ಯಾಳಗಿ ತಾಂಡಕ್ಕೆ ಕುಡಚಿ ಶಾಸಕ ಪಿ.ರಾಜೀವ್ ಭೇಟಿ

ಕೆಂಭಾವಿ:ಅ.28:ಪಟ್ಟಣದ ಸಮೀಪ ಯಾಳಗಿ ತಾಂಡಾಕ್ಕೆ ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕುಡಚಿ ಶಾಸಕ ಪಿ.ರಾಜೀವ್ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿದರು.

ನಂತರ ಮಾತನಾಡಿದ ಅವರು, ಇತ್ತಿಚೆಗೆ ಸುರಿದ ಮಹಾ ಮಳೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡಮಟ್ಟದ ನಷ್ಟ ಉಂಟಾಗಿದೆ. ಅದರಂತೆ ಅನೇಕ ಬಂಜಾರಾ ಸಮುದಾಯದ ತಾಂಡಾಗಳು ಕೂಡಾ ಹಾನಿಗೊಳಗಾಗಿವೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಮಾರ್ಗದರ್ಶನದಂತೆ ಹಾನಿಗೊಳಗಾದ ತಾಂಡಾಗಳಿಗೆ ಭೇಟಿ ನೀಡುತ್ತಿದ್ದೆನೆ. ಯಾವ ತಾಂಡಾಗಳಲ್ಲಿ ಎಷ್ಟು ಹಾನಿಯಾಗಿದೆ ಹಾಗೂ ತಾಂಡಾದ ಜನರ ಸಮಸ್ಯೆಗಳನ್ನು ನಿವಾರಿಸಲು ನಮ್ಮ ಅಭೀವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾಳಗಿ ತಾಂಡಾದ ಜನರು ಅಹವಾಲು ಸಲ್ಲಿಸಿದ್ದು, ಇಲ್ಲಿನ ಜನರ ಬೇಡಿಕೆಯಂತೆ ಸಮುದಾಯ ಭವನ ನಿರ್ಮಾಣ, ಸ್ಮಶಾನಕ್ಕೆ ಹೋಗಲು ದಾರಿ ಹಾಗೂ ಕಂದಾಯ ಗ್ರಾಮ ಘೋಷಣೆಯ ವಿಷಯಗಳ ಕುರಿತು ಅಭಿವೃದ್ಧಿ ಅಧಿಕಾರಿಗಳೊಂದಿಗೆ ಮಾತನಾಡಿ ಶೀಘ್ರದಲ್ಲೆ ಪರಿಹರಿಸುವದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶ್ರೀನಿವಾಸರೆಡ್ಡಿ ಮಾಲಿಪಾಟೀಲ, ಶಂಕರ ರಾಠೋಡ, ಸೇವು ಜಾಧವ, ಅಶೋಕ ಜಾಧವ, ಬದ್ದು, ರಮೇಶ ರಾಠೋಡ, ಶೇಖರ ಜಾಧವ, ವಿನೋದ.ಡಿ, ಲಾಲು ರಾಠೋಡ, ರೇವು ಸೇರಿದಂತೆ ಇನ್ನಿತರರು ಇದ್ದರು.