ಯಾರಿಗೆ ಬಳ್ಳಾರಿ ಮತದಾರರ ಒಲವು ಹಾಲಿ ಶಾಸಕರಿಗೋ.. ಮಾಜಿ ಸಚಿವರಿಗೋ..


* 8 ವಿಧಾನ ಸಭಾ ಕ್ಷೇತ್ರ 6 ಮೀಸಲು 2 ಸಾಮಾನ್ಯ
* 6 ಕಾಂಗ್ರೆಸ್, ಜೆಡಿಎಸ್‍ಬ ಬಿಜೆಪಿ ಒಬ್ಬ ಶಾಸಕರು
* ಶ್ರೀರಾಮುಲುಗೆ 3 ದಶಕದಿಂದ ತುಕರಾಂಗೆ ಒಂದುವರೆ ದಶಕದ ರಾಜಕೀಯ ಅನುಭವ
* ಕ್ಷೇತ್ರದಲ್ಲಿ 200 ವರೆಗೆ ಕಾಂಗ್ರೆಸ್ ಗಾಳಿ, 2004 ರಿಂದ ಬಿಜೆಪಿ ಗಾಳಿ
* ಗ್ಯಾರೆಂಟಿ ನಂಬಿರುವ ಕಾಂಗ್ರೆಸ್
* ಮೋದಿ ಅಲೆ ನಂಬಿರುವ ಬಿಜೆಪಿ
* ಎರೆಡು ಕಡೆ ಪ್ರಚಾರದ ಅಬ್ಬರ ಶುರು
* ಕಾಂಗ್ರೆಸ್‍ನಲ್ಲಿ ಸಚಿವರಾದ ಸಂತೋಶ್ ಲಾಡ್, ನಾಗೇಂದ್ರಗೆ ಪ್ರತಿಷ್ಟೆ
* ಬಿಜೆಪಿಯಲ್ಲಿ ಜನಾರ್ಧರೆಡ್ಡಿ, ಆನಂದ್ ಸಿಂಗ್‍ಗೆ ಪ್ರತಿಷ್ಟೆ
ಎನ್.ವೀರಭದ್ರಗೌಡ
ಬಳ್ಳಾರಿ, ಮೇ.01: ಈ ಲೋಕಸಭಾ ಕ್ಷೇತ್ರ ತುಂಗಭದ್ರ ಜಲಾಶಯ, ದರೋಜಿ ಮತ್ತು ಗುಡೆಕೋಟೆ ಕರಡಿಧಾಮ, ಅಂಕಸಮುದ್ರದ ಪಕ್ಷಿ ಧಾಮ, ಅಟಲ್ ಬಿಹಾರಿ ಜುವಲಾಜಿಕಲ್ ಪಾರ್ಕ್ ಮತ್ತು ವನ್ಯ ಮೃಗಗಳ ಸಫಾರಿ,  ಸಂಡೂರಿನ ಬೆಟ್ಟಗಳಲ್ಲಿ ಹಸಿರು ಮತ್ತು ಅದಿರಿನ ಸಂಪತ್ತು ಪ್ರಾಕೃತಿಕವಾಗಿ ಗಮನ ಸೆಳೆದರೆ.  ದೇಶದಲ್ಲಿಯೇ ಬೃಹತ್ತಾದ ಉಕ್ಕಿನ ಕೈಗಾರಿಕೆಗಳು, ಮೆಣಸಿಕಾಯಿ, ಭತ್ತ ಮೊದಲಾದ ಬೆಳೆಗಳ ಕೃಷಿ, ಎರೆಡು ರಾಷ್ಟ್ರೀಯ ಹೆದ್ದಾರಿ, ರೈಲ್ವೇ ಸಂಪರ್ಕ, ವಿಮಾನ ಯಾನ ಸೌಲಭ್ಯವನ್ನು ಹೊಂದಿದೆ.
ಶೈಕ್ಷಣಿಕವಾಗಿ ವಿಜಯನಗರ ಶ್ರೀಕೃಷ್ಣದೇವರಾಯ ಮತ್ತು ಹಂಪಿ ಕನ್ನಡ ವಿಶ್ವ ವಿದ್ಯಾಲಯ, ಮೂರು ಇಂಜಿನೀಯರಿಂಗ್ ಮತ್ತು ಒಂದು ವೈದ್ಯಕೀಯ ಕಾಲೇಜು ಇಲ್ಲಿವೆ.
