ಯಾಪಲದಿನ್ನಿ ಶಾಲೆ : ರಾಜ್ಯೋತ್ಸವಕ್ಕೆ ಅಪಮಾನ

ರಾಯಚೂರು.ನ.೦೧- ತಾಲೂಕಿನ ಯಾಪಲದಿನ್ನಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಅಪಮಾನ ಮಾಡಿದ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಪ್ರತಿಭಟನೆ ನಡೆಸಿ, ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು.
ರಾಜ್ಯೋತ್ಸವದ ಅಂಗವಾಗಿ ಇಂದು ರಾಜ್ಯಾದ್ಯಂತ ಕಾರ್ಯಕ್ರಮ ನಿರ್ವಹಿಸಲಾಗುತ್ತಿದೆ. ಆದರೆ, ಯಾಪಲದಿನ್ನಿ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣ ಮತ್ತಿತರ ಕಾರ್ಯ ನಿರ್ವಹಿಸದಿರುವುದನ್ನು ತೀವ್ರವಾಗಿ ವಿರೋಧಿಸಿದ ಅಲ್ಲಿಯ ಜನರು ಶಾಲೆಯ ಮುಂದೆ ಧರಣಿ ನಡೆಸಿದರು. ಪ್ರತಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಮುಖ್ಯಗುರುಗಳು ಇದೇ ರೀತಿಯಲ್ಲಿ ನಿರ್ಲಕ್ಷ್ಯಿಸುತ್ತಾರೆ. ಪ್ರತಿ ನಿತ್ಯ ಶಾಲೆಗೆ ತಡವಾಗಿ ಆಗಮಿಸುವುದು ವಾಡಿಕೆಯಾಗಿದೆ. ಪ್ರಾರ್ಥನೆ ಸಮಯಕ್ಕೆ ಒಮ್ಮೆಯೂ ಬಾರದಿರುವುದು ಇವರ ನಿರ್ಲಕ್ಷ್ಯಗೆ ನಿದರ್ಶನವಾಗಿದೆ. ಇವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.