ಯಾಳವಾರ ಜೀವನ ಮತ್ತು ಕೃತಿಗಳು ಕುರಿತ ಗಡಿನಾಡ ಸಾಂಸ್ಕøತಿಕ ಚಿಂತಕರು ಪುಸ್ತಕ ಬಿಡುಗಡೆ

ಬೀದರ:ಫೆ.5: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಫಜಲಪುರದ ಸಹಾಯಕ ಕನ್ನಡ ಪ್ರಾಧ್ಯಾಪಕರಾದ ಡಾ. ದತ್ತಾತ್ರೇಯ ಹಡಪದ ಬರೆದ ಡಾ. ಸೋಮನಾಥ ಯಾಳವಾರ ಜೀವನ ಮತ್ತು ಕೃತಿಗಳ ಕುರಿತಾಗಿದ್ದ ಗಡಿನಾಡ ಸಾಂಸ್ಕೃತಿಕ ಚಿಂತಕರು ಪುಸ್ತಕ ಲೋಕಾರ್ಪಣೆ ಕರ್ಯಕ್ರಮ ಬೀದರನ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ಜರುಗಿತು.
ಕನ್ನಡ ಭಾಷೆ ಸಾಹಿತ್ಯ ಶ್ರೀಮಂತವಾದದ್ದು, ಭಾರತೀಯ ಭಾಷೆಗಳಲ್ಲಿ ತನ್ನ ಸತ್ವ ಹಾಗೂ ಶಕ್ತಿಯಿಂದ ವಿಶಿಷ್ಟ ಸಾಹಿತ್ಯ ಹೊರಹೊಮ್ಮಿದೆ. ಗತಕಾಲದ ಘಟನಾವಳಿಗಳನ್ನು ತಿಳಿದುಕೊಳ್ಳಲು ಪುಸ್ತಕಗಳು ಸಹಕಾರಿಯಾಗುತ್ತವೆಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ.ಬಿ.ಎಸ್.ಬಿರಾದಾರ ಹೇಳಿದರು. ಅವರು ಡಾ. ಸೋಮನಾಥ ಯಾಳವಾರ ಜೀವನ ಕೃತಿಗಳು ಕುರಿತಾಗಿದ್ದ ಗಡಿನಾಡ ಸಾಂಸ್ಕೃತಿಕ ಚಿಂತಕರು ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.
ಪೆÇ್ರ. ಸೋಮನಾಥ ಯಾಳವಾರ ಅವರ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕೊಡುಗೆ ಅಪಾರ ಅವರ ಇಡೀ ಸಾಹಿತ್ಯದ ಪ್ರಕಾರಗಳಲ್ಲಿ ಮಾನವೀಯ ಮೌಲ್ಯಗಳು ಓದುಗರಿಗೆ ಮುಖಾ-ಮುಖಿಯಾಗಿ ದರ್ಶನ ನೀಡುತ್ತ ಹೋಗುತ್ತವೆಂದರು.
ಡಾ. ಯಾಳವಾರ ಅವರು ನಾಡಿನ ಅಪರೂಪದ ಸಾಂಸ್ಕೃತಿಕ ಚಿಂತಕ. ಅವರು 69 ಮೌಲಿಕ ಗ್ರಂಥಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಪ್ರಖರ ಚಿಂತಕರಾಗಿರುವ ಇವರು ಖ್ಯಾತ ಸಂಶೋಧಕರು ಆಗಿದ್ದಾರೆಂದು ಗಡಿನಾಡ ಸಾಂಸ್ಕೃತಿಕ ಚಿಂತಕರು ಪುಸ್ತಕದ ಪರಿಚಯ ಮಾಡುತ್ತ ಬೀದರನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಮಹಾದೇವಿ ಹೆಬ್ಬಾಳೆ ಅವರು ಮಾತನಾಡಿದರು. ಪೆÇ್ರ. ಯಾಳವಾರ ಅವರ ಸಾಹಿತ್ಯ ಪ್ರಕಾರಗಳಲ್ಲಿ ಬದ್ಧತೆ ಹಾಗೂ ಶುದ್ಧತೆ ಇದೆ. ಕವಿತೆಗಳು ಹಾಗೂ ಆಧುನಿಕ ವಚನಗಳು ಆಧುನಿಕ ಸಮಾಜದ ಪ್ರತಿರೂಪದಂತಿವೆ. ವಚನಕಾರರಾಗಿ, ಸಂಶೋಧಕರಾಗಿ, ವಿಮರ್ಶಕರಾಗಿ, ಚಿಂತನಶೀಲ ಬರಹಗಾರರಾಗಿ ಹೊಸಗನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದ ಮಹಾನುಭಾವರೆಂದರು.