ಐತಿಹಾಸಿಕವಾಗಿ ವಿಶ್ವ ಪರಂಪರೆಯ ತಾಣ ಹಂಪಿ, ಬಳ್ಳಾರಿಯ ಬೆಟ್ಟದ ಮೇಲಿನ ಕೋಟೆ, ಸ್ವಾತಂತ್ರ ಪೂರ್ವದಿಂದಲೂ ಕಾರ್ಯ ನಿರ್ವಹಿಸುತ್ತಿರುವ ಕ್ರೈಸ್ತ ಮಿಷನರಿಗಳು, ಚರ್ಚ್‍ಗಳು ಹಾಗು ಧಾರ್ಮಿಕವಾಗಿಯೂ ಹೆಸರಾಗಿರುವ ಮೈಲಾರ, ಸಂಡೂರು ಕುಮಾರಸ್ವಾಮಿ, ಕೊಟ್ಟೂರಿನ ಗುರುಬಸವ, ಬಳ್ಳಾರಿಯ ದುರ್ಗಮ್ಮ, ಮಲ್ಲೇಶ್ವರ, ಚೇಳ್ಳಗುರ್ಕಿಯ ಎರ್ರಿತಾತನ ಸುಕ್ಷೇತ್ರವನ್ನು ಹೊಂದಿದೆ. 
ಕ್ಷೇತ್ರದ ಇತಿಹಾಸ:
ಬಳ್ಳಾರಿ ಲೋಕಸಭಾ ಕ್ಷೇತ್ರ 1952ರಲ್ಲಿ ಮಂದ್ರಾಸ್ ಕರ್ನಾಟಕ ಪ್ರಾಂತದಲ್ಲಿತ್ತು. ಆಗ ಈ ಕ್ಷೇತ್ರದಲ್ಲಿ ಬಳ್ಳಾರಿ, ರಾಯದುರ್ಗಾ, ಹೊಸಪೇಟೆ, ಹರಪನಹಳ್ಳಿ, ಕ್ಷೇತ್ರಗಳು ಒಳಪಟ್ಟಿದ್ದವು. 1956ರಲ್ಲಿ ಭಾಷಾವಾರು ಪ್ರಾಂತ ವಿಂಗಡನೆಯಾದ ಬಳಿಕ ಮೈಸೂರು ಪ್ರಾಂತಕ್ಕೂಳಪಟ್ಟಿತು. ಸಮಗ್ರ ಕರ್ನಾಟಕವಾದ ಬಳಿಕ ಜಿಲ್ಲೆಯ ಹೊಸಪೇಟೆ ತಾಲೂಕನ್ನು ಹೊರತುಪಡಿಸಿ ಹರಪನಹಳ್ಳಿ, ಸಿರುಗುಪ್ಪ, ಸಂಡೂರು, ಕೂಡ್ಲಿಗಿ, ಕೊಟ್ಟರು ಹಡಗಲಿ ಕ್ಷೇತ್ರಗಳು ಇದರ ವ್ಯಾಪ್ತಿಯಲ್ಲಿದ್ದವು.2008ರಲ್ಲಿ ಕ್ಷೇತ್ರ ವಿಂಗಡನೆಯಾದ ಬಳಿಕ ಈ ಕ್ಷೇತ್ರದಲ್ಲಿದ್ದ ಹರಪನಹಳ್ಳಿಯನ್ನು ದಾವಣಗೆರೆಗೆ, ಸಿರುಗುಪ್ಪವನ್ನು ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿಸಿ, ವಿಜಯನಗರವನ್ನು ಬಳ್ಳಾರಿ ಕ್ಷೇತ್ರಕ್ಕೆ ಸೇರಿಸಲಾಯಿತು ಮತ್ತು ಸಾಮನ್ಯವಾಗಿದ್ದ ಕ್ಷೇತ್ರ ಪರಿಶಿಷ್ಟ ವರ್ಗಕ್ಕೆ ಮೀಸಲಾಯ್ತು.
ಬಳ್ಳಾರಿ ಕ್ಷೇತ್ರದ ಮತದಾರರು ಆರಂಭದಿಂದ 1999 ರ ವೆರೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾ ಬಂದಿದ್ದರು. ಆರಂಭದ ಮೂರು ಚುನಾವಣೆಯಲ್ಲಿ ಟೇಕೂರ್ ಸುಬ್ರಮಣ್ಯಂ ಅವರು ಸತತವಾಗಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದರು. ನಂತರ ದೆಹಲಿ ಮೂಲದ ಡಾ.ವಿ.ಕೆ.ಆರ್.ವಿ ರಾವ್ ಎರೆಡು ಬಾರಿ ಈ ಕ್ಷೇತ್ರದಲ್ಲಿ ಗೆದ್ದು ಕೇಂದ್ರದಲ್ಲಿ ಸಚಿವರೂ ಆಗಿದ್ದರು. ಬಳಿಕ ಕೆ.ಎಸ್.ವೀರಭದ್ರಪ್ಪ, ಸಂಡೂರು ರಾಜಮನೆತನದ ಆರ್.ವೈ.ಘೋರ್ಪಡೆ ಅವರು ತಲಾ ಒಮ್ಮೆ, ಆ ಬಳಿಕ ಬಸವರಾಜೇಶ್ವರಿ ಅವರು ಸತತ ಮೂರು ಬಾರಿ ಕಾಂಗ್ರೆಸ್‍ನಿಂದಲೇ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದರಲ್ಲದೆ. ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ಸಚಿವೆಯಾಗಿದ್ದರು.
