ಯಾರ ಎದೆಯೊಳಗೆ ದೇವನ ಭಾವ ತುಂಬಿರುತ್ತದೆಯೋ ಅವರೇ ಸಂತರು, ಶರಣರು, ಮಹಾತ್ಮರು

ಭಾಲ್ಕಿ:ನ.19:
ಸತ್ಯೇನ ಪಂಥ ವಿಧಧೋ ದೇವ ಯಾನಃ.
ಎಷ್ಟು ಸುಂದರವಾದ ಮಾತು ಇದು ನಾವು ಏನನ್ನು ಪಡೆಯಬೇಕಿದೆ ಅದರ ಸ್ಪಷ್ಟ ಜ್ಞಾನ ಇರಬೇಕು. ಈ ನಿಸರ್ಗ ನಮಗೆಲ್ಲ ಕೊಟ್ಟಿದೆ. ಭಾವ ಸಾಮಥ್ರ್ಯ, ಕಾರ್ಯ ಸಾಮಥ್ರ್ಯ, ವಿಚಾರ ಸಾಮಥ್ರ್ಯ ಇಲ್ಲೇನು ಹೇಳಿ. ಈ ಮೂರು ಸಾಮಥ್ರ್ಯಗಳನ್ನು ಬಳಸಿದರೆ ಬದುಕು ಅರಳಿಬಿಡುತ್ತದೆ.
ಕೈ ಸಾಮಥ್ರ್ಯ , ಕಾಲು ಸಾಮಥ್ರ್ಯ ಹೃದಯ ಸಾಮಥ್ರ್ಯ, ಎಲ್ಲಾ ಸಾಮಾಥ್ರ್ಯ ನಮ್ಮಲ್ಲಿವೆ. ಕೆಲಸಕ್ಕಾಗಿ ಕೈ ಕಾಲುಗಳು, ಪ್ರೀತಿಸಲು ಹೃದಯ, ವಿಚಾರ ಮಾಡಲು ತಲೆ/ ಬುದ್ಧಿ.
ಬುದ್ಧಿ ಇರುವುದು ಸತ್ಯವನ್ನು ಕಾಣುವುದಕ್ಕೆ, ಕೈ ಕಾಲುಗಳು ಇರುವುದು ಬದುಕಿನಲ್ಲಿ ಸುಂದರ ಸುಂದರ ಕಾರ್ಯಗಳನ್ನು ಮಾಡಲು, ಹೃದಯ /ಎದೆ ಇದೆ ಆನಂದ ಪಡುವುದಕ್ಕೆ ಇದುವೇ ಬದುಕು.
ಇವೆ ನಮ್ಮ ಬದುಕಿನ ಮುಖ್ಯ ಮೂರು ಅಂಗಗಳು. ಇವು ಮೂರನ್ನು ಸಮಾನವಾಗಿ ಬಳಸಬೇಕು. ಒಂದನ್ನು ಬಳಸದಿದ್ದರೆ ವ್ಯರ್ಥ. ಕೈಗಳನ್ನು ಬಳಸದಿದ್ದರೆ ವ್ಯರ್ಥ. ತಲೆಯನ್ನು ಬಳಸದಿದ್ದರೆ ವ್ಯರ್ಥ.ಒಬ್ಬ ಪಾಶ್ಚಿಮಾತ್ಯ ಕವಿ ಹೇಳುತ್ತಾರೆ ಈ ಕೈಗಳು ಇರುವುದು ಇಲ್ಲಿ ಒಂದು ಸುಂದರವಾದ ತೋಟವನ್ನು ನಿರ್ಮಿಸಬೇಕು ಎನ್ನುವ ಉದ್ದೇಶದಿಂದ. ಈ ಕೈಗಳಿಂದ ಮಣ್ಣಿನಲ್ಲಿ ಒಂದು ಬೀಜವನ್ನು ಬಿತ್ತು ಅದಕ್ಕೆ ಒಂದು ಸ್ವಲ್ಪ ನೀರೆರೆ, ಅದು ನಿನ್ನ ಕೈಗಳ ಕಾರ್ಯದ ಉದ್ದೇಶ.
