ಯಾರು ಬೇಕಾದರೂ ಕಾಶ್ಮೀರದಲ್ಲಿ ಜಾಗ ಖರೀದಿಗೆ ಅವಕಾಶ-ಕೇಂದ್ರದ ಅಧಿಸೂಚನೆ

ಶ್ರೀನಗರ, ಅ 27- ದೇಶದ ಯಾವುದೇ ಪ್ರಜೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್​ನಲ್ಲಿ ಜಮೀನು ಕೊಳ್ಳಲು ಸಾಧ್ಯವಾಗುವಂತೆ ಕೇಂದ್ರ ಸರ್ಕಾರ ಭೂಕಾನೂನನ್ನು ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿದೆ.
ವರ್ಷದ ಹಿಂದೆ ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದಿದ್ದ ಕೇಂದ್ರ ಸರ್ಕಾರ ಹಿಂಪಡೆದಿತ್ತು. ಹೀಗಾಗಿ ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಇದ್ದಾಗ ಅಲ್ಲಿ ಆ ರಾಜ್ಯದ ಹೊರಗಿನ ಯಾರಿಗೂ ಕೂಡ ಜಮೀನು ಕೊಳ್ಳಲು ಸಾಧ್ಯವಿರಲಿಲ್ಲ. ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಿಲವಾಸಿಗಳು ಮಾತ್ರ ಹಕ್ಕು ಹೊಂದಿದ್ದರು. ಆದರೆ, 370ನೇ ವಿಧಿ ರದ್ದು ಮಾಡಿ ವಿಶೇಷ ಸ್ಥಾನಮಾನ ಹಿಂಪಡೆಯುವ ಮೂಲಕ ಕಾಶ್ಮೀರವನ್ನು ದೇಶದ ಇತರ ರಾಜ್ಯಗಳಂತೆ ಮುಕ್ತ ವ್ಯವಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈ ಮಧ್ಯೆ ನ್ಯಾಷನಲ್ ಕಾನ್ಫರೆನ್ಸ್ ಪ್ರತಿಕ್ರಿಯಿಸಿ, ಜಮ್ಮು ಕಾಶ್ಮೀರ ಮಾರಾಟಕ್ಕಿದೆ ಎಂದು ವ್ಯಂಗ್ಯವಾಡಿದೆ.
ಈ ಬಗ್ಗೆ‌ ಟ್ವೀಟ್ ಮಾಡಿರುವ ನಾಯಕ ಫಾರೂಖ್ ಅಬ್ದುಲ್ಲಾ, ಜಮ್ಮು-ಕಾಶ್ಮೀರದ ಭೂ ಮಾಲೀಕತ್ವ ಕಾನೂನುಗಳಿಗೆ ತಿದ್ದುಪಡಿ ತಂದಿರುವುದು ಸಹಿಸಲು ಆಗುತ್ತಿಲ್ಲ. ಕೃಷಿಯೇತರ ಜಮೀನುಗಳ ಖರೀದಿ ಮತ್ತು ಕೃಷಿ ಜಮೀನಿನ ಹಸ್ತಾಂತರ ಈಗ ಇನ್ನಷ್ಟು ಸುಲಭ ಮಾಡಿಕೊಡಲಾಗಿದೆ. ಈ ರಾಜ್ಯದ ಸ್ವಾತಂತ್ರ್ಯಕ್ಕಿದ್ದ ಒಂದು ಸಣ್ಣ ಎಳೆ ಕೂಡ ಹೊರಟು ಹೋಯಿತು ಎಂದು ಟೀಕಿಸಿದ್ದಾರೆ.