ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ: ಕಮೀಷನರ್ ಆರ್.ಚೇತನ್

ಕಲಬುರಗಿ,ಮೇ.15-ಹಣಕ್ಕೆ ಬೇಡಿಕೆ ಇಟ್ಟು ಹಳೆಯ ಕಾರುಗಳನ್ನು ಮಾರಾಟ ಮಾಡುವ ಮೂವರು ವ್ಯಾಪಾರಿಗಳನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಬೆತ್ತಲೆಗೊಳಿಸಿ ಚಿತ್ರಹಿಂಸೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ದೊಡ್ಡಮನಿ, ಇಮ್ರಾನ್ ಸೇರಿ 7 ಜನರನ್ನು ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ನಗರ ಪೊಲೀಸ್ ಆಯುಕ್ತ ಆರ್.ಚೇತನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮೂವರು ಸಂತ್ರಸ್ತರನ್ನು ರಕ್ಷಣೆ ಮಾಡಿದ್ದಾರೆ ಎಂದು ತಿಳಿಸಿದರು.
2023ರಲ್ಲಿ ಅಪಘಾತದಲ್ಲಿ 48 ಸಾವು
ಕಳೆದ 2023ರ ಜನೆವರಿ 23 ರಿಂದ ಮೇ.23 ರವರೆಗೆ ನಗರ ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳ ಬಗ್ಗೆ ವಿವರಣೆ ನೀಡಿದ ಅವರು, ಈ ಅವಧಿಯಲ್ಲಿ 147 ಅಪಘಾತ ಪ್ರಕರಣಗಳು ನಡೆದಿದ್ದು, 97 ಜನರು ಗಾಯಗೊಂಡಿದ್ದರೆ, 48 ಜನರು ಸಾವನ್ನಪ್ಪಿದ್ದಾರೆ. 17 ಮೊಸದ ಪ್ರಕರಣ 17, 21 ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣ, ಗಂಡನಿಂದ ಹಲ್ಲೆಯಾದ 30 ಪ್ರಕರಣ, 42 ರಾತ್ರಿ ಕಳ್ಳತನ ಪ್ರಕರಣ, 13 ಹಗಲು ಕಳ್ಳತನ ಪ್ರಕರಣ, 18 ಕೊಲೆಯತ್ನ ಪ್ರಕರಣ, 3 ಡಕಾಯಿತಿ ಪ್ರಕರಣ, 2 ವರದಕ್ಷಿಣೆ ಸಾವು ಪ್ರಕರಣ, 13 ಕೊಲೆ ಪ್ರಕರಣ, 13 ಮಾದಕ ದ್ರವ್ಯ ಪ್ರಕರಣ, 7 ಪೋಸ್ಕೊ ಪ್ರಕರಣ, 5 ಅತ್ಯಾಚಾರ ಪ್ರಕರಣ, 19 ಸುಲಿಗೆ ಪ್ರಕರಣ, 173 ಕಳ್ಳತನ ಪ್ರಕರಣ, 6 ಸೈಬರ್ ಕ್ರೈಂ ಪ್ರಕರಣ ನಡೆದಿವೆ. 2024ರ ಜನೆವರಿ 24 ರಿಂದ ಮೇ.15 ರವರೆಗೆ 27 ರಾತ್ರಿ ಕಳ್ಳತನ ಪ್ರಕರಣ, 5 ಹಗಲು ಕಳ್ಳತನ ಪ್ರಕರಣ, 15 ಕೊಲೆಯತ್ನ ಪ್ರಕರಣ, 25 ಮೋಸದ ಪ್ರಕರಣ, 71 ಹಲ್ಲೆ ಪ್ರಕರಣ, 37 ಗಂಡನಿಂದ ಕಿರುಕುಳ ಪ್ರಕರಣ, 129 ಅಪಘಾತ ಪ್ರಕರಣ, 33 ಅಪಘಾತದಲ್ಲಿ ಸಾವು ಸಂಭವಿಸಿದ ಪ್ರಕರಣ, 9 ಕೊಲೆ ಪ್ರಕರಣ, 6 ಮಾದಕ ದ್ರವ್ಯ ಪ್ರಕರಣ, 6 ಪೋಸ್ಕೊ ಪ್ರಕರಣ, 16 ಸುಲಿಗೆ ಪ್ರಕರಣ, 104 ಕಳ್ಳತನ ಪ್ರಕರಣ, 1 ಅತ್ಯಾಚಾರ ಪ್ರಕರಣ ನಡೆದಿವೆ ಎಂದು ತಿಳಸಿದರು.
2024ರ ಜನೆವರಿಯಿಮದ ಮೇ.15 ರವರೆಗೆ ಯಾವುದೇ ವರದಕ್ಷಿಣೆ ಸಾವು ಪ್ರಕರಣ ನಡೆದಿಲ್ಲ ಎಂದು ಅವರು ತಿಳಿಸಿದರು.
ಡಿಸಿಪಿ ಕನಿಕಾ ಸಿಕ್ರಿವಾಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.