ಯಾನಾಗುಂದಿಯಲ್ಲಿ ಜು. 3ರಂದು ಗುರುಪೂರ್ಣಿಮೆ

ಕಲಬುರಗಿ,ಜೂ.27: ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿಯಲ್ಲಿ ಜುಲೈ 3ರಂದು ಗುರುಪೂರ್ಣಿಮೆ ಹಾಗೂ ಮಹಾಯೋಗಿನಿ ರೂಪ ರಹಿತ ಅಹಿಂಸಾ ಯೋಗೇಶ್ವರ ವೀರಧರ್ಮಜ್ ಮಾತಾಜೀ ಅವರ 90ನೇ ಜನ್ಮ ದಿನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಟ್ರಸ್ಟ್‍ನ ಕಾರ್ಯದರ್ಶಿ ಶಿವಯ್ಯಸ್ವಾಮಿ ಹಾಗೂ ಸದಸ್ಯ ಸಿದ್ರಾಮಪ್ಪ ಸಣ್ಣೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತಾ ಮಾಣಿಕೇಶ್ವರಿ ದೇವಿಯವರು ಸುಮಾರು 75 ವರ್ಷಗಳ ಕಾಲ ಅನ್ನ, ನೀರು ಸೇವಿಸದೇ ಭಕ್ತರ ಕಲ್ಯಾಣಕ್ಕಾಗಿ ಮಹಾತಪಸ್ಸುಗೈದು ತ್ರಿಕಾಲ ಜ್ಞಾನಿಯಾದರು. ಅವರು ದೈವ ಸಂಭೂತರು. ಪರಮಾತ್ಮನ ಅವತಾರವಾಗಿ, ಯೋಗಿಯಾಗಿ ಜಗತ್ತಿಗೆ ಬೆಳಕಾಗಿ ಬಂದವರು ಎಂದರು.
ಆಷಾಢ ಶುದ್ಧ ಜುಲೈ 3ರಂದು ಸೋಮವಾರ ಗುರುಪೂರ್ಣಿಮೆಯಂದು ಮಾತಾಜಿಯವರ ಜನ್ಮದಿನೋತ್ಸವ ಕಾರ್ಯಕ್ರಮ ಜರುಗಲಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಮಹಾನ್ಯಾಸ ಪೂರ್ವಕ ಮಹಾರುದ್ರಾಭಿಷೇಕದೊಂದಿಗೆ ಪಾದಪೂಜೆ ಕಾರ್ಯಕ್ರಮ ಜರುಗಲಿವೆ. ಸಾಯಂಕಾಲ 7 ಗಂಟೆಗೆ ರಥೋತ್ಸವ ಜರುಗಲಿದೆ. ಆದ್ದರಿಂದ ಸಕಲ ಸದ್ಬಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತಾಜಯವರ ಅನುಗ್ರಹ ಪಡೆಯಲು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಸೂರ್ಯಕಾಂತ್ ಅವರಾದಿ ಅವರು ಉಪಸ್ಥಿತರಿದ್ದರು.