ಯಾವುದೇ ಒಂದು ವಿಶ್ವವಿದ್ಯಾಲಯದಲ್ಲಿ ಸವಿತಾ ಮಹರ್ಷಿ ಪೀಠ ಸ್ಥಾಪನೆಯಾಬೇಕು:ಡಾ.ನಾಗಪ್ಪ.ಟಿ.

ಕಲಬುರಗಿ:ಫೆ.16: ಸವಿತಾ ಮಹರ್ಷಿ ಸಮಾಜಕ್ಕೆ ಯಾವುದೇ ಒಂದು ವಿಶ್ವವಿದ್ಯಾಲಯದಲ್ಲಿ ಸವಿತಾ ಮಹರ್ಷಿ ಪೀಠ ಸ್ಥಾಪನೆಯಾಗಬೇಕು ಎಂದು ಸರಕಾರಿ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗಪ್ಪ.ಟಿ. ಗೋಗಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು..
ಅವರು ಶುಕ್ರವಾರದಂದು ಡಾ. ಎಸ್ ಎಮ್ ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ ಕಲಬುರಗಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸವಿತಾ ಮಹರ್ಷಿ ಭಾವಚಿತ್ರಿಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣನವರ ಕಾಲದಲ್ಲಿ ಹಡದಪ್ಪಣ್ಣನವರು ಕೂಡ ಕಾರ್ಯದರ್ಶಿಯಾಗಿದ್ದರು. ಸರ್ಕಾರ ನಮ್ಮ ಜನಾಂಗದ ಜನರನ್ನ ಉದ್ದಾರ ಮಾಡಬೇಕಾಗಿದೆ ನಮ್ಮ ಸಮುದಾಯದಲ್ಲಿ ಯಾವುದೇ ಸೌಲಭ್ಯವಿಲ್ಲದೇ ಶಿಕ್ಷಣದಿಂದ ಉದ್ಯೋಗದಿಂದ ವಂಚಿತರಾಗಿದ್ದರೆ ನಮ್ಮ ಸಮುದಾಯದ ಅಭಿವೃದ್ಧಿಗೆ ಕಡೆ ಗಮನ ಹರಿಸಬೇಕೆಂದು ನಾನು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಸಂಗೀತ ಪರಿಕಲ್ಪನೆ ಕೂಡ ಸವಿತಾ ಮಹಾರ್ಷಿಯಿಂದ ಬಂದಿದೆ ಎಂದು ಹೇಳಬುಹುದು. ಬುದ್ಧನು ಸವಿತಾ ಮಹರ್ಷಿಯವರು ನಯವಿನಯ ನೋಡಿ ಬುದ್ಧನ ಕೂಡ ಆರ್ಚರಿ ಆಗುತ್ತಾನೆ ನೀನು ನಿಜವಾದ ದೊಡ್ಡ ವ್ಯಕ್ತಿ ಎಂದು ಬುದ್ಧನ ಕೂಡ ಒಪ್ಪಿಕೊಳ್ಳುತ್ತಾನೆ ಎಂದರು.
ಸವಿತಾ ಮಹರ್ಷಿ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.
ಗ್ರೇಡ್-2 ತಹಶೀಲ್ದಾರ ನಿಸಾರ ಅಹ್ಮದ್ ಅವರು ಉದ್ಪಾಟಿಸಿಮಾತನಾಡಿ ನಾವು ಎಲ್ಲಾ ಜನಾಂಗದವರಿ ಜಾತಿ ಆದಾಯ ಪ್ರಮಾಣ ನೀಡುತ್ತೇವೆ ತಮಗೂ ಸಹ ಅನೇಕ ಭಾರಿ ನಾನು ಜಾತಿ ಆದಾಯ ಪ್ರಮಾಣ ಪತ್ರಗಳನ್ನು ನೀಡಿದ್ದೇನೆ. ಗ್ರೇಡ್-2 ತಹಶೀಲ್ದಾರ ನಿಸಾರ ಅಹ್ಮದ್ ಅವರು ಹೇಳಿದರು.
ರಾಜ್ಯ ಸರ್ಕಾರ ಸವಿತಾ ಮಹರ್ಷಿ ನೀಡಿರಸೌಲಭ್ಯಗಳನ್ನು ನಾವು ನೀಡುತ್ತೇವೆ ಪೋಷಕರು ಮಕ್ಕಳಿಗೆ ಒಳ್ಳೆಯೇ ಶಿಕ್ಷಣ ನೀಡಿದ್ದಾಗ ಸಮಾಜ ಸುಧಾರಣೆಯಾಗುತ್ತದೆ ಎಂದರು.
ಗ್ರಂಥಾಲಯಯ ಉಪನಿರ್ದೇಶಕ ಅಜಯಕುಮಾರ ಮಾತನಾಡಿ, ನಮ್ಮ ಸಮಾಜ ಬಹಳ ಹಿಂದೆ ಉಳಿದಿದ್ದು, ಆರ್ಥಿಕ, ಸಮಾಜಿಕವಾಗಿ ಶೈಕ್ಷಣಿಕವಾಗಿ ಮುಂದುವರೆಯಬೇಕು ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು.
ಸಮಾಜದ ಮಾಜಿ ಅಧ್ಯಕ್ಷ ಅಶೋಕ ಡೈಮಂಡ್ ಮಾತನಡಿ, ಸರ್ಕಾರ ನಮ ಜನಕ್ಕೆ ಒಬ್ಬ ಎಂ.ಎಲ್.ಎ. ಮಾಡಬೇಕು. ಸವಿತಾ ಸಮಾಜಕ್ಕೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಸಿಗಬೇಕೆಂದರು.
ಸವಿತಾ ಸಮಾಜ ಅಧ್ಯಕ್ಷರಾದ ಶರಣಬಸಪ್ಪ ಎಸ್.ಸೂರ್ಯವಂಶಿ, ಸವಿತಾ ಸಮಾಜ ಸರಿಕಾರಿ ಸಂಘ ಸೂರ್ಯಕಾಂತ ಬೆಣ್ಣೂರು ಜಯಂತ್ಯೋತ್ಸವ ಅಧ್ಯಕ್ಷರಾದ ಹಣಮಂತ ಗೆ ಕಾಳೆ. ಸೂರ್ಯಕಾಂತ ನಿಂಬಾಳಕರ್ ಸವಿತಾ ಅಂಬರೇಷ ಮಂಗಲಗಿ ಗೌರವ ಅಧ್ಯಕ್ಷರು ಸುಭಾಷ ಬದಾಮಿ ಮಾಜಿ ಅಧ್ಯಕ್ಷರು ಗಣೇಶ ಚೆನ್ನಾಕಾರ ಅಧ್ಯಕ್ಷರು ಸವಿತಾ ಸಮಾಜ ನೌಕರರ ಸಂಘ ಮಲ್ಲಿಕಾರ್ಜುನ ಮಾನೆ ಸಮಾಜ ಮುಖಂಡರು ಭಾಗವಹಿಸಿದ್ದರು.