ಯಾರು ಪಾಸ್,ಯಾರಿಗೆ ಗೆಟ್ ಪಾಸ್

ನಗರ ಕ್ಷೇತ್ರ :ಗೊಂದಲದ ಗುಡಾದ ಜೆಡಿಎಸ್
ಸಂಜೆವಾಣಿ ವರದಿ
ರಾಯಚೂರು ಎ.೦೧
ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದಂತೆ ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರು ಆಗುತ್ತಾರೆ ಎನ್ನುವದು ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮಿತಿ ಇನ್ನು ನಿರ್ಧಾರ ಮಾಡದೇ ಇರುವುದು ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ.
ಜೆಡಿಎಸ್ ನಗರ ಕ್ಷೇತ್ರದಲ್ಲಿ ಮೂಲ ಜೆಡಿಎಸ್ ಪಕ್ಷದ ರಾಮನಗೌಡ ಏಗನೂರು ಹಾಗೂ ಈ.ವಿನಯ್ ಕುಮಾರ್ ಅವರು ಪ್ರಬಲ ಅಖಂಕ್ಷಿಯಾಗಿದ್ದಾರೆ, ಪಂಚರತ್ನ ಯಾತ್ರೆ ಸಮಯದಲ್ಲಿ ಕುಮಾರಸ್ವಾಮಿಯವರು ಪತ್ರಿಕಾ ಗೋಷ್ಠಿಯಲ್ಲಿ ಮುಂದಿನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಮಯದಲ್ಲಿ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದು ಹೇಳಿಕೆ ನೀಡಿ ಒಂದು ತಿಂಗಳು ಕಳೆದರು ಇನ್ನು ಅಧಿಕೃತ ಅಭ್ಯರ್ಥಿ ಘೋಷಣೆಯಾಗಿಲ್ಲ,
ಹೆಚ್ ಡಿ ಕೆ ಯವರು ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷದ ಟಿಕೆಟ್ ನೀಡುತ್ತೇವೆ ಎಂದು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ ಆ ನಿಟ್ಟಿನಲ್ಲಿ ನೋಡಿದ್ರೆ ಬಹಳ ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ದುಡಿಯುತ್ತಿರುವ ರಾಮನಗೌಡರಿಗೆ ಜೆಡಿಎಸ್ ಪಕ್ಷದ ಟಿಕೆಟ್ ನೀಡಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇನ್ನೊಂದಡೆ ಜೆಡಿಎಸ್ ಪಕ್ಷದ ಟಿಕೆಟ್ ನೀಡುತ್ತಾರೆ ಎಂದು ನಗರಸಭೆ ಸ್ಥಾನವನ್ನು ತ್ಯಾಗ ಮಾಡಿ ಪಂಚರತ್ನ ಯಾತ್ರೆ ಸಮಯದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ, ಪಕ್ಷದ ನಾಯಕರು ಟಿಕೆಟ್ ನೀಡುವ ಭರವಸೆ ನೀಡಿರುವುದರಿಂದ ಅವರು ಪಕ್ಷಕ್ಕೆ ಬಂದಿದ್ದಾರೆ, ಆದರೆ ಕುಮಾರಸ್ವಾಮಿಯವರು ಸ್ವಲ್ಪ ದಿನ ನೋಡಿ ನಂತರ ಅಭ್ಯರ್ಥಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಚುನಾವಣೆ ಹತ್ತಿರ ಬಂದಿರುವ ಸಮಯದಲ್ಲಿ ನಗರ ಕ್ಷೇತ್ರದ ಜೆಡಿಎಸ್ ಪಕ್ಷದ ಕಾರ್ಯಕರ್ತರು ಅಭ್ಯರ್ಥಿ ಯಾರಾಗಬಹುದು ಎನ್ನುವ ಗೊಂದಲದಲ್ಲಿದ್ದಾರೆ.
ಪಂಚರತ್ನ ಯಾತ್ರೆ ಅತ್ಯಂತ ಯಶಸ್ವಿಯಾಗಿ ಮುಗಿಸಿಕೊಂಡಿರುವ ಬೆನ್ನಲೇ ಈಗ ಎರಡನೇ ಹಂತದಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಎಲ್ಲವನ್ನು ಲೆಕ್ಕಾಚಾರ ಹಾಕಿ ಅಭ್ಯರ್ಥಿ ಘೋಷಣೆ ಮಾಡುವ ಆಲೋಚನೆಯಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಮುಖಂಡರು ಪಟ್ಟಿ ತಯಾರು ಮಾಡುತ್ತಿದ್ದಾರೆ, ಯಾರಿಗೆ ಪಕ್ಷದ ಟಿಕೆಟ್ ಸಿಗುವ ಅದೃಷ್ಟವಿದೆ ಎಂದು ಕೆಲವೇ ದಿನಗಳಲ್ಲಿ ತಿಳಿಯಲಿದೆ, ಕೆಲವು ಕ್ಷೇತ್ರಗಳಲ್ಲಿ ಪಕ್ಷದ ಟಿಕೆಟ್ ಬೇಗ ಘೋಷಣೆ ಮಾಡಿದರೆ ಇನ್ನುಳಿದ ಟಿಕೆಟ್ ಆಕಾಂಕ್ಷಿಗಳು ಬೇರೆ ಪಕ್ಷಕ್ಕೆ ಹೋಗುತ್ತಾರೆ ಎನ್ನುವ ಆಂತಕ ಕೂಡ ಇರಬಹುದು, ಆಗಾಗಿ ಎಲ್ಲವನ್ನು ಅಳೆದು ತೂಗಿ ಟಿಕೆಟ್ ಘೋಷಣೆ ಮಾಡುವ ಲೆಕ್ಕಾಚಾರದಲ್ಲಿ ಮುಖಂಡರಿದ್ದಾರೆ.