ಡಾ. ಜಗನ್ನಾಥ ಹೆಬ್ಬಾಳೆ ಅವರ ಮಾರ್ಗದರ್ಶನದಲ್ಲಿ ಡಾ. ಸೋಮನಾಥ ಯಾಳವಾರರ ಜೀವನ ಮತ್ತು ಕೃತಿಗಳು ವಿಷಯದ ಕುರಿತು ಸಂಶೋಧನಾಧ್ಯಯನ ಮಾಡಿ ಗುಲಬರ್ಗಾ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಪಡೆದ ಡಾ. ದತ್ತಾತ್ರೇಯ ಹಡಪದರು ನಿಜಕ್ಕೂ ಧನ್ಯರು. ಡಾ. ಯಾಳವಾರ ಅವರ ಜೀವನ ಹಾಗೂ ಕೃತಿಗಳು ಕುರಿತು ಪುಸ್ತಕದಲ್ಲಿ ಶ್ರೀಯುತರ ಪರಿಚಯ ಮಾಡುವುದಲ್ಲದೆ. ಸಂಶೋಧನಾತ್ಮಕ ವಿಚಾರ ವಿಶ್ಲೇಷಣೆ ಮಾಡುವಲ್ಲಿ ಪೆÇ್ರ. ದತ್ತಾತ್ರೇಯ ಹಡಪದರು ಯಶಸ್ವಿಯಾಗಿದ್ದಾರೆಂದು ಡಾ. ಮಹಾದೇವಿ ಹೆಬ್ಬಾಳೆ ಅವರು ಪುಸ್ತಕ ಪರಿಚಯ ಮಾಡುತ್ತ ಮಾತನಾಡಿದರು. ಇದೇ ಸಂದರ್ಭದಲ್ಲಿ ಗ್ರಂಥದ ನಾಯಕರಾದ ಡಾ. ಸೋಮನಾಥ ಯಾಳವಾರ ಮತ್ತು ಪುಸ್ತಕದ ಲೇಖಕ ಡಾ. ದತ್ತಾತ್ರೇಯ ಹಡಪದ ಮಾತನಾಡಿದರು.
