ಯಾದಗಿರ: ಅಹ್ಮದಿಯಾ ಮುಸ್ಲೀಮ ಅನ್ಸಾರುಲ್ಲಾಹರ ವಾರ್ಷಿಕ ಸಮಾವೇಶ

ಯಾದಗಿರ,ಜು.18- ಅಹ್ಮದಿಯಾ ಮುಸ್ಲಿಮರಿಗೆ ಖಿಲಾಫತ್ತಿನ ಸೌಭಾಗ್ಯ ಕಲ್ಪಿಸಿದ ಅಲ್ಲಾಹನಿಗೆ ಕೃತಜ್ಞತೆಯನ್ನು ಸಲ್ಲಿಸುವಂತೆ ಅಖಿಲ ಭಾರತ ಮಜ್ಲಿಸ್ ಅನ್ಸಾರುಲ್ಲಾಹ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಮೌಲ್ವಿ ಅತಾ ಉಲ್ ಮೂಜೀಬ್ ಲೋನ್ ಅವರು ಕರೆ ನೀಡಿದರು.
ನಗರದ ಮಜೀದ್ ಇ ಹಸನ್ ನಲ್ಲಿ ಅಹ್ಮದಿಯಾ ಮುಸ್ಲಿಮ್ ಸಂಘಟನೆ ಆಯೋಜಿಸಿದ್ದ ಯಾದಗಿರ, ಕಲಬುರಗಿ, ರಾಯಚೂರು ಮತ್ತು ವಿಜಯಪುರ ನಾಲ್ಕು ಜಿಲ್ಲೆಗಳ ಮಜ್ಲಿಸ್ ಅನ್ಸಾರುಲ್ಲಾಹ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕುಟುಂಬದ ಮೇಲ್ವಿಚಾರಕರಾದ ಅನ್ಸಾರುಲ್ಲಾಹ ತಮ್ಮ ಮಕ್ಕಳು ದಾರಿ ತಪ್ಪದಂತೆ ತರಬೇತಿ ನೀಡಬೇಕು ಎಂದರು.
ನಮ್ಮ ನಡೆನುಡಿ ಮತ್ತು ದೈವಭಕ್ತಿ ಮಕ್ಕಳಿಗೆ ಆದಶ9 ಹಾಗೂ ಮಾದರಿಯಾಗಬೇಕು. ಎಲ್ಲರ ಒಳಿತಿಗಾಗಿ ಪ್ರಾಥಿ9ಸುವವನೇ ನಿಜವಾದ ದೈವಭಕ್ತನಾಗಿದ್ದಾನೆ ಎಂದರು.
ಮೌಲ್ವಿ ಶೇಖ ಬುರಾನ್ ಸಾಬ ವಿಜಾಪುರ ಅವರು ಮಾತನಾಡಿ, ಎಲ್ಲಾ ಧಮ9ಗಳನ್ನು ಧೃಡಿಕರಿಸುವ ಇಸ್ಲಾಮ ಜೀವಂತ ದೇವನನ್ನು ಪರಿಚಯಿಸುತ್ತದೆ ಮತ್ತು ಅವನೊಂದಿಗೆ ಸಂಪರ್ಕ ಕಲ್ಪಿಸುತ್ತದೆ ಎಂದರು.
ಅಲ್ಲಾಹನ ಪ್ರಥಮ ವಾಣಿ ಓದು ಎಂದಾಗಿದೆ, ನಿನ್ನನ್ನು ಸೃಷ್ಟಿಸಿದ ಅಲ್ಲಾಹನ ಹೆಸರಿನಲ್ಲಿ ಓದು, ಪಠಿಸು ಎಂಬ ಸಂದೇಶ ಶಿಕ್ಷಣಕ್ಕೆ ಮಹಾತ್ಮ ನೀಡುತ್ತದೆ ಎಂದು ಮೌಲ್ವಿ ಸಮೀರ್ ಅಹ್ಮದ್ ಸಾಹೇಬರು ಹೇಳಿದರು.
ನಗರ ಜಿಲ್ಲಾಧ್ಯಕ್ಷ ಫಜಲ್ ಅಹ್ಮದ್ ಸೌದಾಗರ ಮಾತನಾಡಿ, ಪ್ರವಾದಿಯ ಕಾಯ9ಕ್ರಮ ಗಳನ್ನು ಮುನ್ನಡೆಸುವ ಖಲೀಫಾರೊಂದಿಗೆ ನಿಷ್ಠೆಯ ದೀಕ್ಷೆ ಪಡೆದ ನಾವು ಭಾಗ್ಯಶಾಲಿಗಳು. ನೇತಾರ ನಿಲ್ಲದ ಸಮಾಜ ಅದಂಪತನ ಗೊಳ್ಳುತ್ತದೆ ಎಂದರು.
ಪವಿತ್ರ ಕುರಾನ್ ಪಠಣದೊಂದಿಗೆ ಹಾಗೂ ತಾಜೂದ್ ವಿಷೇಶ ಪ್ರಾಥ9ನೆಯೊಂದಿಗೆ ಪ್ರಾರಂಭವಾದ ಕಾಯ9ಕ್ರಮದಲ್ಲಿ ಅನ್ಸಾರುಲ್ಲಾಹ ಧ್ವಜಾರೋಹಣ ನೆರವೇರಿಸಲಾಯಿತು.
ಧಾಮಿ9ಕ ಸೇರಿದಂತೆ ವಿವಿಧ ಕ್ರೀಡಾ ಸ್ಪಧೆ9ಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜಾವೇದ್ ಅಹ್ಮದ್ ನದೀಮ ಸಾಬರು, ವಾಷಿ9ಕ ವರದಿಯನ್ನು ಮಂಡಿಸಿದರು. ನಾಲ್ಕು ಜಿಲ್ಲೆಗಳಿಂದ 600 ಕ್ಕೂ ಹೆಚ್ಚು ಅನ್ಸಾರುಲ್ಲಾಹ ಪ್ರತಿನಿಧಿಗಳು ಭಾಗವಹಿಸಿದ್ದರು.
ಕಾಯ9ಕ್ರಮದಲ್ಲಿ ಯಾದಗಿರಿ ಜಿಲ್ಲಾಧ್ಯಕ್ಷ ಮೊಹ್ಮದ್ ಅಸದ್ ಸುಲ್ತಾನ್ ಗೌರಿ, ಪೆÇ್ರೀ. ಡಾ. ಅಬ್ದುಲ್ ರಬ್ ಉಸ್ತಾದ್, ಮೌಲ್ವಿ ತಯ್ಯಾಬ ಖಾನ್ ಸಾಬ, ಮೌಲ್ವಿ ಮಕ್ಬೂಲ್ ಅಹ್ಮದ್ ಸಾಬ, ನ್ಯಾಯವಾದಿ ಲಿಯಾಖತ ಫರೀದ್, ಸೈಯದ ಇಲ್ಯಾಸ್ ಸೇಠ್ ತಿಮ್ಮಾಪುರಿ, ಅಬ್ದುಲ್ ಮುಜೀಬ್ ಉಸ್ತಾದ್ ದೇವಾದುಗಾ9, ಸಾದತ ಅಹ್ಮದ ದೇವದುರ್ಗಾ, ವಸೀಮ ಅಹ್ಮದ್ ನೂರ್ ಸೇರಿದಂತೆ ಹಲವರಿದ್ದರು. ಸಾಮೂಹಿಕ ಪ್ರಾಥ9ನೆಯೊಂದಿಗೆ ಸಮಾವೇಶ ಮುಕ್ತಾಯ ಗೊಂಡಿತು.