ನೋಡು ಈ ಭೂಮಂಡಲ ಹಸಿರು ಹಸಿರಾಗಿ , ಸುಂದರ ಹೂವುಗಳಿಂದ ಅಲಂಕರಿಸಬೇಕು, ಬಣ್ಣಗಳಿಂದ ಕಂಗೊಳಿಸುತ್ತವೆ. ಹಣ್ಣುಗಳಿಂದ ಸಮೃದ್ದವಾಗುತ್ತದೆ. ಮನುಷ್ಯನೇ ನೀನು ಕೈಗಳನ್ನು ಬಳಸು ನಿನ್ನಲ್ಲಿ ಆ ಸಾಮಥ್ರ್ಯ ಇದೆ. ಇದನ್ನು ಬಳಸಿ ಸುಂದರ ಕೆಲಸ ಮಾಡು.
ಮೈಕಲ್ ಎಂಜೆಲೋ ಒಬ್ಬ ದೊಡ್ಡ ಶಿಲ್ಪಿ. ರೋಮನ್ ದೇಶದ ಮಹಾನ್ ಕಲೆಗಾರ. ಆತ ತನ್ನ ಕೈಗಳನ್ನು ಬಳಸಿ ಅತ್ಯಂತ ಸುಂದರವಾದ ಶಿಲ್ಪಗಳನ್ನು ಕೆತ್ತಿದ. ಕಲ್ಲನ್ನು ನೋಡಿ, ತಲೆಯಲ್ಲಿ ಯೋಚಿಸಿ, ಹೃದಯದಲ್ಲಿ ಭಾವತುಂಬಿ ಕೆತ್ತಿದ ಶಿಲ್ಪಗಳು ಇಂದಿಗೂ ಲಕ್ಷಾಂತರ ಜನ ನೋಡಲು ಹೋಗುತ್ತಾರೆ. ಅದು ನಾವು ನಮ್ಮ ಸಾಮಥ್ರ್ಯವನ್ನು ಬಳಸುವ ಪರಿಭಾವ. ನಮ್ಮಲ್ಲಿನ ಬೇಲೂರು ಹಳೇಬೀಡು ಸೋಮನಾಥಪುರದ ದೇವಾಲಯ, ಅಜಂತಾ ಎಲ್ಲೋರ ಗುಹೆಗಳು ಅಲ್ಲಿನ ಶಿಲ್ಪಗಳನ್ನು ಕೆತ್ತಿದ ಕೈಗಳು, ಊಹಿಸಿದ ತಲೆ, ಸಂತೋಷ ಗೊಂಡು ಮಾಡಿದ ಹೃದಯ.
ಕಲ್ಲಿನಲ್ಲಿ ಸ್ವರ್ಗವನ್ನು ನಿರ್ಮಿಸಿದ್ದಾರೆ. ಇವುಗಳನ್ನು ನಾವು ಸತ್ಕಾರ ಮಾಡಬೇಕು. ದೇವರು ಒಬ್ಬೊಬ್ಬರಿಗೆ ಒಂದೊಂದು ಬಗೆಯ ಶಕ್ತಿಯನ್ನು ನೀಡುತ್ತಾನೆ. ಕೆಲವರಿಗೆ ಕೈಗಳನ್ನು ಬಳಸುವ ಶಕ್ತಿ, ಕೆಲವರಿಗೆ ಹೃದಯವನ್ನು ಬಳಸುವ ಶಕ್ತಿ, ಕೆಲವರಿಗೆ ತಲೆಯನ್ನು ಬಳಸುವ ಶಕ್ತಿ. ಹೀಗೆ ಈ ಮೂರನ್ನು ಸಮಾನವಾಗಿ ಸುಂದರವಾಗಿ ಬಳಸಿಕೊಂಡರೆ ಈ ಭೂಮಿ ಸುಂದರವಾಗುವುದು. ಮನುಷ್ಯನೇ ಇವೆಲ್ಲವನ್ನು ಬಳಸು, ಇವು ಏನೆಲ್ಲಾ ಮಾಡುವುದಿಲ್ಲ ಮಣ್ಣಿನಲ್ಲಿ ಬೀಜ ಬಿತ್ತಿ ಬೆಳೆ ತೆಗೆಯುತ್ತವೆ, ಕಲ್ಲಿನಲ್ಲಿ ಮೂರ್ತಿ ಶಿಲೆಯನ್ನು ನಿರ್ಮಿಸುತ್ತವೆ, ಬಣ್ಣದಲ್ಲಿ ಚಿತ್ರಗಳನ್ನು ಬರೆಯುತ್ತವೆ.
