
ಚಿಕ್ಕಬಳ್ಳಾಪುರ,ಸೆ.೫-ನಾಳೆ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಚಿಕ್ಕಬಳ್ಳಾಪುರ ನಗರದ ಎಂ ಜಿ ರಸ್ತೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯದಿಂದ ಜಾನಪದ ಕಲಾತಂಡಗಳಿಂದ ಬೃಹತ್ ಮರರವಣಿಗೆ ಹಮ್ಮಿಕೊಳ್ಳಲಾಗಿದ್ದು ಜಾತ್ಯಾತೀತ ಪಕ್ಷಾತೀತವಾಗಿ ಬಾಗವಹಿಸುವಂತೆ ಯಾದವ ಸಂಘದ ಮುಖಂಡ ಕೆ.ಎಂ.ಮುನೇಗೌಡ ಕರೆ ನೀಡಿದರು .
.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ತಾಲ್ಲೂಕು ಯಾದವ ಸಂಘದಿಂದ ಸುದ್ದಿಗೋಷ್ಟಿ ಹಮ್ಮಿಕೊಳ್ಳಲಾಗಿತ್ತು.ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಯಾದವ ಸಮಾಜದ ಮುಖಂಡ ಹಿರಿಯ ವಕೀಲ ಕೆ.ಎಂ ಮುನೇಗೌಡ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ವತಿಯಿಂದ ನಡೆಸುತ್ತಿರುವ ಶ್ರೀ ಕೃಷ್ಣ ಜಯಂತಿಗೆ ಯಾದವ ಕ್ಷೇಮಾಭಿವೃದ್ದಿ ಸಂಘ ಸಂಪೂರ್ಣ ಸಹಕಾರ ನೀಡುತ್ತಿದೆ ಎರಡು ಭಾಗಗಳಾಗಿದ್ದ ಯಾಧವ ಸಂಘ ಒಗ್ಗೂಡಿ ಒಂದೆ ವೇದಿಕೆಯಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ನಗರದ ಎಂ ಜಿ ರಸ್ತೆ ವೇಣುಗೋಪಾಲಸ್ವಾಮಿ ದೇವಾಸ್ಥಾನದ ಬಳಿ ಕಾರ್ಯಕ್ರಮ ಆಯೋಜಿಸಲಾಗಿದೆ ಇಲ್ಲಿಂದ ಜಾನಪದ ಕುಣಿತದೊಂದಿಗೆ ಮೆರವಣಿಗೆ ಪ್ರಾರಂಬವಾಗಿ ಇಲ್ಲಿಯೆ ಮುಕ್ತಾಯಗೊಳ್ಳಲಿದೆ ಜಾತಿಬೇದ ಪಕ್ಷಬೇದ ಮರೆತು ನಡೆಯುತ್ತಿರುವ ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಬಾಗವಹಿಸುವಂತೆ ಅವರು ಮನವಿ ಮಾಡಿದರು.
ದ್ದು ರಾಜ್ಯದಲ್ಲಿ ಹಿಂದುಳಿದ ಜನಾಂಗ ನಮಗೆ ವಿದ್ಯಾಬ್ಯಾಸ ಉದ್ಯೋಗ ಮತ್ತು ರಾಜಕೀಯದಲ್ಲೂ ಮೀಸಲಾತಿ ನೀಡಿ ಅಭಿವೃದ್ದಿಗೆ ಅವಕಾಶ ಮಾಡಿಕೊಡಿ ಅನ್ನುವುದೊಂದೆ ನಮ್ಮ ದ್ಯೇಯ ಉದ್ದೇಶ ಎಂದರು.