ಯಾವುದೇ ಅಸಮಾಧಾನ ಇಲ್ಲ ನಾವು ಗೆಲ್ಲುತ್ತೇವೆ:ಅಲ್ಲಂ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ನ 23 : ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ, ಶಾಸಕರೆಲ್ಲ ಒಗ್ಗಟ್ಟಾಗಿ ಬಂದಿದೆ ಗೆಲುವು ನಮ್ಮದೇ ಎಂದು ವಿಧಾನ‌ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಕೊಂಡಯ್ಯ ಅವರು‌ ನಾಮಪತ್ರ ಸಲ್ಲಿಕೆ ಕಾರ್ಯದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ  ಜೊತೆ ಮಾತನಾಡುತ್ತಿದ್ದರು.
ಶಾಸಕರು ಕೆಲವರು ಬೇರೆಯವರಿಗೆ ಟಿಕೆಟ್ ಕೇಳಿದ್ದು ಸಹಜ ಪಕ್ಷ ಕೊಂಡಯ್ಯ ಅವರಿಗೆ ಟಿಕೆಟ್ ನೀಡಿದೆ. ಶಾಸಕರೆಲ್ಲ ಬಂದಿದ್ದಾರೆ. ಭೀಮಾನಾಯ್ಕ ಬರುತ್ತಿದ್ದಾರೆ. ಗಣೇಶ್ ಸಂಗನಬಸವ ಸ್ವಾಮಿಗಳ ಅಂತ್ಯಕ್ರಿಯೆಗೆ ಹೋಗಿರುವುದರಿಂದ ಬಂದಿಲ್ಲ ಅಷ್ಟೇ ನಮ್ಮಲ್ಲಿ ಅಸಮಾಧಾನ ಇಲ್ಲ. ಕಳೆದ ಬಾರಿಗಿಂತ ಹೆಚ್ಚಿನ ಮತಗಳ ಅಂತರದಿಮನದ ಜಯ ಸಾಧಿಸುತ್ತೇವೆ ಎಂದರು.