ಹೃದಯ: ಮಾಡುವ ಕಾರ್ಯಗಳಲ್ಲಿ ಸುಖವನ್ನು ತುಂಬಿತು. ಕಣ್ಣೊಳಗೆ ಜಗತ್ತು ಎದೆಯೋಳಗೆ ಸುಂದರ ಸಂತೋಷ. ಇದುವೇ ಜೀವನದ ಅನುಭವ. ಕಣ್ಣುಗಳು ನೋಡುತ್ತಿರಬೇಕು ಹೃದಯ ಆನಂದದಿಂದ ನಲಿಯುತ್ತಿರಬೇಕು.
ಹೃದಯ ಹಾಡುತ್ತಿರಬೇಕು, ಕಣ್ಣು ನಲಿಯುತ್ತೀರಬೇಕು. ಯಾರ ಎದೆಯೊಳಗೆ ಸಂತೋಷದ ಹೊನಲು ಹರಿಯುವುದು, ಯಾರ ಎದೆಯೊಳಗೆ ಪ್ರೇಮದ ಸ್ವರ್ಗ ನಿರ್ಮಾಣವಾಗುವುದು ಅವರು ನಿಜವಾದ ಶರಣರು, ಸಂತರು, ದಾರ್ಶನಿಕರು, ಮಹಾತ್ಮರು. ಯಾರು ಜಾತಿ ಮತ ಪಂಥ ಧರ್ಮ ಇವುಗಳನ್ನು ತೊರೆದು ಎಲ್ಲವೂ ನಮ್ಮದೇ ಎಲ್ಲರೂ ನಮ್ಮವರೇ ಎನ್ನುವ ಭಾವ ಸಾಮಥ್ರ್ಯ ಹೊಂದಿದವರೆ ಸಂತರು.
“ಇಡಿ ವಿಶ್ವ ಈಶಾವಾಸ್ಯಂ ಇದಂ ಸವರ್ಂ.”
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ
ಸಕಲವಿಸ್ತಾರದ ರೂಹು ನೀನೇ ದೇವಾ
ವಿಶ್ವತಶ್ಚಕ್ಷು' ನೀನೆ ದೇವಾ ವಿಶ್ವತೋಮುಖ’ ನೀನೆ ದೇವಾ
ವಿಶ್ವತೋಬಾಹು' ನೀನೇ ದೇವಾ ವಿಶ್ವತಃಪಾದ’ ನೀನೆ ದೇವಾ
ಕೂಡಲಸಂಗಮದೇವಾ.
ಇದೆ ಭಾವ ಎಲ್ಲರೂ ಎಲ್ಲವೂ ನಮ್ಮದೇ ಎನ್ನುವ ಭಾವ. ಇದೆ ಎದೆಯ ವಿಶಾಲ ಭಾವ.
ಭಾವ: ಇದನ್ನೆಲ್ಲ ನೋಡಿದರೆ ಭಾವ ಸೌಂದರ್ಯ. ಇದೆ ಹೃದಯ. ಇದೆ ಹೃದಯ ಭಾವ ತೋರಿಸುವುದು. ಈ ಜಗತ್ತನ್ನು ಅದ್ಭುತವಾಗಿ ಮಾಡುವುದು. ಪ್ರತಿ ವಸ್ತುವಿನಲ್ಲಿ ದೇವನನ್ನು ಕಾಣುವ ಗುರುತಿಸುವ ಶಕ್ತಿ ಈ ಹೃದಯಕ್ಕೆ ಮಾತ್ರ ಅದನ್ನು ಬಳಸಿಕೊಂಡರೆ ನೀನೇ ಮಹಾತ್ಮ.
ಬಸವಣ್ಣ ನವರನ್ನು ನಾವು ಮಹಾತ್ಮ ಬಸವೇಶ್ವರ ಎನ್ನುತ್ತೇವೆ ಏಕೆ?.
