ಯಾಳಗಿ ಗ್ರಾಮಕ್ಕೆ ತಹಸೀಲ್ದಾರ ಬೇಟಿ ಹತ್ತಿ ತೊಗರಿ ಬೆಳೆಹಾನಿ ಸಮೀಕ್ಷೆ : ಸುಬ್ಬಣ್ಣ ಜಮಖಂಡಿ

ಕೆಂಭಾವಿ : ಸೆ.8:ಪಟ್ಟಣದ ಸಮೀಪ ಯಾಳಗಿ ಗ್ರಾಮಕ್ಕೆ ತಹಸೀಲ್ದಾರ ಸುಬ್ನಣ್ಣ ಜಮಖಂಡಿ ಬೇಟಿ ನೀಡಿ ಬೆಳೆಹಾನಿ ಪರಿಶೀಲನೆ ಮಾಡಿದ್ರು ಬಿತ್ತನೆ ಮಾಡಿದಂತಹ ತೊಗರಿ ಹತ್ತಿ ಬೆಳೆಗಳು ಅತಿಯಾದ ಮಳೆಯಿಂದ ಅತಿವೃಷ್ಟಿಗೆ ಒಳಗಾಗಿದೆ ಇದರಿಂದ ರೈತರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ ಇದೇ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರರು ಎಲ್ಲಾ ಕಡೆ ವೀಪರೀತವಾಗಿ ಮಳೆಯಾಗಿದೆ ಇದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಬೆಳೆ ಹಾನಿ ಸಮೀಕ್ಷೆ ನಢಯುತ್ತಿದೆ ಆದ್ದರಿಂದ ಕೆಂಭಾವಿ ವಲಯದ ಸೀಮಾಂತರದ ಪ್ರದೇಶಗಳಿಗೆ ಬೇಟಿ ನೀಡಲು ಕಂದಾಯ ನೀರಿಕ್ಷಕರಿಗೆ ಹಾಗೂ ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಚಿಸಲಾಗಿದೆ ಮಳೆಗೆ ಮನೆ ಬಿದ್ದರು ಕೂಡ ಪರಿಹಾರ ನೀಡುವ ಕಾರ್ಯ ನಡೆಯುತ್ತಿದೆ ಈಗಾಗಲೇ 60 ಕುಟುಂಬಗಳ ಮನೆಹಾನಿ ಪರಿಹಾರ ವಿತರಣೆಯಾಗಿದ್ದು ರೈತರಿಗೂ ಬಿತ್ತನೆ ಮಾಡಿ ಬೆಳೆಹಾನಿಯಾಗಿದೆ ಸರ್ಕಾರಕ್ಕೆ ಈ ಬಗ್ಗೆ ಸಮರ್ಪಕ ಮಾಹಿತಿ ನೀಡವ ಕಾರ್ಯ ನಡೆದಿದೆ .ಎಂದು ಹೇಳಿದ್ರು.ಗ್ರಾಮದ ಮುಖಂಡ ಅಮೀನರಡ್ಡಿ ಹೊಸಮನಿ ಮಾತನಾಡುತ್ತಾ ಮಳೆಯಿಂದ ತೊಗರಿ ಒಣಗಿ ಹೊಗುತ್ತಿದೆ ಹತ್ತಿ ಕೂಡ ತಾಮ್ರ ರೋಗದಿಂದ ವಿಪರೀತ ಸಮಸ್ಯೆ ರೈತರಿಗೆ ಉಂಟಾಗಿ 2 ಸಾವಿರ ಎಕರೆ ನಮ್ಮ ಯಾಳಗಿ ಗ್ರಾಮದಲ್ಲಿ ಮಳೆ ಹಾನಿ ಸಂಬವಿಸಿದೆ ಕೂಡಲೇ ಇದಕ್ಕೆ ಒಂದು ಪರಿಹಾರ ನೀಡಬೇಕು ಮತ್ತು ಮತ್ತೊಮ್ಮೆ ಬಿತ್ತನೆ ಮಾಡುವ ರೈತರಿಗೆ ಉಚಿತವಾಗಿ ಬೀಜ ವಿತರಣೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಈರಣ್ಣ ದೇವರಡ್ಡಿ ,ರಾಮನಗೌಡ ಹೊಸಮನಿ,ಪ್ರಶಾಂತಗೌಡ ಗೊರಗೋರಿ,ಶಾಂತಗೌಡ ,ಗೂಡಸಾಬ ,ಈರಬಸಪ್ಪ ಹಡಪದ ಕಂದಾಯ ನೀರಿಕ್ಷಕ ಲಕ್ಷ್ಮಣ ,ಲೆಕ್ಕಾಧಿಕಾರಿ,ಶಿವರಾಜ ಇದ್ದರು.