಿನ್ನೆಲೆಗಳನ್ನು ಪರಿಚಯಿಸುವ ಕಾರ್ಯಗಳನ್ನು ಪರಿಚಯಿಸುತ್ತಿರುವ ಕಾರ್ಯ ಬಹು ಶ್ಲಾಘನೀಯ ಎಂದು ಹೇಳಿದರು. ಈ ವೇಳೆ ಎಸ್ ಡಿ ಎಮ್ ಸಿ ಅಧ್ಯಕ್ಷರು ಅಮರೇಶ್ವರ ಮಸಾನಿ ಚಂಡ್ರಿಕಿ ಮಾತನಾಡಿದರು. ಸಹಶಿಕ್ಷಕಿ ಶ್ರೀ ಮತಿ ಹುಸ್ನಾರ ಎ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮಕ್ಕಳಾದ ಕುಮಾರಿ ನಾಗೇಶ್ವರಿ ಹಾಗೂ ಕುಮಾರಿ ಮಹೇಶ್ವರಿ ಪ್ರಾರ್ಥನೆ ಗೀತೆ ಹಾಡಿದರು. ಶ್ರೀ ನಿವಾಸ ರೆಡ್ಡಿ ಸಹಶಿಕ್ಷಕರು. ಚಂದ್ರ ನಾಯಕ ಸಹಶಿಕ್ಷಕರು. ಪ್ರಥಮದರ್ಜೆ ಸಹಾಯಕಿ ಭಾರತಿ ಎಸ್. ಶಾಲಾ ಮಕ್ಕಳು ಉಪಸ್ಥಿತರಿದ್ದರು.