ಅವರು ಎಲ್ಲರನ್ನು ನಮ್ಮವರು ಎಂದು ಭಾವಿಸಿದ್ದರು. ಎಲ್ಲರೂ ನಮ್ಮವರು ಎಲ್ಲವೂ ಆ ಶಿವನ ಸ್ವರೂಪ ಎಂದು ಭಾವಿಸಿದರು. ಆದ್ದರಿಂದ ಅವರು ಮಹಾತ್ಮರಾದರು.ಯಾವುದೇ ಸಂತ ಜ್ಞಾನಿ ಶರಣ ದಾರ್ಶನಿಕರನ್ನು ತೆಗೆದುಕೊಳ್ಳಿ ಯಾರ ಹೃದಯ ಭಾವ ವಿಶಾಲವಾಗಿರುವುದು ಅವರೇ ಸಂತರು. ನನ್ನದು ತನ್ನದು ಎನ್ನುವ ಭಾವವನ್ನು ಬಿಟ್ಟವರು.
ಅರಿಸ್ಟಾಟಲ್ ಹೇಳುತ್ತಾರೆ, ನಾನು ಅಥೆನ್ಸ್ ಪಟ್ಟಣದ ನಾಗರಿಕನಲ್ಲ, ನಾವು ಗ್ರೀಸ್ ದೇಶದ ಪ್ರಜೆಯಲ್ಲ, ನಾವು ವಿಶ್ವದ ಪ್ರಜೆ. ಇದು ಭಾವ ಸಾಮಥ್ರ್ಯ. ಇದು ಸುಂದರ ಭಾವ. ನಮ್ಮ ಋಷಿಗಳು ಸಂತರು ಶರಣರು ಹೇಳಿರುವುದು ಒಂದೇ ಇಡೀ ಜಗತ್ತೆ ದೇವನ ರೂಪ. ಎಲ್ಲವನ್ನು ಪ್ರೀತಿಸು. ಸೂರ್ಯ ನಿನ್ನದೇ, ಚಂದ್ರ ನಿನ್ನದೇ, ಗಾಳಿ ನೀರು ಬೆಳಕು ನಿನ್ನದೇ, ಮಿನುಗೋ ನಕ್ಷತ್ರ ನಿನ್ನದೇ ಇವೆಲ್ಲವೂ ನಿನ್ನದೇ ಎಂದು ಪ್ರೀತಿಸುವವರು ಮಹಾತ್ಮರು.
ಮಹಾನ್ ಆತ್ಮ. ಎದೆಯನ್ನು ಬಳಸಿಕೊಂಡು ಭಾವವನ್ನು ಬಳಸಿಕೊಂಡರು. ಎಲ್ಲರೂ ನಮ್ಮವರು ಎನ್ನುವ ಭಾವ ಇದ್ದರೆ ನಾವು ಸಂತೋಷ ಪಡುತ್ತೇವೆ. ಈ ಭಾವ ಇದ್ದರೆ ಮನುಷ್ಯ ಸಂತೋಷದ ಸ್ವರ್ಗ ಕಾಣುತ್ತಾನೆ. ಮನುಷ್ಯ ದೊಡ್ಡವ, ಸಣ್ಣವ ಎನ್ನುವ ಭಾವ ನಿರ್ಧಾರ ವಾಗುವುದು ಯಾವುದರಿಂದ?
ಡಿಗ್ರಿಯಿಂದ ದೊಡ್ಡವರು ಚಿಕ್ಕವರು ಎಂದಲ್ಲ, ಹಣದಿಂದ ಅಲ್ಲ, ಮನೆ ಮಾರುಗಳಿಂದ ಅಲ್ಲ, ಎದೆಯಲ್ಲಿ ಭಾವ ಸಾಮಥ್ರ್ಯ ಹೊಂದಿದ ಹೃದಯದಿಂದ ದೊಡ್ಡವರು ಚಿಕ್ಕವರು ಎನ್ನುವ ಭಾವ ಮೂಡುತ್ತದೆ. ಭಾವ ಚಿಕ್ಕದಾದರೆ ಸಣ್ಣವ, ಭಾವ ದೊಡ್ಡದಾದರೆ ದೊಡ್ಡವರು.
