ಯಾರೋ ಇಬ್ಬರು ದೆಹಲಿಹೋಗಿ ಬಂದ ತಕ್ಷಣ ಸಿಎಂ ಬದಲಾವಣೆ ಸಾಧ್ಯವಿಲ್ಲ

ಹೊನ್ನಾಳಿ.ಮೇ.೨೭: ಮುಖ್ಯಮಂತ್ರಿಗಳ ಬದಲಾವಣೆ ಎಂಬುದು ಊಹಾಪೋಹ, ಯಾರೋ ಇಬ್ಬರು ದೆಹಲಿಹೋಗಿ ಬಂದ ತಕ್ಷಣ ಸಿಎಂ ಬದಲಾವಣೆಯಾಗುವುದಿಲ್ಲಾ, ದೆಹಲಿಗೆ ಹೋದವರು ಮೊದಲು ಕ್ಷೇತ್ರದ ಜನರ ಕೆಲಸ ಮಾಡುವ ಮೂಲಕ ಅವರ ಋಣ ತೀರಿಸಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಹೋಗಿದವರಿಗೆ ಈ ಸಂದರ್ಭದಲ್ಲಿ ರಾಜಕಾರಣ ಬೇಕಾ ಎಂದು ಪ್ರಶ್ನೇ ಮಾಡಿದರು. ಜನರನ್ನು ಬದುಕಿಸಿ ಆನಂತರ ರಾಜಕೀಯ ಮಾಡಿ ಎಂದು ಟಾಂಗ್ ನೀಡಿದರು.ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ಪ್ರತಿನಿತ್ಯ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ರಾಜಕಾರಣ ಬಗ್ಗೆ ನನಗೆ ಇಷ್ಟವಿಲ್ಲಾ ಎಂದು ಪ್ರಹಲ್ಲಾದ್ ಜೋಷಿ ಹೇಳಿದ್ದಾರೆ. ಆದರೇ ಯಾರೋ ಕೆಲವರು ಈ ರೀತಿ ಮಾತನಾಡುತ್ತಿದ್ದು ಇದೆಲ್ಲಾ ಊಹಾಪೋಹ ಎಂದರು.ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲಾ ಎಂದು ಉಸ್ತುವಾರಿ ಅರುಣ್ ಸಿಂಗ್ ಅವರೇ ಹೇಳಿದ್ದಾರೆ, ಆದರೂ ಕೆಲವರು ಪದೇ ಪದೇ ರೀತಿ ಹೇಳಿಕೆ ನೀಡುತ್ತಿದ್ದು ಇಂತಹ ಸಂದರ್ಭದಲ್ಲಿ ಈ ರೀತಿ ಹೇಳಿಕೆ ನೀಡುವವರಿಗೆ ಕ್ಷೇತ್ರದ ಜನರೇ ಉತ್ತರ ನೀಡುತ್ತಾರೆಂದರು.ಸಿ.ಪಿಯೋಗಿಶ್ವರ್ ಅವರಿಗೆ ಚನ್ನಪಟ್ಟಣದಲ್ಲೇ ನೆಲೆ ಇಲ್ಲಾ ಎಂದ ಶಾಸಕರು, ಅನಾಯಾಸವಾಗಿ ಸಚಿವರಾಗಿದ್ದು ದೆಹಲಿಗೆ ಹೋಗಿ ರಾಜಕಾರಣ ಮಾಡುತ್ತಿದ್ದೀರಾ, ನಿಮ್ಮನ್ನು ಕೆಲಸ ಮಾಡಿ ಎಂದು ಸಚಿವರನ್ನಾಗಿ ಮಾಡಿದ್ದು ಮೊದಲು ಕ್ಷೇತ್ರದ ಜನರ ಕೆಲಸ ಮಾಡಿ ಎಂದರು.ಕೋವಿಡ್‌ಗೂ ಜಿಂದಾಲ್‌ಗೆ ಸಂಬಂದವೇ ಇಲ್ಲಾ ಇದೆಲ್ಲಾ ಕೇವಲ ಅಪಪ್ರಚಾರ ಎಂದ ರೇಣುಕಾಚಾರ್ಯ ಯಾರಿಬ್ಬರೋ ಹೇಳಿದ ತಕ್ಷಣ ನಾಯಕತ್ವ ಬದಲಾವಣೆ ಇಲ್ಲಾ.ಇದು ರಾಜಕಾರಣ ಮಾಡುವ ಸಮಯವಲ್ಲಾ ಸಿಎಂ ಅವರು ಕೋವಿಡ್ ನಿರ್ವಹಣೆ ಮಾಡಿ ಎಂದು ಶಾಸಕರನ್ನು ಆಯಾ ಕ್ಷೇತ್ರದಲ್ಲಿ ಇರುವಂತೆ ಸೂಚಿಸಿದ್ದಾರೆ, ಸದ್ಯಕ್ಕೆ ಶಾಸಕಾಂಗ ಸಭೆಯ ಅವಶ್ಯಕತೆ ಇಲ್ಲಾ ಎಂದರು.ಆರೋಗ್ಯ ಸಚಿವರ ಸಭೆಗೆ ಗೈರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕರು ನನ್ನ ಜೀವನವನ್ನು ಪಣಕಿಟ್ಟು ಪ್ರಾಕ್ಟಿಕಲ್ ಹಾಗೀ ಅವಳಿ ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದೇನೆ  ನನಗೆ ಸಾಕಷ್ಟು ಕೆಲಸ ಇದೇ ನನಗೆ ರಾಜಕಾರಣ ಅವಶ್ಯಕತೆ ಇಲ್ಲಾ ನನ್ನ ಕ್ಷೇತ್ರದ ಜನರು ಸಾಯಬಾರದು ಎಂದು ಕೆಲಸ ಮಾಡುತ್ತಿದ್ದೇನೆ ಎಂದರು.