ಆನಂತರ ಕೆ.ಸಿ.ಕೊಂಡಯ್ಯ ಅವರು 196,1998 ರ ಚುನಾವಣೆಯಲ್ಲಿ ಆಯ್ಕೆಯಾದರೆ. 1999 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋನಿಯಾಗಾಂಧಿ. ಬಿಜೆಪಿ ಅಭ್ಯರ್ಥಿಯಾಗಿ ಸುಷ್ಮಾ ಸ್ವರಾಜ್ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರಿಂದ ಇದು ವಿಶ್ವ ಗಮನ ಸೆಳೆದಿತ್ತು. ಗೆದ್ದ ಸೋನಿಯಾ ಅವರು ರಾಜೀನಾಮೆ ನೀಡಿದ್ದರಿಂದ 2000 ದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ನ ಕೋಳೂರು ಬಸವನಗೌಡ ಆಯ್ಕೆಯಾದರು,
ಈ ವರೆಗೆ ಕಾಗ್ರೆಸ್ ಅಭ್ಯರ್ಥಿಗಳನ್ನೆ ಆಯ್ಕೆ ಮಾಡಿಕೊಂಡು ಬಂದಿದ್ದ ಕ್ಷೇತ್ರದ ಮತದಾರರು. 2018 ರಲ್ಲಿ ಆರು ತಿಂಗಳ ಅವಧೀಗೆ ನಡೆದ ಉಪ ಚುನಾವಣೆಯನ್ನು ಬಿಟ್ಟರೆ. 2004 ರಿಂದ ಮನಸ್ಸು ಬದಲಿಸಿದ ನಂತರ ಇಲ್ಲಿ  ಬಿಜೆಪಿ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತ ಬಂದಿದ್ದಾರೆ.
ಬಿಜೆಪಿಯಿಂದ 2004 ರಲ್ಲಿ ಜಿ.ಕರುಣಾಕರ ರೆಡ್ಡಿ, 2008 ರಲ್ಲಿ ಜೆ,ಶಾಂತಾ, 2014 ರಲ್ಲಿ ಬಿ,ಶ್ರೀರಾಮುಲು, 2019 ರಲ್ಲಿ ವೈ ದೇವೇಂದ್ರಪ್ಪ ಸಂಸದರಾಗಿ ಆಯ್ಕೆಯಾಗಿದ್ದರು.ಹಾಲಿ ಸಂಸದರಾಗಿ ಬಿಜೆಪಿಯ ವೈ.ದೇವೇಂದ್ರಪ್ಪ ಇದ್ದಾರೆ. ಆದರೂ ಬಿಜೆಪಿ ಶ್ರೀರಾಮುಲು ಅವರನ್ನು ಎರಡನೇ ಬಾರಿಗೆ ಲೋಕಸಭೆಗೆ ಕಳಿಸಲು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. 
ಪ್ರಚಾರ:
ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಮೊದಲಾದ ಗಣ್ಯರು ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳ ಪರ ಬಹಿರಂಗ ಸಭೆತಗಳ ಮೂಲಕ  ಮತಯಾಚನೆ ಮಾಡಿದ್ದಾರೆ.