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ.
ಇವರು ಯಾರು ಎಂದು ಯೋಚಿಸದೆ ಇವರು ನಮ್ಮವರು ಎಲ್ಲರೂ ನಮ್ಮವರು ಎನ್ನುವ ಭಾವ ಮೂಡುವುದೇ ಹೃದಯ ಭಾವ. ಅದನ್ನು ನಾವು ಶುದ್ದವಾಗಿರಿಸಬೇಕು. ಎಲ್ಲವನ್ನು ಪ್ರೀತಿಸಬೇಕು.
ಎಲ್ಲಾ ನಮ್ಮದು ಎಂದು ಸಿಕ್ಕ ಸಿಕ್ಕವರ ಮನೆಗೆ ನುಗ್ಗುವುದಲ್ಲ, ಸಿಕ್ಕಿದ್ದನ್ನೆಲ್ಲ ಪಡೆಯುವುದಲ್ಲ, ಎಷ್ಟು ಎಲ್ಲಿ ಇದೆಯೋ ಅಷ್ಟೆ ನಮ್ಮದು ಎನ್ನುವ ಭಾವ ನಮ್ಮದಾಗಿರಬೇಕು. ಹೇಗೆ ನಾವು ಒಂದು ಸಭೆ ಸಮಾರಂಭಗಳಲ್ಲಿ ಕುರ್ಚಿಯ ಮೇಲೆ ಕುಳಿತಿರುತ್ತವೆ ನಾವು ಅಲ್ಲಿ ಇರುವವರೆಗೆ ಅದು ನಮ್ಮದು. ಬಳಿಕ ಅದು ನಮ್ಮದಲ್ಲ ಅದನ್ನ ಅಲ್ಲೇ ಬಿಟ್ಟು ಬರುತ್ತೇವೆ. ಹಾಗೆಯೇ ನಾವು ಈ ಜಗತ್ತಿಗೆ ಬಂದಿದ್ದೇವೆ ಇಲ್ಲಿ ಇರುವವರೆಗೆ ಇದು ನಮ್ಮದು ಅದನ್ನು ಪ್ರೀತಿಸಬೇಕು, ಸಂತೋಷ ಪಡಬೇಕು.
ತಲೆ: ನಮ್ಮ ಸುತ್ತ ಮುತ್ತ ಏನೆಲ್ಲಾ ಇದೆ. ಸುಮ್ಮನೆ ಪ್ರಶ್ನೆ ಮಾಡು ಜ್ಞಾನದ ಹೊಳೆ ಹರಿಯುತ್ತದೆ. ಸತ್ಯ ಅಭಿವ್ಯಕ್ತಗೊಳ್ಳುತ್ತದೆ. ಇದರಲ್ಲಿ ಸುಳ್ಳೇ ಇಲ್ಲ ಎನ್ನುವ ಭಾವ ಮೂಡುತ್ತದೆ. ವಿಶ್ವವೇ ಸುಂದರವಾಗುತ್ತದೆ. ಸತ್ಯಂ ಶಿವಂ ಸುಂದರಂ. ಇದು ಸತ್ಯ, ಇದೇ ಸುಂದರ, ಇದೇ ಶಿವ. ಹೀಗೆ ತಿಳುವಳಿಕೆಯಲ್ಲಿ ಬಂದರೆ ನಾವು ಧನ್ಯರು. ಈ ಮೂರನ್ನು ನಾವು ಪಡೆದು ಬಂದವರು ಇವನ್ನು ಚನ್ನಾಗಿ ಬಳಸಬೇಕು. ನೀನಿರುವ ಸ್ಥಳ, ಸ್ಥಳದ ಮಣ್ಣು ಹೊನ್ನಾಗುವುದು, ಬದುಕು ಬಂಗಾರ ವಾಗುವುದು. ಇದುವೇ ಜೀವನದ ಉದ್ಧೇಶ.

ಸಂಗ್ರಹ:??? ಸಿದ್ದಲಿಂಗ ಎಸ್. ಸ್ವಾಮಿ ಉಚ್ಚ ತಾ. ಭಾಲ್ಕಿ ಜಿ. ಬೀದರ