ಯಾರ ಮಗ ಟೀಸರ್ ಅನಾವರಣ

ತಾಯಿ ಸೆಂಟಿಮೆಂಟ್, ಲವ್, ಡ್ರಗ್ ಮಾಫಿಯಾ,ಭೂಗತ ಜಗತ್ತು ಸೇರಿ ಹಲವು ಅಂಶಗಳನ್ನು ಮುಂದಿಟ್ಟುಕೊಂಡಿರುವ ” ಯಾರ್ ಮಗ” ಚಿತ್ರದ ಟೀಸರ್ ಬಿಡುಗಡೆಯಾಗಿದೆ.

90 ರ ದಶಕದಲ್ಲಿ ನಡೆಯುವ ಅಂಡರ್‌ವರ್ಲ್ಡ್ ಕಥೆ ರೆಟ್ರೋ ಶೈಲಿಯ ನಿರೂಪಣೆ ಇದೆ. ನಾಯಕಿಯಾಗಿ ಸುಕೃತ ಅಭಿನಯಿಸುತ್ತಿದ್ದಾರೆ.

ಚಿತ್ರವನ್ನು ಸುರಪುರ ತಾಲ್ಲೂಕಿನ ಪಡುಕೋಟೆ, ಬೆಂಗಳೂರಿನ ಶಿವಾಜಿನಗರ, ವೈಟ್‌ಫೀಲ್ಡ್ ಸುತ್ತಮುತ್ತ ಶೇ.60 ರಷ್ಟು ಚಿತ್ರೀಕರಣ ಮುಗಿದಿದೆ .ಎಲ್ಲಾ ಅಂದುಕೊಂಡಂತೆ ಆದರೆ ಚಿತ್ರವನ್ನು ಜೂನ್ ತಿಂಗಳಲ್ಲಿ ತೆರೆಗೆ ತರುವ ಯೋಜನೆ ಚಿತ್ರತಂಡಕ್ಕಿದೆ.

ಕನ್ನಡಪರ ಹೋರಾಟಗಾರ ಬಸವರಾಜ ಪಡುಕೋಟೆ ಪುತ್ರನನ್ನು ನಾಯಕ ಮತ್ತು ನಿರ್ದೇಶಕನಾಗಿ ಚಿತ್ರರಂಗಕ್ಕೆ ಪರಿಚಯಿಸಿರುವ‌ಚಿತ್ರ ” ಯಾರ್ ಮಗ”.

ಕಳೆದ ವಾರ ಟೀಸರ್ ಬಿಡುಗಡೆ ಇತ್ತು ಹಲವು ವಿವಿಧ ಕ್ಷೇತ್ರಗಳ ಹಲವು ಮುಖಂಡರು ಆಗಮಿಸಿ ಚಿತ್ರಕ್ಕೆ ಮತ್ತು‌ ತಂಡಕ್ಕೆ ಶುಭ ಹಾರೈಸಿದರು.

ಈ ವೇಳೆ ಮಾತಿಗಿಳಿದ ನಿರ್ಮಾಪಕ ಬಸವರಾಜ ಪಡುಕೋಟೆ , ಡಾ.ರಾಜ್‌ಕುಮಾರ್ ಅಪ್ಪಟ ಅಭಿಮಾನಿ, ಸಿನಿಮಾ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದೆ, ಈಗ ನನ್ನ ಮಗನ ಸಿನಿಮಾ ಆಸಕ್ತಿ ಕಂಡು ಈ ಚಿತ್ರ ನಿರ್ಮಾಣ ಮಾಡಿದ್ದೇನೆ.ಚಿತ್ರದಲ್ಲಿ ಸಾಕಷ್ಟು ಹೊಸಬರಿಗೆ ಅವಕಾಶ ಕೊಟ್ಟಿದ್ದೇವೆ ಚಿತ್ರಕ್ಕೆ ಎಲ್ಲರ ಇರಲಿ ಎಂದು ಕೇಳಿಕೊಂಡರು

ನಾಯಕ ಹಾಗೂ ನಿರ್ದೇಶಕ ರಘು ಪಡುಕೋಟೆ ಮಾತನಾಡಿ ಮಾತನಾಡಿ, ಈ ಕಾಲದ ಹುಡುಗರು ಹೇಗೆಲ್ಲಾ ಹಾಳಾಗ್ತಿದಾರೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ, ಮಗ ತಾಯಿಯನ್ನು ಕಾಳಜಿಯಿಂದ ನೋಡಿಕೊಳ್ಳಬಹುದು ಎನ್ನುವುದನ್ನು ನಿರೂಪಿಸಲಾಗಿದೆ. ಜೊತೆಗೆ ಉತ್ತಮ ಸಂದೇಶ ಕೂಡ ಚಿತ್ರದಲ್ಲಿದೆ ಎಂದರು.

ಸಂಗೀತ ನಿರ್ದೇಶಕ ಪ್ರವೀಣ್, ಚಿತ್ರದಲ್ಲಿ ೪ ಹಾಡುಗಳಿವೆ. ಹೀರೋ ಇಂಟ್ರಡಕ್ಷನ್, ಡ್ಯುಯೆಟ್, ಪ್ಯಾಥೋ ಹಾಗೂ ತಾಯಿ ಸೆಂಟಿಮೆಂಟ್ ಹೀಗೆ ಎಲ್ಲಾ ರೀತಿಯ ಹಾಡುಗಳಿವೆ ಎನ್ನುವ ವಿವರ ನೀಡಿದರು.

ಚಿತ್ರದಲ್ಲಿ ಕಾಕ್ರೋಚ್‌ಸುಧಿ, ಬಲ ರಾಜವಾಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.