ಯಾಳ್ಪಿ ಸರ್ಕಾರಿ ಶಾಲೆಯ ನೂತನ‌ ಕಟ್ಟಡ ಉದ್ಘಾಟನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.14: ತಾಲೂಕಿನ ಯಾಳ್ಪಿ ಗ್ರಾಮದಲ್ಲಿ 1.90 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ ಸರ್ಕಾರಿ ಶಾಲೆಯ ನೂತನ ಕಟ್ಟಡವನ್ನು ಇಂದು ಸಚಿವ ಬಿ.ನಾಗೇಂದ್ರ ಮತ್ತು ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಉದ್ಘಾಟನೆ ಮಾಡಿದರು.
ಗ್ರಾಮದ ಕಾಂಗ್ರೆಸ್ ಮುಖಂಡ ಯಾಳ್ಪಿ ಪಂಪನಗೌಡ ಅವರು ಶಿಕ್ಷಣ ಇಲಾಖೆಗೆ ದಾನವಾಗಿ ನೀಡಿದ ಎರೆಡು ಎಕರೆ ಜಮೀನನಲ್ಲಿ  ಸಚಿವರ ಅನುದಾನದಿಂದ ಒಂದು ಕೋಟಿ 40 ಲಕ್ಷ ರೂ ವೆಚ್ಚದಲ್ಲಿ ಶಾಲಾ ಕಟ್ಟಡ  ನಿರ್ಮಿಸಿದೆ. ಇನ್ನು ಶಾಲೆಗೆ ವಿಧಾನ ಪರಿಷತ್ ಸದಸ್ಯರ ಅನುದಾನದಡಿ ಅಲ್ಲಂ ವೀರಭದ್ರಪ್ಪ ಅವರಿಂದ 50 ಲಕ್ಷ ರೂ ಗಳಿಂದ ಕಾಂಪೌಂಡ ನಿರ್ಮಾಣ ಮಾಡಿದೆ.
ಈ ಸುಸಜ್ಜಿತವಾದ ಶಾಲಾ ಕಟ್ಟಡ ಗ್ರಾಮದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮರ್ಪಣೆ ಗೊಂಡಿದೆ.