ಬಾಕ್ಸ್
ಜೆಡಿಎಸ್ ಪಕ್ಷ ಕಾದು ನೋಡುವ ತಂತ್ರ
ಕಾಂಗ್ರೆಸ್ – ಬಿಜೆಪಿ ಪಕ್ಷದಲ್ಲಿ ಇನ್ನು ಅಭ್ಯರ್ಥಿ ಘೋಷಣೆ ಮಾಡಿಲ್ಲಾ ಆ ಪಕ್ಷಗಳಲ್ಲಿ ಕೂಡ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಇದೆ ಅಲ್ಲಿ ಟಿಕೆಟ್ ಸಿಗದೇ ಬೇರೆಯವರಿಗೆ ಘೋಷಣೆ ಆದರೆ ಅಂತವರನ್ನು ಪಕ್ಷಕ್ಕೆ ಸೇರಿಸಿಕೊಂಡು ಅವರು ಪ್ರಭಾವಿ ರಾಜಕಾರಣಿಯಾದರೆ ಅವರಿಗೆ ಟಿಕೆಟ್ ನೀಡಬಹುದು ಎನ್ನುವ ಲೆಕ್ಕಾಚಾರವಿರಬಹುದು ಹಾಗಾಗಿ ಇನ್ನು ಅಧಿಕೃತವಾಗಿ ಇನ್ನು ಜೆಡಿಎಸ್ ಪಕ್ಷ ಟಿಕೆಟ್ ಘೋಷಣೆಯಾಗಿಲ್ಲ, ಅಲ್ಲಿಯೂ ಕೂಡ ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡುತ್ತಾರೆಯೇ? ಅಥವಾ ಹೊಸಬರಿಗೆ ಮಣೆಯಾಕುತ್ತಾರೆ ಎನ್ನುವದನ್ನು ಕಾದು ನೋಡಬೇಕು.

ಬಾಕ್ಸ್

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಅಧಿಕೃತವಾಗಿ ಜೆಡಿಎಸ್ ಪಕ್ಷದಿಂದ ಮಾನ್ವಿ, ಲಿಂಗಸೂಗೂರು, ದೇವದುರ್ಗ, ಸಿಂಧನೂರು, ರಾಯಚೂರು ಗ್ರಾಮೀಣ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆಯಾಗಿದ್ದಾರೆ,ಮಸ್ಕಿ, ಹಾಗೂ ರಾಯಚೂರು ನಗರ ಕ್ಷೇತ್ರದಲ್ಲಿ ಟಿಕೆಟ್ ಘೋಷಣೆಯಾಗಿಲ್ಲ, ನಗರ ಕ್ಷೇತ್ರದಲ್ಲಿ ಈ.ವಿನಯ್ ಕುಮಾರ್ ಅವರು ಟಿಕೆಟ್ ಘೋಷಣೆಯಾಗಿದೆ ಎಂದು ಜಿಲ್ಲೆಯ ನಾಯಕರು ಹೇಳುತ್ತಿದ್ದಾರೆ ಆದರೆ ರಾಜ್ಯದ ನಾಯಕರು ಇನ್ನು ಅಧಿಕೃತವಾಗಿ ಅಭ್ಯರ್ಥಿ ಘೋಷಣೆ ಮಾಡಿರುವುದಿಲ್ಲ, ಈ ವಾರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗುವುದು ಎಂದು ಪಕ್ಷದ ಮುಲಗಳಿಂದ ತಿಳಿದುಬಂದಿದೆ.