ನೆರವಾಗಬಹುದು:
ಆರು ವಿಧಾನಸಭಾ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇ.ತುಕರಾಂ ತಾವು ನಾಲ್ಕು ಬಾರಿ ಸಂಡೂರು ಶಾಸಕರಾಗಿ ಆ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿಯನ್ನು  ಪ್ರಸ್ತಾಪಿಸಿ ಮತಯಾಚನೆ ಮಾಡುತ್ತಿದ್ದಾರೆ. ರಾಜ್ಯ ಸರಕಾರ ನೀಡಿರುವ ಗ್ಯಾರೆಂಟಿ ಯೋಜನೆಗಳು ಇವರ ಗೆಲುವಿಗೆ ನೆರವಾಗಬಹುದು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಿ.ಶ್ರೀರಾಮುಲು ಓರ್ವ ವಿಧಾನಸಭಾ ಸದಸ್ಯನ ಬೆಂಬಲದಿಂದಲೇ, ಕೇಂದ್ರ ಸರಕಾರ ಜಿಲ್ಲೆಗೆ ನೀಡಿರುವ ಯೋಜನೆಗಳು ಮತ್ತು ತಾವು ಈ ಈ ಹಿಂದೆ ಸಚಿವರಾಗಿ ಕ್ಷೇತ್ರಕ್ಕೆ ಮಾಡಿರುವ ಅಬಿವೃದ್ದಿ ಕಾರ್ಯಗಳನ್ನು ತಿಳಿಸುತ್ತ ಮತಯಾಚನೆ ಮಾಡುತ್ತಿದ್ದಾರೆ. ಪಕ್ಷದ ಸಂಘಟನೆ ಮತ್ತು ಮೋದಿ ಅವರ ನಾಮದ ಅಲೆ ಇವರ ಗೆಲುವಿಗೆ ಸಹಕಾರಿಯಾಗಬಲ್ಲದು.
ಕಳೆದ ಚುನಾವಣೆಯಲ್ಲಿ:
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವೈ.ದೇವೇಂದ್ರಪ್ಪ 6 ಲಕ್ಷದ 16 ಸಾವಿರದ 388 (ಶೇ.50.44) ಮತಗಳನ್ನು ಪಡೆದರೆ, ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ವಿ.ಎಸ್.ಉಗ್ರಪ್ಪ 5 ಲಕ್ಷ 60 ಸಾವಿರದ 681 (ಶೇ45.89) ಮತ ಪಡೆದಿದ್ದರು. ಬಿಜೆಪಿಯ ದೇವೇಂದ್ರಪ್ಪ 55 ಸಾವಿರದ 707 ಮತಗಳ ಅಂತರದಿಂದ ಆಯ್ಕೆಯಾಗಿದ್ದರು.
ಗೊತ್ತಾಗಲಿದೆ:
ಕ್ಷೇತ್ರದ ಮತದಾರ 2004 ರಿಂದ ಈ ವರೆಗೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನೆ ಆಯ್ಕೆ ಮಾಡುತ್ತಾ ಬಂದಿದ್ದು.  ಮೇ 7 ರಂದು ನಡೆಯುವ ಮತದಾನದಲ್ಲಿ ಯಾರಿಗೆ ಗೆಲುವಿನ ಮತ ಮುದ್ರೆ ಒತ್ತಲಿದ್ದಾರೆ. 2024ರ ಈ ಚುನಾವಣೆಯಲ್ಲಿ ಯಾರನ್ನು ಲೋಕಸಭೆಗೆ ಕಳುಹಿಸಲಿದ್ದಾರೆ ಎನ್ನೋದು ಜೂನ್ 4 ರ ಮತ ಎಣಿಕೆ ನಂತರ ಗೊತ್ತಾಗಲಿದೆ.
ಕ್ಷೇತ್ರ ವ್ಯಾಪ್ತಿ:
ಈ ಕ್ಷೇತ್ರದಲ್ಲಿ ಈಗ ಬಳ್ಳಾರಿ ಜಿಲ್ಲೆಯ ಬಳ್ಳಾರಿ ನಗರ ಸಂಡೂರು,ಕಂಪ್ಲಿ, ಬಳ್ಳಾರಿ ಗ್ರಾಮೀಣ,  ಮತ್ತು ವಿಜಯನಗರ ಜಿಲ್ಲೆಂiಯ ಕೂಡ್ಲಿಗಿ ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ಮತ್ತು ವಿಜಯನಗರ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಇವುಗಳಲ್ಲಿ 2 ಸಾಮಾನ್ಯ 2 ಪರಿಶಿಷ್ಟ ಜಾತಿ ಮತ್ತು 4 ಪರಿಶಿಷ್ಟ ವರ್ಗದ ಕ್ಷೇತ್ರಗಳಾಗಿವೆ. ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ರಲ್ಲಿ ಕಾಂಗ್ರೆಸ್, ಓರ್ವ ಜೆಡಿಎಸ್, ಮತ್ತೊರ್ವ ಬಿಜೆಪಿ ಶಾಸಕರಿದ್ದಾರೆ. ಬಸವರಾಜೇಶ್ವರಿ, ಸೋನಿಯಾಗಾಂಧಿ, ಜೆ.ಶಾಂತಾ ಮಹಿಳಾ ಸಂಸದರಾಗಿ ಆಯ್ಕೆಯಾಗಿದ್ದ, ಮಹಿಳಾ ಮತದಾರರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಈ ಬಾರಿ ಮಹಿಳಾ ಅಭ್ಯರ್ಥಿಗಳೇ ಕಣದಲ್ಲಿ ಇಲ್ಲವಾಗಿದೆ.
