ಯಾದಗಿರಿ ನಗರದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಗೆ ಹಿರಿಯ ಸಿವಿಲ್ ನ್ಯಾಯಾಧೀಶರ ಭೇಟಿ

ಯಾದಗಿರಿ : ಜು : 17 : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಸಾಹೀಲ್ ಅಹ್ಮದ್ ಎಸ್. ಕುನ್ನಿಭಾವಿ ಅವರು, ಯಾದಗಿರಿ ನಗರದ “ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ”ಗೆ ಜುಲೈ 14 ಗುರುವಾರದಂದು ಮಧ್ಯಾಹ್ನ ಭೇಟಿ ನೀಡಿ ವಿಧ್ಯಾರ್ಥಿಗಳ ಸಮಸ್ಯೆ ಆಲಿಸಿದರು.

 ಈ ಶಾಲೆಯ ಕಂಪೌಂಡವು ರಸ್ತೆಗಿಂತ ಕೆಳಗೆ ಇದ್ದು, ರಸ್ತೆಯಲ್ಲಿ ನಿಂತು ಕೆಲ ಪೆÇೀಲಿ ಹುಡುಗರು ಶೌಚಾಲಯಕ್ಕೆ ಬರುವ ಬಾಲಕಿಯರಿಗೆ ತೊಂದರೆ ನೀಡುತ್ತಿರುವ  ಬಗ್ಗೆ ಬಾಲಕಿಯರು ದೂರು ನೀಡಿರುತ್ತಾರೆ.
 ಈ ವಿಷಯದ ಕುರಿತು ಶಾಲೆಯ ಮುಖ್ಯಗುರುಗಳನ್ನು ವಿಚಾರಿಸಿದ ಅವರು, ಈ ವಿಷಯದ ಕುರಿತು ಈಗಾಗಲೇ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ತಿಳಿಸಲಾಗಿದ್ದು, ಆದರೂ ಯಾವುದೇ ಪ್ರಯೋಜನ ಆಗಿರುವುದಿಲ್ಲ ಎಂದು ತಿಳಿಸಿದ್ದಾರೆ.
 ಶಾಲಾ ಬಾಲಕಿಯರಿಗೆ ಆಗುತ್ತಿರುವ ಈ ತೊಂದರೆಯನ್ನು  ನ್ಯಾಯಾಧೀಶರು ಗಂಭೀರವಾಗಿ ಪರಿಗಣಿಸಿದ್ದು, ಈ ವಿಷಯದ ಕುರಿತು ಯಾದಗಿರಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಂದಿನ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಬಾಲಕಿಯರಿಗೆ ಆಗುತ್ತಿರುವ ತೊಂದರೆಯನ್ನು ಕೂಡಲೇ ಬಗೆಹರಿಸಲು ಹಿರಿಯ ಸಿವಿಲ್ ನ್ಯಾಯಾಧೀಶರು  ಸೂಚಿಸಿರುವದಾಗಿ   ಪ್ರಕಟಣೆಯಲ್ಲಿ ತಿಳಿಸಿದ್ದಾರೆ.