ಯಾಳವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಮೂಲಭೂತ ಸೌಕರ್ಯ ಕೊಡಲು ಆಗ್ರಹ

ಜೇವರ್ಗಿ :ಡಿ.21:ತಾಲೂಕಿನ ಯಾಳವಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಾದ ಶುದ್ದ ಕುಡಿಯುವ ನೀರು ಸುಲಭ ಶೌಚಾಲಯ ಹಾಗೂ ವಿದ್ಯುತ್ ಸೌಕರ್ಯ ಮತ್ತು ಉದ್ಯೋಗ ಖಾತ್ರಿ ಯೋಜನೆ ಪ್ರಾರಂಭಿಸಬೇಕೆಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಆದರ್ಶ ಗ್ರಾಮ ಸಮಿತಿ ಯಾಳವಾರ ವತಿಯಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ತಾಲೂಕ ತಹಶೀಲ್ದಾರ್ ಕಚೇರಿ ಮುಂದ ನಡೆಯುತ್ತಿದೆ ಗ್ರಾಮ ಪಂಚಾಯಿತಿ ಕೆಲಸಗಳಿಗೆ ಅಡ್ಡಿಯಾದ ಯಾವುದೇ ವ್ಯಕ್ತಿ ಇದ್ದರೂ ಕೂಡ ಸರ್ಕಾರ ಕೂಡಲೇ ಅವರನ್ನು ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಹೇಶ ರಾಠೋಡ ಆಗ್ರಹಿಸಿ ಮಾತನಾಡುತಾ ಸುಮಾರು 2022 ರಿಂದ ಎರಡು ವರ್ಷಗಳ ಕಾಲ ಗ್ರಾಮ ಪಂಚಾಯತಿ ಸ್ಥಗಿತಗೊಂಡಿವೆ ಸಾರ್ವಜನಿಕರ ಗೋಳು ಕೇಳುವರಿಲ್ಲಾಗಿದೆ ಸಾರ್ವಜನಿಕರಿಗೆ ಕುಡಿಯುವ ನೀರು ಸಿಗುತ್ತಿಲ್ಲ ಮೂಲಭೂತ ಸೌಕರ್ಯ ಸಿಗುತ್ತಿಲ್ಲ ಎಂದು ತಮ್ಮ ಅಳಲು ಸಾರ್ತೋವಜನಿಕರು ತೋಡಿಕೊಂಡರು ಸರ್ಕಾರಕ್ಕೆ ಕಿವಿ ಕೇಳಿಸುತ್ತಿಲ್ಲ ಎಂದು ಖಾರವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾರು ಬರಲು ಹಿಂಜರುತ್ತಿದ್ದಾರೆ ಈಗಿರುವ ಗ್ರಾಮ ಪಂಚಾಯತಿ ಅಭಿವೃದ್ಧಿ ಆನಂದ್ ದೊಡ್ಮನಿ ಅವರಿಗೆ ರಕ್ಷಣೆ ಕೊಡಬೇಕು ಅವರು ಗ್ರಾಮ ಪಂಚಾಯಿತಿ ಕಾರ್ಯ ಪ್ರಾರಂಭಿಸಲು ಸಂಬಂಧಪಟ್ಟ ಅಧಿಕಾರಿಗಳು ಬೆಂಬಲಿಸಬೇಕು ಕಾನೂನು ರೀತಿಯಿಂದ ಕೆಲಸ ಕಾಮಗಾರಿ ಮಾಡಬೇಕೆಂದು ಹೇಳಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹಾದೇವಿ ಶರಣಪ್ಪ ಆದರ್ಶ ಗ್ರಾಮ ಸಮಿತಿ ಅಧ್ಯಕ್ಷರಾದ ಇಬ್ರಾಮ್ ಪಟೇಲ್ ಸಿ ಪಿ ಐ ತಾಲೂಕ್ ಕಾರ್ಯದರ್ಶಿ ಮಲ್ಲಿಕಾರ್ಜುನ ಕೆಲ್ಲೂರು ಗ್ರಾಮ ಪಂಚಾಯತ್ ಸದಸ್ಯರ ನವೀನ ಬೇಗಮ್ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಇಂದ್ರಮ್ಮ ಚನ್ನಪ್ಪ ದೊರೆ ಗುಂಡಪ್ಪ ತಳಕೇರಿ ದೇವು ದೊರೆ ಶಾಂತಯ್ಯ ಗುತ್ತೇದಾರ್ ಯುವ ಮುಖಂಡರಾದ ಶರಣಪ್ಪ ದೊಡ್ಮನಿ ಗ್ರಾಮ ಪಂಚಾಯತ್ ಸದಸ್ಯರಾದ ಮಲ್ಕಮ್ಮ ತಳಕೇರಿ ಪೌರಕಾರ್ಮಿಕರು ಶಂಕ್ರಮ ಸೇರಿದಂತೆ ಅನೇಕರು ಭಾಗವಹಿಸಿದರು