ಕಣದಲ್ಲಿರುವವರು:
ಸಧ್ಯ ಈಗ ಚುನಾವಣ ಕಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹಾಲಿ ಸಂಡೂರು ಶಾಸಕ  ಈ.ತುಕಾರಾಮ್, ಬಿಜೆಪಿಯಿಂದ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ನಡುವೆ ನೇರ ಸ್ಪರ್ಧೆ ಇದೆ.
ಉಳಿದಂತೆ ಬಹುಜನ ಸಮಾಜ ಪಾರ್ಟಿಯ ವಾಲ್ಮೀಕಿ ಕೃಷ್ಣಪ್ಪ,  ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಸಿ.ಚನ್ನವೀರ, ಎಸ್ಯುಸಿಐ ಪಕ್ಷದ ಎ.ದೇವದಾಸ್, ಪ್ರಹರ್ ಜನಶಕ್ತಿ ಪಾರ್ಟಿಯ ಮಂಜಪ್ಪ, ನವಭಾರತ್ ಸೇನ ಪಕ್ಷದ ಜಿ.ಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿಗಳಾದ ಅರುಣ್ ಎಸ್ ಹಿರೇಹಾಳ್, ವೈ.ಪಂಪಾಪತಿ, ವೀರೇಶ ಅಂತಿಮ ಕಣದಲ್ಲಿರುವ  8 ಜನ ಅಭ್ಯರ್ಥಿಗಳಾಗಿದ್ದಾರೆ.
ಮತದಾನಕ್ಕೆ ವ್ಯವಸ್ಥೆ:
ಬೇಸಿಗೆ ಬಿಸಿಲಿರುವುದರಿಂದ ಮತದಾನಕ್ಕೆ ಬರುವ ಜನತೆಗೆ ಬಿಸಿಲಿನಿಂದ ರಕ್ಷಣೆಗೆ ಮತಗಟ್ಟೆಗಳ ಮುಂದೆ ಶ್ಯಾಮಿಯಾನ ಕುಡಿಯುವ ನೀರಿನ ವ್ಯವಸ್ಥೆ  ಮಾಡಲಾಗುತ್ತಿದೆ. 40 ಸಖಿ, 12 ಎಥ್ನಿಕ್ ಹಾಗು ಯುವ,ಥೀಮ್ ಆಧಾರಿತ, ವಿಶೇಷಚೇತನರ ತಲಾ 8 ಮತಗಟ್ಟೆ ಕೇಂದ್ರಗಳು ಸೇರಿ ಒಟ್ಟು 1972 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಮೇ 7 ರಂದು ಮತದಾನ ನಡೆಯಲಿದೆ.
ಕ್ಷೇತ್ರದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ಈಗಾಗಲೇ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋೀಜಿಸಿ ಮತದಾರರ ಗಮನ ಸೆಳೆದಿದೆ. 920022 ಪುರುಷ, 945053 ಮಹಿಳೆ  ಹಾಗೂ 266 ಇತರೆ ಅಲ್ಪಸಂಖ್ಯಾತ ಲಿಂಗತ್ವ ಮತದಾರರು ಸೇರಿ ಒಟ್ಟು 1865341 ಮತದಾರರಿದ್ದಾರೆ. ಇವರಲ್ಲಿ 53169 ಯುವ 24841 ವಿಶೇಷಚೇನ, 3285 ಜನ 85 ವರ್ಷ ಮೇಲ್ಪಟ್ಟ ವಯಸ್ಕ ಮತದಾರರಿದ್ದಾರೆ.
ಮತಗಟ್ಟೆಗೆ ಬರಲಾಗದ 85 ವರ್ಷ ಮೇಲ್ಪಟ್ಟ ವೃದ್ದರ ಮತ್ತು ವಿಕಲಚೇತನರ ಮತದಾನ ಪ್ರಕರಿಯೆ ಮುಗಿದಿದೆ. ಮತದಾಣ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಿಬ್ಬಮದಿ ಮತ್ತು ಅಧಿಕಾರಿಗಳಿಗೆ ಅಂಚೆ ಮತದಾನ ಮಾಡಲು ಇಂದಿನಿಂದ ಡಿಸಿ ಕಚೇರಿಯ ಗಾಂಧೀ ಭವನದಲ್ಲಿ ವ್ಯವಸ್ಥೆ ಮಾಡಿದೆ.