ಯಾವದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು :ಭರತ್ ರಾಜ್ ಸಾವಳಗಿ

ಕಲಬುರಗಿ.ಸೆ.9: ಯಾವದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂದು ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಭರತ್ ರಾಜ್ ಸಾವಳಗಿ ಹೇಳಿದರು.
ನಗರದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ವಿಜಯನಗರ ಕಾಲೋನಿಯಲ್ಲಿ ಹಮ್ಮಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ವಲಯ ವತಿಯಿಂದ ಉಚಿತ ಸರಣಿ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಬಡ ಮಕ್ಕಳಿಗೆ ಉಚಿತ ನೆರವು ನೀಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಉತ್ತರ ವಲಯ ಹಾಗೂ ಗುರೂಜಿ ಡಿಗ್ರಿ ಕಾಲೇಜಿನ ಕಾರ್ಯವನ್ನು ಶ್ಲಾಘಿಸಿ ಮಾತನಾಡಿದ ಅವರು ಉತ್ತರ ವಲಯದ ಅಧ್ಯಕ್ಷರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಐದು ಜನ ಉತ್ತಮ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಗುರುಜಿ ಡಿಗ್ರಿ ಕಾಲೇಜಿನ ಅಧ್ಯಕ್ಷರು ಹಾಗೂ ದಾನಿಗಳು ಆದ ಶ್ರೀ ಕಲ್ಯಾಣಕುಮಾರ್ ಶೀಲವಂತ ಮಾತನಾಡಿ ನನಗೆ ಬಡ ಮಕ್ಕಳಿಗೆ ದಾನ ಮಾಡಲು ಅವಕಾಶ ನೀಡಿದ ಉತ್ತರ ವಲಯದ ಅಧ್ಯಕ್ಷರಾದ ಶ್ರೀ ಪ್ರಭುಲಿಂಗ ಮುಲಗೆ ಅವರಿಗೆ ಧನ್ಯವಾದಗಳು ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ವಿಜಯಕುಮಾರ್ ಪಾಟೀಲ್ ಮಾತನಾಡಿ ಉತ್ತರ ವಲಯ ಎಲ್ಲಾ ವಲಯಗಳಿಗೆ ಮತ್ತು ತಾಲೂಕುಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು. ಇದೇ ರೀತಿಯಾಗಿ ಉತ್ತರ ವಲಯ ಅಧ್ಯಕ್ಷರಾದ ಶ್ರೀ ಪ್ರಭುಲಿಂಗ ಮೂಲಗೆ ಇನ್ನು ಉತ್ತಮವಾಗಿ ಕೆಲಸ ಮಾಡಲಿ ಎಂದು ಹಾರೈಸಿದರು.
ಅತಿಥಿಯಾಗಿ ಭಾಗವಹಿಸಿದ ಶ್ರೀ ಕೆಎಸ್ ಮಾಲಿಪಾಟೀಲ್ ಎಂ ಎಸ್ ಡಬ್ಲ್ಯೂ ವಿಭಾಗದ ನಿವೃತ್ತ ಮುಖ್ಯಸ್ಥರು ಮಾತನಾಡಿ ಉತ್ತರ ವಲಯದ ಎಲ್ಲಾ ಕಾರ್ಯಕ್ರಮಗಳಿಗೆ ನನ್ನ ಸಹಕಾರವಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಪ್ರಭುಲಿಂಗ ಮುಲಗೆಯವರು ತಮ್ಮ ಸಹಕಾರವಿದ್ದರೆ ಇನ್ನು ಹೆಚ್ಚು ಹೆಚ್ಚು ಕಾರ್ಯಕ್ರಮಗಳು ಶಾಲಾ ಮಟ್ಟದಲ್ಲಿ ಮಾಡುತ್ತೇನೆಂದು ಹೇಳಿದರು. ವೇದಿಕೆ ಮೇಲೆ ಮುಖ್ಯ ಗುರು ಶ್ರೀ ಅಂಬಣ್ಣ ಬಿರಾದಾರ್ ಮತ್ತು ಬಿರಾದಾರ್ ಉತ್ತರ ವಲಯ ಗೌರವ ಅಧ್ಯಕ್ಷರಾದ ಶ್ರೀ ಶಿವಯೋಗಪ್ಪ, ಪ್ರತಿನಿಧಿಗಳಾದ ಶ್ರೀ ಕೃಷ್ಣ ನಾಯಕ್ ಶ್ರೀಮತಿ ಕವಿತಾ ದೇಗಾಂವ, ಗೌರವ ಕಾರ್ಯದರ್ಶಿಗಳು ಶ್ರೀ ಹನುಮಂತರಾ ದಿಂಡೂರೆ ಮತ್ತು ಶ್ರೀ ನಾಗೇಶ್ ಮೆಂಗಜಿ ಕೋಶಾಧ್ಯಕ್ಷರಾದ ಶ್ರೀ ಶ್ರೀಕಾಂತ್ ಪಾಟೀಲ್, ಡಾಕ್ಟರ್ ಶರಣ ರಾಜ್ ಚಪ್ಪರಬಂದಿ, ಶ್ರೀ ರಾಜೇಂದ್ರ ಮಾಡಬೂಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶ್ರೀ ನವಾಬ್ ಖಾನ್ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಚೆನ್ನಮ್ಮ ಸ್ವಾಗತಿಸಿದರು, ಶ್ರೀ ಸತೀಶ್ ಕುಮಾರ್. ಶೆಟ್ಟಿ ಸಂಗಪ್ಪ ಪ್ರೌಢಶಾಲೆ. ಶ್ರೀಮತಿ ಶಿವಲೀಲಾ ಹಿರೇಮಠ, ಡಾಕ್ಟರ್ ನಿರ್ಮಲಾ ಸಿರಗಾಪೂರ್ ಉಪನ್ಯಾಸಕರು ಬೀದರ್. ಶ್ರೀಮತಿ ಶಿವಲೀಲಾ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಆಳಂದ್ ಕಾಲೋನಿ. ಶ್ರೀಮತಿ ಚೆನ್ನಮ್ಮ ಜಿಡೆಗೆ ಸ.ಹಿ.ಪ್ರಾ. ಶಾಲೆ ಆಳಂದ ಇವರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.