ಯಾಳಗಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಕೆಂಭಾವಿ : ಎ.15:ಅಂಬೇಡ್ಕರ್ ಜಯಂತಿಯನ್ನು ಗೌರವಪೂರ್ಣವಾಗಿ ಅಚರಿಸಲಾಗುತ್ತಿದೆ. ಅತ್ಯದ್ಭುತವಾದ ಸಂವಿಧಾನ ರಚನೆಯಿಂದ ಇವತ್ತು ಕೂಡಾ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಗಟ್ಟಿಯಾಗಿ ಆಡಳಿತವನ್ನು ನೀಡುತ್ತಿದೆ.
ಅಂಬೇಡ್ಕರ್ ನೀಡಿದ ಸಂವಿಧಾನದಿಂದಾಗಿ ಅದರ ತಳಹದಿ ಮೇಲೆ 75 ವರ್ಷಗಳವರೆಗೆ ಯಾವುದೇ ರಾಷ್ಟ್ರಗಳು ಇಷ್ಟು ಒಳ್ಳೆಯ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಲಿಲ್ಲ. ಅದಕ್ಕೆ ಮೂಲಕಾರಣ ಸಂವಿಧಾನ ಶಿಲ್ಪಿ ಡಾ ಬಿ. ಆರ್ ಅಂಬೇಡ್ಕರ್ ಎಂದು ಮುಖಂಡರಾದ ಬಸನಗೌಡ ಹೊಸಮನಿ ಹೇಳಿದರು.
ಪಟ್ಟಣದ ಯಾಳಗಿ ಗ್ರಾಮದಲ್ಲಿ ನಡೆದ ಡಾ. ಬಿ. ಆರ್ ಅಂಬೇಡ್ಕರ್ ಅವರ 132ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅವರು ಉದ್ಘಾಟಿಸಿದರು.
ದÀಲಿತ ಯುವ ಮುಖಂಡ ರಾಜು ನಾಗರೆಡ್ಡಿ (ಆರ್. ಬಿ ಕನ್ನಡಿಗ) ಮಾತನಾಡಿ, ವ್ಯವಸ್ಥಿತ ಸಂವಿಧಾನವನ್ನು ದೇಶಕ್ಕೆ ನೀಡಿದ ಮಹಾನ್ ನಾಯಕ ಅಂಬೇಡ್ಕರ್. ಅವರ ಬದುಕು, ಆದರ್ಶ, ತತ್ವಗಳು ಗಂಭೀರ ಚಿಂತನೆಗಳು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂಧರ್ಭದಲ್ಲಿ ಗುರುಬಸಯ್ಯ, ಶಿವಶರಣ ನಾಗರೆಡ್ಡಿ, ಮಹದೇವಪ್ಪ ಜಲಪುರ, ಶ್ರೀಶೈಲ್ ಮಹಾಮನಿ, ಅಬ್ದುಲ್ ಸಿಪಾಯಿ, ಮಲಿಕ್ ಚೌದರಿ, ಸಾಹೇಬಣ್ಣ ತಳವಾರ ಹಾಗೂ ಇತರರು ಇದ್ದರು.