ಯಾರೂ ಸತ್ಯ ಹರಿಶ್ಚಂದ್ರರಲ್ಲ

ಬೆಂಗಳೂರು,ಮಾ.೨೪-ಎಲ್ಲರ ಮನೆ ದೋಸೆನೂ ತೂತೆ, ಯಾರೂ ಕೂಡ ಸತ್ಯ ಹರಿಶ್ಚಂದ್ರರಲ್ಲ. ನಾನು ಕೂಡ ಒಂದು ಸಾರಿ ಎಡವಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸಚಿವ ಸುಧಾಕರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಸತ್ಯ ಹರಿಶ್ಚಂದ್ರರಲ್ಲ, ಎಲ್ಲರ ಚಾರಿತ್ರ್ಯದ ಬಗ್ಗೆ ತನಿಖೆಯಾಗಲಿ ಎಂದು ಸಚಿವ ಸುಧಾಕರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಭೂಮಿ ಮೇಲೆ ಜನಿಸಿರುವಪ್ರತಿಯೊಬ್ಬರಿಗೂ ಸಹಜ ಪ್ರಕ್ರಿಯೆಗಳು ಇದ್ದದ್ದೇ, ನಾನು ಒಂದುಬಾರಿ ಎಡವಿದ್ದೆ.ಅಧಿವೇಶನದಲ್ಲೇ ಅದನ್ನು ಹೇಳಿ ತಪ್ಪು ಒಪ್ಪಿಕೊಂಡಿದ್ದೇ ಎಂದರು.
ಇಲ್ಲಿ ಯಾರು ಸತ್ಯ ಹರಿಶ್ಚಂದ್ರರಲ್ಲ ಸುಮ್ಮನೆ ಏಕೆ ರಾಡಿ ಎರಚಿಕೊಳ್ಳಿತ್ತೀರ ನೀವು ಸತ್ಯವಂತರಾದರೆ ನ್ಯಾಯಾಲಯಕ್ಕೆ ಹೋಗಿ ಯಾಕೆ ತಡೆಯಾಜ್ಞೆ ತಂದಿರಿ ಎಂದು ಸುಧಾಕರ್ ಅವರಿಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ನಾನು ಮಾಡಿದ ತಪ್ಪನ್ನು ಸದನದಲ್ಲೂ ಒಪ್ಪಿಕೊಂಡಿದ್ದೇನೆ. ನನ್ನ ಹೆಸರನ್ನು ಯಾಕೆ ಎಳೆದು ತರುತ್ತೀರಿ ಎಂದು ಹರಿಹಾಯ್ದರು. ಜವಾಬ್ದಾರಿ ಸಚಿವರಾಗಿ ಈ ರೀತಿ ಮಾತನಾಡಬಾರದು ಇಂತಹ ಹೇಳಿಕೆ ಕೊಡುವ ಮೊದಲು ಯೋಚಿಸಬೇಕಿತ್ತು ಎಂದರು.
ನೀವುಗಳೇ ಸಮಸ್ಯೆ ಸೃಷ್ಟಿಸಿಕೊಂಡು ಬೇರೆಯವರ ಮೇಲೆ ಏಕೆ ಕೆಸರು ಹಾಕುತ್ತಿದ್ದೀರಿ, ಬೀದಿಯಲ್ಲಿ ನಿಂತು ನಗೆಪಾಟಲಿಗೀಡಾಗಬೇಡಿ ಕೆಲಸಕ್ಕೆ ಬಾರದ ವಿಷಯಗಳಿಗೆ ಸಮಯ ವ್ಯರ್ಥ ಮಾಡಿಬೇಡಿ ಎಂದು ಸುಧಾಕರ್ ವಿರುದ್ಧ ಕಿಡಿಕಾರಿದ್ದಾರೆ.
ಸಚಿವ ಸುಧಾಕರ್ ಅವರೇ ನೀವು ಏಕಪತ್ನಿ ವ್ರತಸ್ಥರಾಗಿದ್ದೀರಾ, ಹಾಗಿದ್ದರೆ ಕೋರ್ಟ್‌ಗೆ ಹೋಗಿ ತಡೆ ತಂದಿದ್ದೇಕೆ ಎಂದು ಕುಮಾರಸ್ವಾಮಿ ಸುಧಾಕರ್ ವಿರುದ್ಧ ಹರಿಹಾಯ್ದರು.