ಕನ್ನಾಡಿನ ಹೆಸರಾಂತ ಸಾಂಸ್ಕೃತಿಕ ಚಿಂತಕರಾದ ಪೆÇ್ರ. ಸೋಮನಾಥ ಯಾಳವಾರ ಅವರ ಜೀವನ ಮತ್ತು ಕೃತಿಗಳು ವಿಷಯದ ಕುರಿತು ನನ್ನ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಅಧ್ಯಯನ ಮಾಡಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ದತ್ತಾತ್ರೇಯ ಹಡಪದರು ಪಿಎಚ್.ಡಿ. ಪದವಿ ಪಡೆದ ಕೃತಿ ಇದಾಗಿದೆ. ಈ ಮಹಾಪ್ರಬಂಧ ಗಡಿನಾಡಿನ ಸಾಂಸ್ಕೃತಿಕ ಚಿಂತಕರು ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿರುವುದು ನನ್ನ ಸಂತಸ ಇಮ್ಮಡಿಗೊಳಿಸಿದೆ ಎಂದು ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ ಬೀದರ ವಿಶ್ವವಿದ್ಯಾಲಯ ಕಲಾ ನಿಕಾಯದ ಡೀನರಾದ ಪೆÇ್ರ. ಜಗನ್ನಾಥ ಹೆಬ್ಬಾಳೆ ಅವರು ನುಡಿದರು. ಪೆÇ್ರ. ಯಾಳವಾರ ಅವರು ಗಂಭೀರವಾದ ಓದಿಗೆ ಸಿಗುವ ಪುಸ್ತಕಗಳನ್ನು ಕೊಡುವ ಪ್ರವೃತ್ತಿಯನ್ನು ಬೆಳಸಿಕೊಂಡು ಬಂದಿದ್ದಾರೆ. ಸಾಮಾಜಿಕ ಬದ್ಧತೆ ಹಾಗೂ ಕಾಳಜಿ ಯಾಳವಾರ ಅವರ ಕೃತಿಗಳಲ್ಲಿ ಕಂಡು ಬರುತ್ತದೆ. ವಚನ ಸಂಸ್ಕೃತಿಯೇ ತನ್ನ ಬದುಕು ಹಾಗೂ ಬರಹ ಎಂದುಕೊಂಡು ಜೀವನ ನಡೆಸುತ್ತಿರುವ ಯಾಳವಾರ ಅವರನ್ನು ವಿಭಿನ್ನ ನೆಲೆಯಲ್ಲಿ ಗುರುತಿಸಿ ಈ ಕೃತಿ ರಚಿಸುವಲ್ಲಿ ಡಾ. ಹಡಪದರು ಯಶಸ್ವಿಯಾಗಿದ್ದಾರೆಂದು ಲೇಖಕರಿಗೆ ಅಭಿನಂದಿಸಿದರು.
ಕರ್ಯಕ್ರಮದ ದಿವ್ಯ ಸಾನಿಧ್ಯ ಹಿರೇಮಠ ಸಂಸ್ಥಾನ ಭಾಲ್ಕಿಯ ಪರಮ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ವಹಿಸಿದರು. ಕರ್ನಾಟಕ ಸಾಹಿತ್ಯ ಸಂಘದ ಉಪಾಧ್ಯಕ್ಷರಾದ ಪೆÇ್ರ. ಎಸ್.ಬಿ. ಬಿರಾದಾರ ವೇದಿಕೆಯಲ್ಲಿದ್ದರು. ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಡಾ. ಸಾವಿತ್ರಿ ಹೆಬ್ಬಾಳೆ ಸ್ವಾಗತಿಸಿದರು. ಮೆಥೋಡಿಸ್ಟ ಕಾಲೇಜಿನ ಪ್ರಾಚಾರ್ಯರಾದ ಡಾ. ಅರುಣಾ ಸುಲ್ತಾನಪುರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಕುಂಬಾರ ಪ್ರಾರ್ಥನೆ ಗೀತೆ ಹಾಡಿದರು. ಡಾ. ಸಂಜೀವಕುಮಾರ ತಾಂದಳೆ ಮತ್ತು ಡಾ. ಅಶೋಕ ಕೋರೆ ಕರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದ ಸಂಯೋಜಕ ಡಾ. ರಾಜಕುಮಾರ ಹೆಬ್ಬಾಳೆ ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪೆÇ್ರ. ವೀರಶೆಟ್ಟಿ ಮೈಲೂರಕರ್ ವಂದಿಸಿದರು. ಕರ್ಯಕ್ರಮದಲ್ಲಿ ಬೀದರ, ಅಫಜಲಪುರ ಹಾಗೂ ಉಮರ್ಗಾದ ನೂರಾರು ಜನ ಸಾಹಿತ್ಯಾಸಕ್ತರು ಭಾಗವಹಿಸಿದರು.